ಭಾನುವಾರ, ನವೆಂಬರ್ 29, 2009

ಚುಳುಕು!

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ
ಕೂಡಲಸಂಗಮ ದೇವ.
ಎನ್ನ ಕರಸ್ಥಳಕೆ ಬಂದು ಚುಳುಕಾಗಿರಯ್ಯ


ಈ ವಚನವನ್ನು ಬೇರೆ ಬೇರೆ ಗಾಯಕರ ಧ್ವನಿಯಿಂದ ಇಲ್ಲಿ ಕೇಳಬಹುದು.


Get this widget
|
Track details
|
eSnips Social DNA

.................................

Get this widget | Track details | eSnips Social DNA

.................................

ಶನಿವಾರ, ನವೆಂಬರ್ 28, 2009

ಆರಿಗಾರೂ ಇಲ್ಲ,ಕೆಟ್ಟವಂಗೆ ಕೆಳೆಯಿಲ್ಲ


ಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯ
ಚಂದ್ರ ಕುಂದೆ ಕುಂದುವುದಯ್ಯಾ,

ಹುಣ್ಣಿಮೆಯಂದು ಸಮುದ್ರದಲ್ಲಿ ಅಬ್ಬರಗಳು ಸಹಜ. ಸಮುದ್ರ ನೀರಿನ ಮಟ್ಟ ಹೆಚ್ಚುತ್ತದೆ. ಚಂದ್ರ ಮರೆಯಾದಾಗ / ಅಮವಾಸ್ಯೆಯಲ್ಲಿ ಸಮುದ್ರದ ನೀರಿನ ಮಟ್ಟ ಕುಂದುತ್ತದೆ. ಚಂದ್ರನ ಗುರುತ್ವಾಕರ್ಷಣೆ ನೀರಿನ ಮಟ್ಟದ ಏರಿಳಿತಕ್ಕೆ ಕಾರಣ ವಾಗುತ್ತದೆ ಅನ್ನೋದು ತಿಳಿದ ವಿಷಯವೇ. 


ಚಂದ್ರ ( ಹುಣ್ಣಿಮೆಯೆಡೆಗೆ) ಬೆಳೆದಂತೆ ಸಮುದ್ರ (ರಾಜ?)ನೂ ಹಿಗ್ಗಿ ಏರಿಳಿಯುತ್ತಾನೆ. ಚಂದ್ರ ಕಳೆಗುಂದಿದರೆ (ಅಮಾವಾಸ್ಯೆ), ಸಾಗರ ರಾಜನೂ ಸಪ್ಪಗಾಗುತ್ತಾನೆ. ಹೀಗಿದೆ ಚಂದ್ರ ಸಮುದ್ರರ ಪ್ರೀತಿ. 


ಬಸವಣ್ಣನವರು ಈ ಪ್ರಕೃತಿ ಸಹಜ ಸಂಬಂಧದ ಗಮನಿಸುವಿಕೆಯನ್ನು ತನ್ನ ವಚನದಲ್ಲಿ, ಸೂಕ್ತ ಜಾಗದಲ್ಲಿ ಬಳಸಿಕೊಂಡಿರುವುದನ್ನು ನಾವು ಗಮನಿಸಬೇಕು.

ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯಾ ?

ಪುರಾಣಗಳಲ್ಲಿ ಅಗಸ್ತ್ಯ ಮುನಿ ಸಮುದ್ರವನ್ನು ಪೂರ್ತಿ ಕುಡಿದು ಬರಿದು ಮಾಡುವ ಕಥೆ ಬರುತ್ತೆ. ಅಂತ ಸಂದರ್ಭದಲ್ಲಿ ಸಮುದ್ರವನ್ನು ಉಳಿಸಲು ಚಂದ್ರ ಏನೂ ಮಾಡಲಿಲ್ಲ.   

ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ ಅಯ್ಯಾ ?

ಚಂದ್ರ ಗ್ರಹಣದಂದು ರಾಹು ಚಂದ್ರನನ್ನು ಹಿಡಿಯುತ್ತಾನೆ ಅನ್ನೋದು ಒಂದು ಕಥೆ. (ಇದಕ್ಕೆ ಬೇರೆ ವ್ಯಾಖ್ಯಾನ ಏನೇ ಇರಲಿ!). ಇಂತ ಗ್ರಹಣದಂದು ರಾಹು ಚಂದ್ರನನ್ನು ಹಿಡಿಯಲು ಬಂದಾಗ ಸಮುದ್ರ ರಾಜ ಚಂದ್ರನನ್ನು ಬಿಡಿಸಲು ಏನೂ  ಮಾಡಲಿಲ್ಲ. 
(ofcourse ನಮ್ಮ ಅನೇಕ ಋಷಿ ಮುನಿಗಳು ತಮ್ಮ ತಪ ಶಕ್ತಿ ಇಂದಲೋ ಅಥವಾ ತಮ್ಮ ವೀರ್ಯವೇ ಮುಂತಾದ ವಸ್ತುಗಳನ್ನು ದಾನ ಮಾಡಿಯೋ ಸೂರ್ಯನನ್ನು / ಚಂದ್ರನನ್ನು ಕೇತು / ರಾಹು ಗಳಿಂದ ಕಾಪಾಡಿರುವ ಕಥೆಗಳಿವೆ)


ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯಾ ಕೂಡಲಸಂಗಮದೇವ.


ಹೀಗೆ ಉದಾಹರಣೆ ಕೊಡುತ್ತ, ಯಾರಿಗೆ ಯಾರೂ ಇಲ್ಲ , ಕೆಟ್ಟವನಿಗೆ  ಒಳ್ಳೆಯ ಭವಿಷ್ಯವಿಲ್ಲ, ಅನ್ನುತ್ತಾ, ತುಂಬಾ ಪ್ರಾಕ್ಟಿಕಲ್ ಅರಿಕೆ ಯನ್ನು ಹೇಳುವ ಈ ವಚನ ವನ್ನು ಇಲ್ಲಿ ಕೇಳಬಹುದು.


Get this widget
|
Track details
|
eSnips Social DNAಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯಾ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯಾ ?
ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯಾ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯಾ ಕೂಡಲಸಂಗಮದೇವ.

 ...............................................ಕೆಳೆ ಅನ್ನುವ ಅದಕ್ಕೆ ಅರ್ಥ::ಕೆಳೆ (ನಾಮಪದ) ::  ೧ ಸ್ನೇಹ, ಗೆಳೆತನ, ಮೈತ್ರಿ ೨ ಸ್ನೇಹಿತ, ಗೆಳೆಯ, ಮಿತ್ರ


ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

companion (ನಾಮಪದ) :: ಕೇಳ (ಕೆಳದಿ; ಕೆಳೆಯ), ಒಡನಾಡಿ (ಒಡನಾಟ; ಒಡನಾಡು), ಹತ್ತಿಗ, ತಹಿಕಾರ
mate (ನಾಮಪದ) :: ಕೆಳ (ಕೆಳೆಯ, ಕೆಳದಿ), ಗಂಡ, ಹೆಂಡತಿ

ಮಂಗಳವಾರ, ನವೆಂಬರ್ 24, 2009

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ!

ನನಗೆ ಇದುವರಗೆ ತುಂಬ ಇಷ್ಟವಾದ ಸಾಹಿತ್ಯದಲ್ಲಿ ಭಾವಗೀತೆಗಳಿಗೆ ಬಹು ಮುಖ್ಯ ಜಾಗವಿದೆ.

ನನ್ನ ಇಷ್ಟದ 'ಕೆಲ' ಭಾವಗೀತೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ... ..ಕುವೆಂಪು.baa illi sambavisu...

ಸಾಹಿತ್ಯ :: 

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ..
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿಹೇ ಭವ ವಿದೂರಾ

ನಿತ್ಯವೂ ಅವತರಿಪ ಸತ್ಯಾವತಾರಾ 
ನಿತ್ಯವೂ ಅವತರಿಪ ಸತ್ಯಾವತಾರಾ

|| ಬಾ ಇಲ್ಲಿ ||

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದೆನ್ನಾ  ನರ ರೂಪ ಚೇತನದೀ...
ಮೂಡಿ ಬಂದೆನ್ನಾ ನರ ರೂಪ ಚೇತನದಿ
ನಾರಾಯಣತ್ವಕ್ಕೆ  ದಾರಿ ತೋರ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ

ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ ,
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ,

ಅವತರಿಸು ಬಾ...
ಅವತರಿಸು ಬಾ...

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ


|| ಬಾ ಇಲ್ಲಿ ||

|| ಬಾ ಇಲ್ಲಿ ||
..
ನನಗೆ ತುಂಬಾ ಇಷ್ಟವಾದ ಇನ್ನೂ ಕೆಲವು ಭಾವಗೀತೆಗಳು ಈ ಕೆಳಗಿನವು.
ಮುಂದೆ ಅವುಗಳನ್ನು ಕೇಳಿಸುತ್ತೇನೆ.

>ಆನಂದಮಯ ಈ ಜಗ ಹೃದಯ... ಕುವೆಂಪು
>ಬಾ ಫಾಲ್ಗುಣ ರವಿ ದರ್ಶನಕೆ.. ಕುವೆಂಪು
>ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು..
>ತನುವು ನಿನ್ನದು ಮನವು ನಿನ್ನದು ..
>ಗಿಳಿಯು ಪಂಜರದೊಳಿಲ್ಲ..
>ಹಾಲು ಹಳ್ಳ ಹರಿಯಲೀ
ಇನ್ನೂ ....
ಇವುಗಳನ್ನು ಅದೆಷ್ಟು ಬಾರಿ ಕೇಳಿದ್ದೇನೋ ನನಗೆ ಗೊತ್ತಿಲ್ಲ.

ಎಲ್ಲೊ ಹುಡುಕಿದೆ ಇಲ್ಲದ ದೇವರ, ಯಾವ ಮೋಹನ ಮುರುಳಿ ಕರೆಯಿತೋ ...ಕೆಲವು ಹಾಡುಗಾರರು ಹಾಡಿರುವುದು ಮಾತ್ರ ಇಷ್ಟ ಆಗುತ್ತೆ.

ಒಂದೊಂದರ ಬಗ್ಗೆ ಯೂ ಉದ್ದಕ್ಕೆ ಬರೀಬೇಕು ಅಂತ ಆಸೆ. ಸಮಯವಿಲ್ಲ.

ಆಗಾಗ್ಗೆ ಸಿಕ್ಕ ಇವುಗಳ ಲಿಂಕ್ ಇಲ್ಲಿ ಸೇರ್ಸುತ್ತೇನೆ.

ಗುರುವಾರ, ನವೆಂಬರ್ 19, 2009

ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ!

ತುಂಬಾ ಹಿಂದೆ .. ಬಹುಶ ನಾಲ್ಕಾರು ತಿಂಗಳಾಗಿರಬಹುದು .. ಆಕಾಶವಾಣಿಯಲ್ಲಿ ಬೆಳಿಗ್ಗೆ ಪ್ರಸಾರವಾಗ್ತಾ ಇದ್ದ ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ್ದೆ. ನಂತರ ಯಾವಾಗಲೋ ಅದನ್ನು ಕಂಪ್ಯೂಟರ್ ಗೆ ಕಾಪಿ ಮಾಡಿದ್ದೆ. ನನ್ನ ಮೊಬೈಲ್ ನಿಂದ ಇದು ಎಗರಿ ಹೋಗಿತ್ತು.

ಇಂದು ನನ್ನ ಕಂಪ್ಯೂಟರ್ ಅನ್ನು ತಡಕಾಡ್ತಾ ಇದ್ದಾಗ, ಆಕಸ್ಮಿಕವಾಗಿ ಈ ಕ್ಲಿಪ್ ಸಿಕ್ತು.


ಅಲ್ಲಮ ಪ್ರಭುಗಳ ವಚನಗಳು ನನಗೆ ತುಂಬಾ ಇಷ್ಟ. ಪರಮ ಅನುಭಾವದ ಮಾತುಗಳು ಅಲ್ಲಮನ ವಚನಗಳು.

ಈ clip ನ ವಚನಗಳು ಒಂದಕ್ಕಿಂತ ಒಂದು ಚೆಂದ. ಅದರಲ್ಲೂ  ಕೊನೆಯ (ಕೆಳಗಿನ) ವಚನ ತುಂಬಾ ಹಿಡಿಸಿತು.     Get this widget
|
     Track details 
|
        eSnips Social DNA   


ಅಜ್ಞಾನವೆಂಬ ತೊಟ್ಟಿಲ ಒಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ತಾ ಉಣಬಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ
ಗುಹೆಶ್ವರಲಿಂಗನ ಕಾಣಬಾರದು.