ಗುರುವಾರ, ಅಕ್ಟೋಬರ್ 10, 2024

ಇದ್ದವನ ಸುದ್ದಿಯ ಸತ್ತವ ಹೇಳಿ ಕಾಣದವ ಕೇಳಿ ಹೋದ

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷದ ರಸದ ಭಾವಿ ಹುಟ್ಟಿತ್ತು. 
ಆ ಭಾವಿಯೊಳಗೆ ಕಬ್ಬಿಣದ ಅದುರು ಹುಟ್ಟಿ ಸಿದ್ಧರಸವ ನುಂಗಿತ್ತು. 
ಇದ್ದವನ ಸುದ್ದಿಯ ಸತ್ತವ ಹೇಳಿ ಕಾಣದವ ಕೇಳಿ ಹೋದ. 
ಸದಾಶಿವಮೂರ್ತಿ ಲಿಂಗ ಬಚ್ಚ ಬಯಲು. 
:: ಅರುವಿನ ಮಾರಿತಂದೆ ಯ #ಬೆಡಗಿನ‌ವಚನ

ಟೀಕುಃ-- 
• ಬ್ರಹ್ಮರಂಧ್ರದ ಸಹಸ್ರದಳ ಕಮಲಕರ್ಣಿಕಾ ಮಧ್ಯದಲ್ಲಿ ಎಂಬುದೀಗ ಶ್ರೀಶೈಲದ ಮಧ್ಯದಲ್ಲಿ ಎಂಬ ಶಬ್ದಕ್ಕರ್ಥ.
• ಆ ಬ್ರಹ್ಮರಂಧ್ರದ ಸ್ಥಾನದಲ್ಲಿ ಪವಿತ್ರಸ್ವರೂಪವಾದ ಪರಮಾಮೃತ ಕೂಪ ಉದಿಸಿತ್ತಂಬುದೀಗ ಪರುಷ ರಸದ ಬಾವಿ ಹುಟ್ಟಿತ್ತೆಂಬ ಶಬ್ದಕೃರ್ಥ. 
• ಆ ಪರಮಾಮೃತ ಕೂಪವನೊಳಕೊಂಡಿರ್ಸ ಚಿದ್ಘನ ಲಿಂಗದಿಂದೆ ಅಜ್ಞಾನ ಸಂಬಂಧವಾದ ದೇಹಭಾವ ತೋರಿತ್ತು ಜೀವಂಗೆಂಬುದೀಗ 'ಆ ಭಾವಿ ಯೊಳೆಗೆ ಕಬ್ಬುಣದ ಅದರು ಹುಟ್ಟಿ' ಎಂಬ ಶಬ್ದಕ್ಟರ್ಥ. 
• ಅಂತಪ್ಪ ' ದೇಹವು ಆ ಪರಮಾಮೃತ, ರಸ ಬಿಂದುವ ನೊಳಕೊಂಡಿಹುದೆಂಬುದೀಗ 'ಸಿದ್ಧರಸವ ನುಂಗಿತ್ತು' ಎಂಬ ಶಬ್ದಕ್ಕರ್ಥ. 
• ಇಂತಪ್ಪ ದೇಹ ಸಂಬಂಧಿಯಾಗಿರ್ದ ಆತ್ಮಂಗೆ ಶಿವಕೃಪೆಯಿಂ ಸುಜ್ಞಾನೋದುಯವಾಗಲು ಕ್ರಿಯಾಘನ ಗುರುವಾಗಿ ಬಂದು ಅಂಗಕ್ಕೆ ಲಿಂಗಸಂಬಂಧವ ಮಾಡಿ ತನ್ನಾದಿಯನೆಚ್ಚರಿಸಿ ಸುಜ್ಞಾನ ಭೋಧೆಯ ಕೇಳಿ ಆ ಗುರುಮಾರ್ಗಾಚಾರವಿಡಿದು ಶಿವತತ್ವದತ್ತಲೆಯ್ದುತ್ತಿರ್ದನೆಂಬುದೀಗ ಕಾಣದವ ಕೇಳಿ ಹೋದ ಸದಾಶಿವಮೂರ್ತಿಲಿಂಗ ಬಚ್ಚ ಬಯಲು ಎಂಬ ಶಬ್ದಕ್ಕರ್ಥ.

ಸೆಲೆ: ಫಗು ಹಳಕಟ್ಟಿಯವರ "ಶಿವಶರಣರ ಸಂಕೀರ್ಣ ವಚನಗಳು" ಕೃತಿಯಿಂದ.