Thursday, June 12, 2025

ಯೋಗದಲ್ಲಿ ಬಳಸುವ ಒಂಬತ್ತು ತೆರನ ದೃಷ್ಟಿಗಳು!

ದೇಹಾಭಿಮಾನವಳಿದು, 
ಪರಶಿವಜ್ಞಾನವು ಸ್ವಾನುಭಾವಜ್ಞಾನವು ಒಂದೆಯಾಗಿ,
ಭಿನ್ನಜ್ಞಾನದ ಬನ್ನವಳಿದು ಅವಿರಳಜ್ಞಾನವಳವಟ್ಟಲ್ಲಿ 
ಮನವೆಲ್ಲೆಲ್ಲಿಗೆಯ್ದಿದರಲ್ಲಲ್ಲಿಯೇ ಶಿವನು ಸ್ವಯವದೆಂತೆಂದಡೆ, 
ಇದಕ್ಕೆ ಶ್ರುತಿ:
ದೇಹಾಭಿಮಾನೇ ಗಲಿತೇ ವಿಜ್ಞಾತೇಚ ಪದೇ ಶಿವೇ
ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಶಿವಃ ಸ್ವಯಂ
ಎಂದುದಾಗಿ, 
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ಸಚ್ಚಿದಾನಂದಭರಿತರು.
--- ಆದಯ್ಯ

"ಯತ್ರ ಯತ್ರ ಮನೋ ಯಾತಿ, ತತ್ರ ತತ್ರ ಶಿವಃ" ಎಂಬ ಶರಣರ ವಚನವಿದೆ.  "ಯತ್ರ ಯತ್ರ ಮನೋ ಯಾತಿ, ತತ್ರ ತತ್ರ ಪರಾಮೃತಮ್" (ಎಲ್ಲೆಲ್ಲಿ ಮನಸ್ಸು ಹೋಗುತ್ತದೆಯೋ, ಅಲ್ಲಲ್ಲಿ ಪರಮ ಅಮೃತ (ಅಥವಾ ಪರಮ ಸತ್ಯ/ಆನಂದ) ಇರುತ್ತದೆ) ಅನ್ನುವ ಸಾಲುಗಳಿವೆ.  "Where focus goes, energy flows", "Where attention goes, energy flows" ಅನ್ನುವ ಮಾತುಗಳಿವೆ. ಈ ತತ್ವವು ಶರಣರ ಶಿವಯೋಗ,  ಪತಂಜಲಿಯಯೋಗ, ಹಠಯೋಗ, ವೇದಾಂತ ಮತ್ತು ಇತರ ಭಾರತೀಯ ಆಧ್ಯಾತ್ಮಿಕ ಪರಂಪರೆಗಳಲ್ಲಿ ಆಳವಾಗಿ ಬೇರೂರಿದೆ.  "ಕೈಹೋದೆಡೆ ನೋಟ, ನೋಟದೆಡೆ ಮನ, ಮನವಿದ್ದೆಡೆ ಭಾವ, ಭಾವದಿಂದ ರಸ" ಎಂಬ ಅರ್ಥವುಳ್ಳ ಮಾತು ನಾಟ್ಯಶಾಸ್ತ್ರದಲ್ಲೂ ಇದೆ.    
ಯತೋ ಹಸ್ತಸ್ತತೋ ದೃಷ್ಟಿಃ, ಯತೋ ದೃಷ್ಟಿಸ್ತತೋ ಮನಃ |
ಯತೋ ಮನಸ್ತತೋ ಭಾವೋ, ಯತೋ ಭಾವಸ್ತತೋ ರಸಃ ||

ಯೋಗದಲ್ಲಿ "ದೃಷ್ಟಿ" ಎನ್ನುವುದನ್ನು Gaze Point (ನೋಟವನ್ನು ಒಂದು ನಿರ್ದಿಷ್ಟ ಬಿಂದುವಿನ ಮೇಲೆ ನೆಡುವುದು) ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಈ  "ದೃಷ್ಟಿ / Gaze Point" ಎಂಬ ಪರಿಕಲ್ಪನೆಗೆ ಬಹಳ ಮಹತ್ವವಿದೆ.  ಈ ದೃಷ್ಟಿ ಗಳನ್ನು ಯೋಗಾಸನಗಳ ಅಭ್ಯಾಸದ ಸಮಯದಲ್ಲಿ ಮತ್ತು ಧ್ಯಾನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತದೆ. 

ಪತಂಜಲಿಯ ಅಷ್ಟಾಂಗಯೋಗ ದಲ್ಲಿ ಬರುವ "ಧಾರಣ" ಹಂತವು 'ಮನಸ್ಸನ್ನು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವುದನ್ನು ಹೇಳುತ್ತದೆ. ಬಸವಾದಿ ಶರಣರು ಕೊಟ್ಟ ಲಿಂಗಾಂಗ ಯೋಗ / ಶಿವಯೋಗದ ಬುನಾದಿಯಲೂ  ಕೂಡ ಒಂದಷ್ಟು ದೃಷ್ಟಿಯೋಗ / ತ್ರಾಟಕಯೋಗದ ಅಂಶಗಳನ್ನು ಕಾಣಬಹುದು.  

ದೃಷ್ಟಿಯೋಗ ದಲ್ಲಿ ಉಲ್ಲೇಖಿಸಲಾದ 9 ವಿಧದ ನೋಟ / ದೃಷ್ಟಿಗಳು ಈ ಕೆಳಗಿನಂತಿವೆ. ಜೊತೆಯಲ್ಲಿ ಈ ದೃಷ್ಟಿ ಗಳನ್ನು ಬಳಸುವ ಕೆಲ ಯೋಗಾಸನಗಳ ಹೆಸರನ್ನೂ ಕೊಡಲಾಗಿದೆ.  

ಕ್ರ.ಸಂದೃಷ್ಟಿಯ ಹೆಸರುವಿವರಣೆ
ಸಂಬಂಧಿತ ಯೋಗಾಸನಗಳು
(3 ಉದಾಹರಣೆಗಳು)
1ಭ್ರೂಮಧ್ಯ ದೃಷ್ಟಿ
(Bhrumadhya Drishti)
ಹುಬ್ಬುಗಳ ನಡುವೆ
(ಮೂರನೇ ಕಣ್ಣಿನ ಸ್ಥಾನ)
ನೋಡುವುದು.
1. ಧ್ಯಾನಾಸನಗಳು (ಉದಾ: ಪದ್ಮಾಸನ, ಸುಖಾಸನ),
2. ಯೋಗ ನಿದ್ರಾಸನ,
3. ಸಿದ್ಧಾಸನ
2ನಾಸಾಗ್ರ ದೃಷ್ಟಿ
(Nasagra Drishti)
ಮೂಗಿನ ತುದಿಯನ್ನು
ನೋಡುವುದು.
1. ಚತುರಂಗ ದಂಡಾಸನ,
2. ಊರ್ಧ್ವ ಮುಖ ಶ್ವಾನಾಸನ,
3. ಪ್ರಸಾರಿತ ಪಾದೋತ್ತಾನಾಸನ
3ನಾಭಿ ಚಕ್ರ ದೃಷ್ಟಿ
(Nabhi Chakra Drishti)
ಹೊಕ್ಕುಳನ್ನು (ನಾಭಿ)
ನೋಡುವುದು.
1. ಅಧೋಮುಖ ಶ್ವಾನಾಸನ
(ಕೆಲವು ಆಸನಗಳಲ್ಲಿ ನಾಭಿ ಕಾಣದಿದ್ದಲ್ಲಿ
ನಾಸಾಗ್ರ ದೃಷ್ಟಿಯನ್ನು ಬಳಸಬಹುದು)
4ಹಸ್ತಾಗ್ರ ದೃಷ್ಟಿ
(Hastagra Drishti)
ಕೈಯ ತುದಿ ಅಥವಾ
ಅಂಗೈಯನ್ನು ನೋಡುವುದು.
1. ತ್ರಿಕೋನಾಸನ,
2. ಪರಿವೃತ್ತ ತ್ರಿಕೋನಾಸನ,
3. ವೀರಭದ್ರಾಸನ II
5ಅಂಗುಷ್ಠಮಧ್ಯ ದೃಷ್ಟಿ
(Angushthamadhya Drishti)
ಹೆಬ್ಬೆರಳುಗಳನ್ನು
ನೋಡುವುದು.
1. ಊರ್ಧ್ವ ಹಸ್ತಾಸನ,
2. ಉತ್ಕಟಾಸನ,
3. ಗರುಡಾಸನ
6ಪಾದಯೋರಗ್ರ ದೃಷ್ಟಿ
(Padayoragra Drishti)
ಕಾಲ್ಬೆರಳುಗಳನ್ನು
ನೋಡುವುದು.
1. ಪಶ್ಚಿಮೋತ್ತಾನಾಸನ,
2. ಜಾನು ಶೀರ್ಷಾಸನ,
3. ನಾವಾಸನ
7ಪಾರ್ಶ್ವ ದೃಷ್ಟಿ (ಬಲ)
(Parshva Drishti)
ಬಲಕ್ಕೆ ದೂರ
ನೋಡುವುದು.
1. ಅರ್ಧ ಮತ್ಸ್ಯೇಂದ್ರಾಸನ (ಬಲಕ್ಕೆ),
2. ಮರೀಚ್ಯಾಸನ (ಬಲಕ್ಕೆ),
3. ಭರದ್ವಾಜಾಸನ (ಬಲಕ್ಕೆ)
8ಪಾರ್ಶ್ವ ದೃಷ್ಟಿ (ಎಡ)
(Parshva Drishti)
ಎಡಕ್ಕೆ ದೂರ
ನೋಡುವುದು.
1. ಅರ್ಧ ಮತ್ಸ್ಯೇಂದ್ರಾಸನ (ಎಡಕ್ಕೆ),
2. ಮರೀಚ್ಯಾಸನ (ಎಡಕ್ಕೆ),
3. ಭರದ್ವಾಜಾಸನ (ಎಡಕ್ಕೆ)
9ಊರ್ಧ್ವ ದೃಷ್ಟಿ
(Urdhva Drishti)
ಮೇಲಕ್ಕೆ, ಆಕಾಶದ ಕಡೆಗೆ
ನೋಡುವುದು.
1. ವೀರಭದ್ರಾಸನ I,
2. ಅರ್ಧ ಚಂದ್ರಾಸನ,
3. ಉಭಯ ಪಾದಾಂಗುಷ್ಠಾಸನ


ದೃಷ್ಟಿ ಮತ್ತು ಧ್ಯಾನದ ನಂಟು: ಸಾರಾಂಶ

ದೃಷ್ಟಿ ಮತ್ತು ಧ್ಯಾನಗಳ ನಡುವೆ ಒಂದಕ್ಕೊಂದು ಆಳವಾದ ನಂಟಿದೆ. ದೃಷ್ಟಿಯು ಧ್ಯಾನವನ್ನು ಸಾಧಿಸಲು ಮತ್ತು ಅದನ್ನು ಆಳವಾಗಿಸಲು ಒಂದು ಪ್ರಮುಖ ಸಾಧನವಾಗಿ ಕೆಲಸ ಮಾಡುತ್ತದೆ. 

  • ಏಕಾಗ್ರತೆ ಮತ್ತು ಮನಸ್ಸಿನ ನಿಯಂತ್ರಣ: ದೃಷ್ಟಿಯು ಒಂದು ನಿರ್ದಿಷ್ಟ ಬಿಂದುವಿನ ಮೇಲೆ ನೋಟವನ್ನು ಸ್ಥಿರಗೊಳಿಸುವ ಮೂಲಕ ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುತ್ತದೆ ಮತ್ತು ಏಕಾಗ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದು ಧ್ಯಾನದ ಸಮಯದಲ್ಲಿ ಚಿತ್ತವೃತ್ತಿಗಳನ್ನು ನಿರೋಧಿಸಲು ಅತ್ಯಗತ್ಯವಾಗಿದೆ.

  • ಪ್ರತ್ಯಾಹಾರ (ಇಂದ್ರಿಯಗಳ ಹಿಂತೆಗೆತ): ದೃಷ್ಟಿಯ ಅಭ್ಯಾಸವು ಇಂದ್ರಿಯಗಳನ್ನು ಬಾಹ್ಯ ವಿಷಯಗಳಿಂದ ಹಿಂತೆಗೆದುಕೊಳ್ಳಲು (ಪ್ರತ್ಯಾಹಾರ) ಸಹಾಯ ಮಾಡುತ್ತದೆ, ಇದರಿಂದ ಗಮನವು ಆಂತರಿಕ ಅನುಭವಗಳತ್ತ ಹರಿಯುತ್ತದೆ. ಇದು ಧ್ಯಾನದ ಆಳವಾದ ಸ್ಥಿತಿಗಳನ್ನು ತಲುಪಲು ಮುಖ್ಯವಾಗಿದೆ.

  • ಆಂತರಿಕ ಅರಿವು ಮತ್ತು ಸ್ವಾಧ್ಯಾಯ: ದೃಷ್ಟಿಯು ಹೊರಗಿನ ಗಮನವನ್ನು ಕಡಿಮೆ ಮಾಡಿ, ನಮ್ಮ ಒಳಗಿನ ಆಲೋಚನೆಗಳು, ಭಾವನೆಗಳು ಮತ್ತು ಸಂವೇದನೆಗಳನ್ನು ಗಮನಿಸಲು ಪ್ರೋತ್ಸಾಹಿಸುತ್ತದೆ. ಇದು ವರ್ತಮಾನ / ಈ  ಕ್ಷಣದಲ್ಲಿ ಅರಿವನ್ನು ಹೆಚ್ಚಿಸಿ, ಸ್ವಯಂ-ಅಧ್ಯಯನಕ್ಕೆ (ಸ್ವಾಧ್ಯಾಯ) ದಾರಿ ಮಾಡಿಕೊಡುತ್ತದೆ.

  • ಧ್ಯಾನದ ಪೂರ್ವಭಾವಿ ಸ್ಥಿತಿ: ದೃಷ್ಟಿಯನ್ನು ಸ್ಥಿರಗೊಳಿಸುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ, ಇದು ಧ್ಯಾನದ ಸ್ಥಿತಿಯನ್ನು ಸುಲಭವಾಗಿ ತಲುಪಲು ಒಂದು ಅನುಕೂಲಕರವಾದ ಪೂರ್ವಭಾವಿ ಸ್ಥಿತಿಯನ್ನು ಸೃಷ್ಟಿಸುತ್ತದೆ.

  • ಶಕ್ತಿಯ ಹರಿವಿನ ನಿರ್ದೇಶನ: "ಎಲ್ಲಿ ಗಮನ ಹೋಗುತ್ತದೆಯೋ, ಅಲ್ಲಿ ಶಕ್ತಿ ಹರಿಯುತ್ತದೆ" ಎಂಬ ತತ್ವದಂತೆ, ದೃಷ್ಟಿಯು ಪ್ರಾಣಶಕ್ತಿಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಕೇಂದ್ರೀಕರಿಸಿ channelize ಮಾಡಲು ಸಹಾಯ ಮಾಡುತ್ತದೆ. ಧ್ಯಾನದಲ್ಲಿ, ಈ ಕೇಂದ್ರೀಕೃತ ಶಕ್ತಿಯು ಆಂತರಿಕ ಜಾಗೃತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗುತ್ತದೆ.

  • ಮನಸ್ಸಿನ ಶಾಂತತೆ: ದೃಷ್ಟಿಯ ಅಭ್ಯಾಸವು ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸಿ, ನರಮಂಡಲವನ್ನು ಶಾಂತಗೊಳಿಸುತ್ತದೆ. ಇದು ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿಗೆ ಹೆಚ್ಚು ನಿರಾಳವಾದ ಮತ್ತು ಶಾಂತವಾದ ಭಾವನೆಯನ್ನು ನೀಡುತ್ತದೆ, ಇದು ಧ್ಯಾನಕ್ಕೆ ಅತ್ಯಂತ ಅನುಕೂಲಕರವಾಗಿದೆ.


No comments:

Post a Comment