ಸೋಮವಾರ, ಡಿಸೆಂಬರ್ 20, 2021

ಬಸವರಾಜದೇವರ ರಗಳೆ - ೧೨ ನೇ ಸ್ಥಲಬಸವನ ಪುಣ್ಯಕೀರ್ತಿಲತೆ ಬೇರ್ವರಿಯಿತ್ತುರಗೇಂದ್ರಲೋಕದೊಳ್ 
ದೆಸೆಗಳನಗ್ಗ ಳಂ ಮುಸುಕಿ ಸರ್ವಿದುದಾಗಳೆ ಮರ್ತ್ಯಲೋಕದೊಳ್ | 
ಕುಸುಮಿತವಾಗಿ ಸೌರಭದ ಹೊಂಪುಳಿಯೋಯ್ತಮರೇಂದ್ರಲೋಕದೊಳ್ 
ಪಸರಿಸಿ ಪೂರಿತಾಮಳಸುಧಾಫಳವಾದುದು ರುದ್ರಲೋಕದೊಳ್ || 


೧* 
ಇಂತು ಬಸವರಾಜಂ ಸಕಲ ಜಗದ್ಭರಿತವಾದಗಣ್ಯಪುಣ್ಯಮಯ ಕೀರ್ತಿಯಂ ತಳೆದು, ಸಂಗಮೇಶ್ವರ ಶ್ರೀಪಾದಪಂಕಜ ನಿರಂತರ ಸೇವನಾಜನಿತ ಸುಖರಸಭರಿತ ಶುದ್ಧಶೈವಸರೋನಿಧಿ ತರಂಗಮಾಲಾ ನಿಮಗ್ನ ಚಿತ್ರನಾಗಿರ್ದ೦; 


ಅತ್ಯಲು ಕಳಿಂಗದೇಶದ ಮಹಾಭಕ್ತನಪ್ಪ ಮಹದೇವಿಶೆಟ್ಟಿಯ ರೊಂದುದಿನಂ ಲಿಂಗಾರ್ಚನಾತತ್ಪರ[0] ಅಮೃತಾನ್ನ ನಿವೇದಿತಪ್ರಸಾದ ಸ್ವೀಕೃತಕೃತ್ಯನಾಗಿ ಸುಖದೊಳಿಷ್ಟ ಸಮಯದೊಳು; ಒರ್ವ ಮಾಹೇ ಶ್ವರಂ ಪುರಾತನ ವಿರಚಿತಗದ್ಯ ಪದ್ಯಂಗಳಂ ಕೇಳಿಸುತ್ರಂ, ಬಸವರಾಜನ ಗೀತದೊಳು-ಬೇಡಿಬೇಡಿದ ಶರಣಂಗೆ ನೀಡದಿರ್ದಡೆ ತಲೆ ದಂಡ ಕೂಡಲಸಂಗ, ಅವಧಾರು-ಎಂಬ \ತಮಂ ಪಾಡೆ, ಮಹಾದೇವಿ ಸೆಟ್ಟಿಯರು ಕೇಳು ಕಂಪಿಸಿ ಕೌತುಕಂಗೊಂಡು ತಲೆಯಂ ತೂಗಿಓಹಿಲಯ್ಯ ಉದ್ಧಟಿಯ ಮಳೆಯರಾಜದೇವರ್ ಮೊದಲಾದರಿತೆಅದಿಂ ನುಡಿಯಲಮ್ಮರ್‌. ಇಂತು ನುಡಿವುದರಿದು. ಗೀತಾರ್ಥಮಂ ಪರೀಕ್ಷಿಪಂ. ಸತ್ತಿನೊಳು ಮಾಣಿಕಂ ಸತ್ತೆತ್ತಿನೊಳು ಮುತ್ತು ಪತ್ತೆತ್ತಿನೊಳು ಹೊಸ ಹೊಂಗಳಂ ಬೇಡಿ ಬಸವನಂ ಮುಂದುಗೆಡಿಸುವೆ-ಎಂಬ ಮನದಿ ಸತ್ಯ ಶರಣರ ಸಂಕುಳಂ ಬೆರಸಿ ಪೋಡಿಮುಟ್ಟು ಕೆಲವೆಡೆರೆಯು ಪಲವೂರ್ಗಳಂ ಕಳಿದು ನಡೆತಂದು ಮಂಗಳವಾಡದ ಪೊಱವೊಳಲ ಶಿವಪುರದೊಳು ಬಿಟ್ಟಿ ೧೦ ರಲು ; 
1 ಪೊಸರಸ (ಗ, ಈ.) 119/142 ಹನೆ ರಡನೆಯ ೮೩ ೨೦ ೩೦ . 


ಇತ್ತಲು ಸಂಗಮೇಶ್ವರಂ ಬಸವನ ಚಿತ್ರಮಂ ಪರೀಕ್ಷೆ ಪೆನೆಂದು, ಕೆಂಜೆಡೆ ಕುಂಡಲಂ ಬೆಳಸ ಕಣ್ಣು ಪೊಳೆವ ಕಪೋಳಂ ಸುಲಿಪ ಸುಧಾ ವದನಂ ಪುಲಿದೊವಲು ಭಸಿತಾಂಗಂ ಸಮುದಾಯವಾಗಿ, ಗಳಗಳನೆ ನಡೆತಂದು ಜಂಗಮಧ್ಯಾನನಿದ್ರಾಮುದ್ರೆಯೊಳಿರ್ದ ಬಸವನಂ ಪೊಡೆ ದೆಬ್ಬಿಸಿ-ಏಳೇಳು ಬಸವ, ಮುಂದಣಿಯದೆ ಗೀತಮಂ ಪಾಡಿ ತೊಡಕಂ ತಂದುಕೊಂಡೆ. ಕಳಿಂಗದೇಶದ ಮಹದೇವಸೆಟ್ಟಿಯೆಂಬ ನಿಚ್ಚಳಭಕ್ತಂ ಕನಕರತ್ನ ರಾಶಿಗಳಂ ಮನವಾರೆ ಬೇಡಲೆಂದು ಬಂದಿರ್ದಪಂ. ಎಂತು ಮಾಡಿದವೆ ? ಇನ್ನೆಂತು ಕೊಟ್ಟನೆ-ಎಂದು ಸಂಗಂ ಬೆಸಸಿದ ಮಾತಿಂಗೆ ಬಸವಂ ಮುಗುಳಗೆ ನಗುತ್ತೆ-ಅಂಜದಿರಂಜದಿರ್, ದೇವ. ಪರೀಕ್ಷೆಗೆ ತೆಅಹಿಲ್ಲಂ. ಕಟ್ಟಿದೆನೊರೆಯ, ಬಿಟ್ಟೆ ಜನ್ನಿ ಗೆಯ, ಓಡದಿರೋಡದಿರು. ಶರ ಣರ ಮನೆಯ ಬಿರುದಿನಂಕಕ್ಕೆ ಹಿಮ್ಮೆಟ್ಟದಿರೆಲೆ ದೇವ, ಎಲೆ ತಂದೆ, ಎಲೆಲೆ ಹಂದೆ, ಕೂಡಲಸಂಗ, 'ಸ್ವ'ಯವಾಗು ಸ್ವಯವಾಗು-ಎಂಬ ಗೀತದ ಪರಿ ಚೇದದುರವಣೆಗೆ ಸಂಗಂ ನಿಲತಮ್ಮದೆ ಮಗನ ನಿಷ್ಠೆಗೆ ಮೆಚ್ಚಿ ಅಂತರ್ಧಾ ನಕ್ಕೆ ಸಂದು ಕೈಲಾಸಕ್ಕೆ ಬಂದು-ಬಸವಣ್ಣಂ ಕೊಟ್ಟಿಲ್ಲದೆ ಮಾಣಂ. ಕೊಡುವ ಸಮಯಕ್ಕನುವಾಗಿರವೆಳ್ಳುಂ-ಎಂದು, ಮೇರುವಿನೊಳ ಜ್ಯೋತಿ ಬೆಟ್ಟದ ಹೊಚ್ಚ ಹೊಸಹೊಂಗಳಂ ಪದ್ಮರಾಗಂಗಳಂ ಮೌಕ್ತಿಕ ಜಮನನುಮಾಡಿಕೊಂಡು ಮಂಗಳವಾಡದ ಬಸವನ ಮಹಮನೆಯ ಮುಂದೆ ಪೋಗಿರೆಂದು ಕುಬೇರನಂ ಕಳುಪುತಿರ್ದ೦; 


ಇತ್ತಲು ಬಸವರಾಜಂ ದಂಡನಾಥಪಂಚಾನನಂ ಶಿವಶರ್‌ಣಂತಿ ನಿತ್ಯನೇಮಸಂಪನ್ನ೦ ಸನ್ನಿ ಚ್ಛಾಸಿರ ಮಕುಟವರ್ಧನ ಮಾಹೇಶ್ವರರ ನಡುವೆ ನೀಚಾಸನನಾಗಿ ಭಯಭಕ್ತಿಯಿಂದಿಪ್ಪಲ್ಲಿ, ಶರಣಕುಲದ ಕರ್ಣ ಪರಂಪರೆಯಿಂ ಮಹದೇವಸೆಟ್ಟಿಯರು ಬಂದರೆಂಬ ಸಂಭ್ರಮಮಂ ಕಂಡಿ ದಿರೆದ್ದು ಪಾದದೊಳು ಬಿದ್ದು ತೆಗೆದಪ್ಪಿ ಬಿಗಿಯಪ್ಪಿ ನಡೆತಂದು ಸಿಂಹಾ ಸನದೊಳಿರಿಸಿ ಪಾದಪದ್ಮ ಪ್ರಕ್ಷಾಳನಂಮಾಡಿ ಪಾದೋದಕಭರಿತ 
1 ತೃದ (ಕ) : # (ಖ.) : ಭ (ಖ.ಸ.) 3 
ಸರ್ವಾಂಗನಾಗಿ ಸಕಲಗಣಂಗಳೊರಸಿ ಲಿಂಗಾರ್ಚನಂಗೆಯ್ತಾ ರೋಗಿ ಸಲಿತ್ತು ಸಸಂತಿಯೊಳ್ ಪ್ರಸಾದಮಂ ಕೈಕೊಂಬಲ್ಲಿ, ಮಹಾದೇವಿಸೆಟ್ಟಿ ಯರಿದೆ ಸಮಯವೆಂದು-ಎಲೆ ಬಸವ, ಬೇಡಿದ ಶರಣರ್ಗಿಲೆನ್ನದೀವೆ ನೆಂಬ ಗೀತದೊಳಗಣ ಬಿಂಕದ ಬಿರುದಂ ಕೇಳು ನಿನ್ನೊಳೊಂದು ಬೇಡಿ ಬಂದಂ-ಎನುಂ ಮತ್ತಂ ಬೇಡಲಮ್ಮದೆ ಗದುಗದಿಸಿ ಬೆವರ್ತು, ಮೂವತ್ತೆತ್ತಿನೊಳು ತೊಗರಿ ಜೋಳದಕ್ಕಿ ಕಡಲೆಗಳನೊಡತೀವಿ ಕೊಡು ವುದೆನುತ್ತೆಂದು ಶಿವಪ್ರೇರಣೆಯಿಂ ನುಡಿಯೆ ; ಕೇಳು ಬಸವರಾಜಂ ಲಿಂಗಸದರ್ಥಂ ಜಂಗಮಸುರತರು ಸಾರಹೃದಯಂ ಧೀರೋದಾತ್ರಂ' ಸತ್ಯಸಂಧಂ ದಯಾನಿಧಿ ಶಿವಜ್ಞಾನಸಂಪನ್ನ೦ ದರಹಸಿತವದನಸರ ಸಿರುಹನಾಗುತ್ತೆ-ಭಯಂ ಬೇಡ, ಬೇಡಿ ಬೇಡಿ, ಕಳಿಂಗದೇಶದಿಂ ಪೋಲಿ ಮಡುವಾಗಳೆನ್ನಂ ಬೇಡಲೆಂದುದ್ಯೋಗಿಸಿದ ಮಾರ್ಗದೊಳೆ ಬೇಡು ವದು. ಕುಡವನ ಸಂಗಂ, ಬೇಡುವನಂ ಸಂಗಮದೇವಂ. ಎನಗೊಂದುಂ. ಭಾರವಿಲ್ಲ. ಅಂಜಬೇಡಂಜಬೇಡ ಎನೆ, ಮಹಾದೇವಿಶೆಟ್ಟಿಯರು ನಾಂಚಿ ತಲೆವಾಗಿರ್ದುದನಹುದು, ಬಸವರಾಜ ದಂಡನಾಥಚೂಡಾಮಣಿ ಭಕ್ತ ಜನಬಾಂಧವಂ ಸಂಗನಂ ಮೂದಲಿಸಿ ಶಿವಜ್ಞಾನದ ಮೇಲೆ ಚಿತ್ರವನಿಟ್ಟು ಆಚಾರದ ಮೇಲಹಂಕಾರವನಿಟ್ಟು ನಿಷ್ಠೆಯ ಮೇಲೆ ಬುದ್ಧಿಯನಿಟ್ಟು ಕಠಾರಿಯ ಮೇಲೆ ಕೈಯನಿ'[3]', ಮುನ್ನ ಕರಿಕಾಲ ಚೋಳಂಗೆ ಕು ದಂತೆ ಪೊನ್ನ ಮಳೆಯನೊಂದನೇ ಕರೆದೊಡೆ ಪುನರುಕ್ತವೆಂದು ಬಸವಣ್ಣಂ ಕೈಕೊಳ್ಳನೆಂದು ಮೇರುವಿನೊಳಕ್ಕೊತ್ತಿದ ಪೊಸಪೊನ್ನ ಸಿಂಡಿಗೆಯೊಡನೆ ಮಾಣಿಕದ ಮಳೆ ಮುತ್ತಿನ ಮಳೆ ಮೊದಲಾದ ನವರತ್ನ ವೃಷ್ಟಿಯಂ [ಶಿವಂ] ಕುದನೆಂಬಂತೆ, ರೋಹಣಾಚಲದ ಮಾಣಿಕಂಗಳಂ ತಾಮ್ರ ಪರ್ಣಿಯ ಮುತ್ತುಗಳುಂ ನಂದಿಯುಂಡಿಗೆಯ ಮಿಸುನಿಯ ಪೊಂಗಳುಂ ಪುರದೊಳ್ ತೀವಿದ ಶರಣರ್ಗೆ ನಿರ್ಮಳ ಸ್ವಾ ಸ್ಥಾನಮಾದ ಬಸವನ ಮನೆಯ ಮುಂದೆ ಸುರಿದು ರಾಸಿಯಾಗಿರೆ, ಕಂಡು ಬಸವರಾಜಂ ಪುಳಕದ ೬೦ 
1 - ಟ್ಟು (ಕ.ಖ.) ಡಿ (ಗ. ಈ.) ೮೫ ೭೦ 


ಹಿಂಡನಿಂಡೆಗೊಳಿಸುತಂ ನಡೆತಂದೆತ್ತುಗಳಂ ತೀವಿ ಸಂತೋಷದಿಂ ಮಹದೇವಸೆಟ್ಟಿಯರ ಮನವಂ ತಣಿಸಿ ಕಳಿಂಗದೇಶಕ್ಕವರಂ ಬೀಳ್ಕೊಟ್ಟು, ಬಸವ ಬಸವರಾಜಂ ಬಸವದೇವಂ ಸುಕೃತಸೂಚಕಾರಿಂ ಸುಖ ದೊಳಿಪ್ಪವಸರದೊಳು ; ಸಂಗಮೇಶ್ವರಂ ಬಸವಿದೇವನೊಡತಣ ಲೀಲಾವಿನೋದಕಲಹಮಂ ಕೈಕೊಂಡು-ಮನಮಂ ಮತ್ತೆ ಪರೀಕ್ಷಿಸೆಂ. ಮಹದೇವಸೆಟ್ಟಿಗೆ ಕನಕ ರತ್ನಂಗಳಂ ಕೊಡುವುದರಿದಲ್ಲ. ಕುಲವಧುಮಂ ಕೊಡುವುದರಿದು-ಎಂದು, ವಿಚಿತ್ರಮಹಿಮಂ ಕೆಲಬರ್ ಗಣೇಶ್ವರರು ಕರೆದು-ನೀವೆಲ್ಲರುಂ ಮರ್ತ್ಯ ಲೋಕದೊಳು ಮಂಗಳವಾಡದ ಸಣ್ಯಾಂಗನೆಯರೊಳೊರ್ಬರುಳಿಯದಂತೆ ಎಲ್ಲರ್ಗ೦ ಬೇಳಬೇಯೊಗಳನಿತ್ತಲಲ್ಲಿ ನೆರೆದಿಪ್ಪುದು-ಎಂದು ಬೆಸಸಿ ಕಳುಪಿ, ತಾನೊಂದು ವಿಟವೇಷಮಂ ತಳೆದನದೆಂತೆಂದಡೆ ಕುಸುಮಕುಲ[ದಪರಿಮಳಾದಕ್ಕೆಡೆಗೊಟ್ಟು ಮೇವ ಸಿರಿಮುಡಿಯೊಳು ನೀಲದರಮನೆಯ (?), ಸುಕುಮಾರನೆನಿಪ ಬಾಲ ಶಶಿಯಂ ಕೇಳಿಸುವ ಗಾಯಕರಂತೆ ಸುತ್ತಿ ಮುತ್ತಿ ಝೇಂಕಾರಂ ಗೊಂಬ ತುಂಬಿಯ ಪಂತಿಯಂ ಮುಸುಂಕಿಟ್ಟು ಪವಡಿಸುವ ಬಿಸುಗಣ್ಣ, ತೊ'[ಡಂಬೆಯಂ ತಪ್ಪಳಿಸುವ ಹೆಣ್ಣುಂಬಿಗಳಂತೆ ಲಲಾಟರಂಗದೊ ಳುಂಗುರಿಸಿ ಸಂಗಡದಿಂ ಕುಣಿವ ನೀಳಾಳಕಂಗಳ, ಅದಲ್ಲದೆಯುಂ ಪಡಿಯಂ ನೋಡಲ್ ಒಯಸಿ ನಡುವೆ ಪರಿಮಳದ ನಾವೆಯಂತಡ್ಡ ಮಿರ್ದ ನಾಸಿಕಮಂ ದಾಂಟಲಾಅದುಭಯಪಕ್ಷದಿಂ ಸುತ್ತಿ ಬಪ್ಪಾಸೆಯೊಳು ಬಟ್ಟೆಗೊಡುವುದೆಂದು ಕರ್ಣಾವತಂಸದಳಂಗಳ ಲಹಣಿಶ್ರೀಗೆ ಮೌಕ್ತಿ ಕಾವತಂಸಕಿರಣಚ್ಚಲದಿಂ ಚಾಮರಮನಿಕ್ಕುವಂತೆ ಗಂಡಮಂಡಲದೊಳು ಮಾರ್ಪೊಳೆವ ಕರ್ಣಪಾಲಿಕೆಗಳ, ಅದಲ್ಲದೆಯುಂ ನಸುಸುಧಾಕಿರಣಮಂ (?) ಪೋಲುವ'[ಸಿ]ತಚ್ಛವಿಯಂ ಸೂಸುವಂತೆಸೆವ ತುಪ್ಪುಳುಮಾಸೆಗಳ, ಮತ್ತಂ ಬಿಂಬಫಲಮಕಾಲಪಕ್ವವೆಂದು ಮಾಣಿಕದ ಬಣ್ಣದ ನವ ೮೦ 
1 2 (ಕ.ಖ.ಗ.ಪ.) ; 2 ಗೀ (ಕ.ಖ.ಗ,ಘ,) 

ಮಧುರಮಂ ಕಠಿನಾಶ್ರಯಮೆಂದು ಮೂಡ ದ್ವೀಪಾಂತರದೊಳೆಸೆವ ೯೦ ಪ್ರವಾಳಮಂಜಡಾಶ್ರಯವೆಂದೊಲ್ಲದವನಧಃಕರಿಸಿ ಮುಕ್ತಿಯ ಬಿತ್ತನೋ ಯಾರಿಸಿದಂತಿರ್ದ ದಂತಪಂಕ್ತಿಯನೊಳಗುಮಾಡಿಕೊಂಡು ಗರ್ವದಿಂ ರಾಗಿಸುವಂತೆಳಬೆಳುದಿಂಗಳೊಳ್ ಚಂದ್ರಮಂಡಲದೊಳೋಲೈಸಿಕೊಳು ತಿಪ್ಪ ಮಧುರಾಧರಪಲ್ಲವ'[ದ], ಅದಲ್ಲದೆಯುಂ ಸತ್ಯಾಮೃತಸಾಮರ್ಥ್ಯ ಕೃಪಾರತ್ನಭರಿತವಾದ ಪುಣ್ಯದ ಕರಂಡಗೆಯಂತಿರ್ದ ಬಾಯ್ದೆರೆಯಿಂ ಮನ ಮುಖಮಂಡಲದ, ಅದಲ್ಲದೆಯುಂ ಸುಕುಮಾರಸೌಂದರ ವಿರಚಿತ ಸುಕುಮಾರತೆಗಳಿದ್ದೆ ಸಯನೊತ್ತುಗೊಂಡು 'ವೃತ್ತ'ನಾಗಿ ಗಳ ಗಳನಿಳಿದು ನಳನಳಿಸಿ ಬೆಳೆದಂತೆಸೆವ ನಳಿತೋಳ, ಮತ್ತಂ ಕಲ್ಪಕುಜದ ಶಾಖಾಕಾರದಂತೆ ಮೆರೆವ ಧವಳದುಕೂಲದ, ಮತ್ತಂ ಎರಡರಿಯದೆ ಗುವ ಲೋಕಪಾಲಕರ ಮಕುಟದ ಮಾಣಿಕದ ಬೆಳಗನುಂಡು ಬೆಳೆದಂತ ೧೦೦ ಲಕ್ತಕದ ಹಂಗಿಲ್ಲದೆ ನಿಜರಾಗದಿಂ ರಂಜನೆವಡೆದು ಸುಣ್ಣೆಳಗನುಗುಳ್ಳ ಪದತಳದ ಸೌಂದರಿಯದಿಂ ದೇಶೆವಡೆದ ಹದಿನಾಅಅ ಹರೆಯದ ಹರಂ ಕರುಣಿಸಿ ನಡೆತಂದು; ಬಸವರಾಜನ ಮಹಮನೆಯ ಶಿವರಾತ್ರಿಯ ಸಂಭ್ರಮಕ್ಕೆ ಸಂತ ಸಂಬಡುಂ ಬಂದು ನಿಂದಿರ್ದ ಶಿವನಂ, ಷೋಡಶಹರೆಯದ ಕಮನೀ ಯನಂ, ಜಂಗಮವೆಂಬುದನಳದು ಬಸವಂ ಪುಳಕದೊಡನೆ ಭೋಂಕನೆದ್ದು ಕದವ ತೆಗೆದು ಪದತಳದೊಳು ಬಿದ್ದು ಕೊಂಡೊಯ್ದು ಸುಖಜಂಗಮ ವೆಂಬುದು ಮನದೊಳಹುದು, ಕಣ್ಣೆವೆಯೊಳಿಕ್ಕಿ ಪಾದಮಂ ತೊಳೆದು ಕಮ್ಮೆಣ್ಣೆಯಂ ತಂದು ಮಜ್ಜನಂ ಮಾಡಿಸಿ ಅಮೃತಪ್ರಸಾದಮನಾ ರೋಗಣೆತ್ತು ಚಂದನದ್ರವ್ಯಾನುಲೇಪನಂಗಳಂ ಮಾಡಿ ಸುವರ್ಣಾ ೧೧೦ ಭರಣಂಗಳಿಂದಲಂಕರಿಸಿ ಪಚ್ಚಕರ್ಪುರದ ವೀಳೆಯಮಸಿತ್ತು ಭಯ ಭಕ್ತಿಯಿಂ ಬೆಸಕಯ್ತು ನಿಯತನಾಗಿ, ಕಣ್ತೀವಿ ನೋಡಿ ನಾಲಗೆತೀವಿ ಹಾಡಿ ಕಮಳಕುಟ್ಕಳದೊಳು ಬಾಳಹಂಸನನಿರಿಸುವಂತೆ ಸೆಜ್ಜೆಯ ಮನೆಯ 
1 ದಿಂ (ಕ.ಖ.ಗ.ಘ.) ; 2 : ತಮಾಕಾರ (ಖ.) ; 


ಮೃದುತರವಪ್ಪ ತಳದ ಮೇಲೆ ಬಿಜಯಂಗೆಯ್ಲಿ ಬಸವರಾಜಂ 'ಸನ್ನಿಧಿ ಯೊಳು ನೀಚಾಸನದಿಂ! ಪಾದಮಂ ಪಿಡಿದೊತ್ತುತ್ತಮಿರೆ ; ಬಸವ ಬಸವಾ, ನಾವು ಹೆಂಗೂಸಿಲ್ಲದೆ ಇರ್ದುದಿಲ್ಲೆಂಬ ಮಾತಂ ಕೇಳು -ದೇವದೇವ ನಿಮ್ಮ ಚಿತ್ರವನರಿಯದಜಿರ್ದೆಂ. ಇದೊಂದರಿ ದಲ್ಲ-ಎಂದು ಪರಿಚಾರಕರಂ ಪುರದೊಳಯಿಂಕೆ ಕಳುಹಲವರಿವರೆನ್ನದೆ ಪಟ್ಟಿ ಣದ ಸಣ್ಯಾಂಗನೆಯರೆಲ್ಲಂ ಕೂಡಿ ದಂಪತಿಗಳಾಗಿರೆ, ದೇವಾ ಎಲ್ಲಿಯುಂ ತೆರಿಹಿಲ್ಲವೆಂದು ಬಿನ್ನೆಸೆ, ಕೌತುಕಂಬಟ್ಟು-ಅರಿದೆನದೆಂ. ತನ್ನ ಮಾಯವೆನ್ನಂ ಕೊಳುವುದೆ ? ಅದಕ್ಕೇನುಯಲಕ್ಕು ಮೆನುತ್ತೆ; ಸಿರಿ ಸರಸ್ವತಿಯರಂ ಕೀಳ್ಯಾಡುವ ತನ್ನರಸಿ ಮಾಯಿದೇವಿಯರಂ ತಂದು ಕೂಡುವೆಂ. ಬಳಿಕ್ಕೆ ನೋಡಿಕೊಂಬೆನೆಂದು ನೋಡಿ; ಮಾಯಿದೇವಿಯರ ನೊಲ್ಲೆ ವೆಂದರಾದಡೆ ಮೇಲೆ ಮಾತೃ ಕಜ್ಜಮಂ ಕಾಣವೇಚ್ಛುದು. ಒಲ್ಲೆ ನಂದ ವಸ್ತುಮಂ ಸಂಗಂಗೆ ಕುಡಲಾಗದೆಂತು ಮಾಟ್ಟೆನೆನುತೆ; ಮುನ್ನ ತನ್ನರ್ತಿಗೆ ಹೇರೂರ ಹೆಣ್ಣು ಗಂಡುರೂಪಂ ಮಾಡಿದೋಪಾದಿಯಿಂ. ದೆನ್ನಂ ಹೆಂ ಮಾಡದೆಂತು ಪೋದಷಂ ? ಲಿಂಗ ಪತಿ ಶರಣ ಸತಿಯೆಂಬೀ ಮಾತಂ ದಿಟಂಮಾಡಿ ತೋರ್ಸೆಂ ಮಾಯಿದೇವಿಯರನೊಲ್ಲೆವೆಂದ ಬಳಿಕ್ಕ-ಎ -ಎಂದು ಬಸವರಾಜಂ ಶರಣಜನಲೀಲಾಶೀಲಂ ಮನದೊಳು ಜ್ಜುಗಂಗೆಯ್ಯುತ್ತಿರಲು; ಅತ್ತಲಾ ಮಾಯಿದೇವಿಯರು, ಊರೊಳಗೆ ಸಣ್ಯಾಂಗನೆಯರಿಲ್ಲದಿ ರ್ದ ಡೆನ್ನ೦ ಜಂಗಮಕ್ಕೆ ಬಸವರಾಜಂ ಕೊಟ್ಟಿಲ್ಲದೆ ಮಾಣನೆಂದು ಸಿಂಗರಿಸಿ ಕೊಂಡು ಒಸವನ ಬರವಂ ಪಾರ್ದಿಷ್ಟ ಸಮಯದೊಳು ; ಬಸವಂ ಬರಲಿ ದಿರ್ವಂದು, ನಡೆ ಬಸವ ನಿನ್ನ ಮನೋರಥಮಂ ಮಾಡಿದಪೆನೆಂಬ ಸತಿಯಂ ಡಿ ಸಂತೋಷದಿಂ ಸುಖವನೊಡಗೊಂಡು ಬಪ್ಪಂತೆ ತಂದು, ಸೆಜ್ಜೆಯ ಮನೆಯಂ ಪೊಗಿಸಿ ಮುಚ್ಚುಳನಿಕ್ಕಿಕೊಂಡು ಬಸವ ಪೋಲಿವಾಗಿಲೊಳಿರೆ ; ಮಾಯಿದೇವಿಯರು ದೇವನ ತೊಡೆಯಂ ಶಿವನ 
1 ನಿವಾಸದೊಳು (ಖ), ಸಿರಾಸನದಿಂ (ಘ), (ಗ, ಈ.) 

೧೪೦/ ಹೊಯ್ದೆಬ್ಬಿಸಿ ದೇವನ ಪುಸಿಮುಸುಕನೊಯ್ಯನೋಸರಿಸಿ, ಮಾಯೆಯ ಜವನಿಕೆಯಂ ತೆಗೆದಂತೆ ದೇವನ ಚೋಹವಳಿದು ದಶಭುಜಂ ಪಂಚವದನ ತ್ರಿಣೇತ್ರನಾಗಿರೆ ಮಾಯಿದೇವಿಯರು ನೋಡಲಮ್ಮದೆ ನಡನಡುನಡುಗಿ, ಬಸವ ಬಸವಾ ಜಂಗಮದೇವರು ಸಂಗಮದೇವರಾದರೆನೆ; ತಾಯೆ ತಾಯೆ ಮುನ್ನ ವಾರೆಂದು ಕೊಟ್ಟೆನೆಂದು ನುಡಿವಲ್ಲಿಂ ಮುನ್ನವೆ ಸಂಗಮೇಶ್ವರಂ ಬಸವನ ಚಿತ್ರಮಂ ಪರೀಕ್ಷಿಸಲಾಗಿದೆ ಸೋಲು ಬೇಗದಿಂದಂತರ್ಧಾ ನಕ್ಕೆ ಸಂದುದಂ ಮಾಯಿದೇವಿಯರು ಕಂಡು ಕದಮಂ ತೆಗೆದು ಬಸವ ರಾಜಂಗೆ ವೇಳೆ ; ಕೇಳು ಅನುತಾಪದೊಳೊಂದಿ ದೇವನಂ ಮೂದಲಿಸಿ -ಎಲೆಲೆ, ಕಾಡಿ ಕಾಡಲಮ್ಮದ ತಂದೆ, ನೀಂ ಕೇಳು, ಬೇಡಿ ಬೇಡ ಲಮ್ಮದ ಹಂದೆ, ನೀ ಕೇಳು ಕೂಡಿ ಕೂಡಲಮ್ಮದ ಚಾತಿಯೇ, ನೀಂ ಕೇಳು-ಎಂದು ಗೀತಮಂ ಪಾಡಿ ನಿರೋಧದೊಳಿರಲು; ಇತ್ತಲು ಪೂರ್ವ ದಿಶಾಮುಖದೊಳರುಣೋದಯವಾಗುತ್ತಮಿರೆಯಿರೆ || 
1 ತನೇ (ಘ), ಲಿ (ಗು) ; + ಇಲ್ಲಿಗೆ ಕ. ಪ್ರತಿ ನಿಂತುಹೋಗಿದೆ.

ಶನಿವಾರ, ಡಿಸೆಂಬರ್ 18, 2021

ಬಸವರಾಜದೇವರರಗಳೆ - ಹನ್ನೊಂದನೆಯ ಸ್ಥಲ

ಬಸವರಾಜದೇವರ ರಗಳೆ 

ಹನ್ನೊಂದನೆಯ ಸ್ಥಲ 

ಬಸವನ ಭಕ್ತಿಯಂ ಬಸವರಾಜನ ದಾನವಿನೋದವೃತ್ತಿಯಂ 
ಬಸವನ ನಿಷ್ಠೆಯಂ ಬಸವದೇವನ ಸನ್ನುತಪುಣ್ಯಕೀರ್ತಿಯಂ | 
ಬಸವನ ಪೆರ್ಮೆಯಂ ನಲಿದು ಕೇಳುತೆ ಕಿನ್ನರಬೊಮ್ಮ ತಂದೆಗಳ್ 
ಬಸವನಿರೀಕ್ಷಣಾರ್ಥದೊಲವಿಂ ಬರುತಿರ್ದರನೂನಸಾತ್ವಿಕರ್ || ೧* 


೦. 
ಇಂತು ಬಸವಣ್ಣನಂ ನೋಡುವುದ್ಯೋಗದಿಂ 
ಸಂತಸದಿ ಬರುತಿರ್ದರಂತಲ್ಲಿ ಬೇಗದಿಂ | 
ಎಸೆವ ಕಿನ್ನರಬೊಮ್ಮ ತಂದೆಗಳು ಬರುತಮಿರೆ 
ಅಸಮನಯನನ ಗಣಾವಳಿ ನೋಡಿ ನಲಿವುತಿರೆ | 
ಮುಂತೆ ವೃಷಭಧ್ವಜಂ ಗಗನದೊಳು ಕುಣಿವುತಿರೆ 
ಪಿಂತೆ ಮಾಹೇಶ್ವರರ ಹೇಳಿಕೆಗಳೊಪ್ಪುತಿರೆ | 
ನಡೆತಂದು ಪದವೀಥಿಯಂ ಪುಗುತ್ತಿರಲತ್ತ 
ಕಡುನೇಹಿ ಬಸವಂಗೆ ಬಲದ ಕಣ್ ಕೆತ್ತುತ್ತ-| 
ವಿಮ್ಮಡಿಸಿ ಪುಳಕಂಗಳೊಮ್ಮೆಗೊಮ್ಮೆಗೆ ನೆಗೆಯೆ 
ನೂರ್ಮಡಿಸಿ ಮೈವೆಚ್ಚು ತಾನಂದವಂದೊಗೆಯೆ | ೧೦ 


ಪರಮ ಹರುಷಂದೋಱುತಿರೆ ಸಂತಸಂಬಡುತೆ 
ಹರನ ಭಕ್ತರ್ ಬರ್ಪರಿಂದೆನ್ನ ಮನೆಗೆನುತೆ | 
ಶಶಿಯ ಬರವಂ ಚಕೋರಂ ಬಯಸಿ ನಿಂದಂತೆ 
ಎಸೆವ *ಕಾರಂ ಬಯಸಿನಿಂದ* ಚಾದಗೆಯಂತೆ |
(* ಮುಂಗಾರಂ ಬಯಸುವ (ಕ.ಖ.)) 
ಮುಂದೆ ಮಿಗೆ ಮೆರೆವ ನಂದಿಯ ಪತಾಕೆಯ ನಡುವೆ 
ಸಂದಣಿಪ ಗಣನಾಯಕರ ಸಂಭ್ರಮದ ನಡುವೆ | 
ಕಿನ್ನರಯ್ಯಂ ಬರುತ್ತಿರೆ ದೂರದಿಂ ಕಂಡು 
ತನ್ನ ಮನದೊಳಗೆ ಗುಡಿಗಟ್ಟಿ ಹರುಷಂಗೊಂಡು | 
ಬಸವನಿದಿರ್ಗೊಂಡು ಭಯಭಕ್ತಿಯಿಂ ಮೈಯಿಕ್ಕಿ 
ಒಸೆದು ಕಿನ್ನರತಂದೆಗಿದಿರಾಗಿ ಮೈಯಿಕ್ಕಿ | ೨೦ 


ಇರ್ಬರೊಂದಾಗಿ ನಲಿನಲಿದು ತಕ್ಕೈಸುತಂ 
ಸರ್ಬನ ಗಣಂಗಳೊಳು ಪರಮಸುಖವೊಂದುತಂ | 
ಬಂದು ಬಸವಣ್ಣನರಮನೆಯನೊಲವಿಂ ಪೊಕ್ಕು 
ತಂದುನ್ನ ತಾಸನದೊಳಿರಿಸುತೆ ಮನಂ ಮಿಕ್ಕು | 
ಪಾದಂಗಳಂ ತೊಳೆದು ತೀರ್ಥಜಲಮಂ ತಳೆದು 
ಆದರಂ ಮಿಗೆ ಕಿಂಕರಾಕಾರದೊಳು ನೆರೆದು| 
ಪನ್ನೆರಡು ಸಾವಿರೊಡೆಯರ ನಡುವೆಯಾಡುತಂ 
ಕಿನ್ನರಯ್ಯಂಗೆ ಲಿಂಗಾರ್ಚನೆಗೆ ನೀಡುತಂ | 
ಸಂಗಂಗೆ ಸಂಗಡದೊಳಾರೈಸಲಿಕ್ಕುತಂ ಹಿಂಗದೆ 
ಶಿವಪ್ರಸಾದಂಗಳಿಂ ಪೆಚ್ಚುತಂ | ೩೦ 

ಕಿನ್ನರಯ್ಯಂಗೆ ಆದರದಿಂದೆ ಉಡಲಿತ್ತು 
ಮನ್ನಿಸುತ್ತವರ ಪದಮಂ ನೆತ್ತಿಯೊಳು ಹೊತ್ತು | 
ಕಿನ್ನರಯ್ಯನ ಹರುಷವೇ ಹರುಷವಾಗುತಂ 
ಕಿನ್ನರಯ್ಯನ *ನೇಹವೇ* ನೇಹವಾಗುತಂ | 
(* ಸರಸ.) 
ನಲಿನಲಿದು ಕೆಲದೆವಸವೀ ತೆಱದೊಳೊಪ್ಪುತಿರೆ 
ಒಲವು ದಳವೇಱಿ ಇರ್ಬರ ನಡುವೆ ಬೆಳೆವುತಿರೆ | 
ಒಂದು ದೆವಸಂ ಕಿನ್ನರಯ್ಯಂಗಳೊಲುಮೆಯಿಂ 
ಇಂದುಧರನಾರೋಗಣೆಗೆ ಚಿತ್ತದರ್ತಿಯಿಂ| 
ತನ್ನ ಸೊಗಸೇ ಶಿವಂಗತಿಸೊಗಸು ತಾನೆಂದು 
ಚೆನ್ನವಪ್ಪುಳ್ಳಿಗಳ ಮೇಲೋಗರಕ್ಕೆಂದು | ೪೦ 

ತರಿಸಿ ಸುಖಮುಖದಿಂದ ಸೋದಿಸುತ್ತಿರ್ದಲ್ಲಿ 
ಶರಣರೊಡಗೂಡಿ ಮಿಗೆ ಬಣ್ಣಿಸುತ್ತಿರ್ಪಲ್ಲಿ | 
ಹೆಂಪಿಂದೆ ಶರಣರ ನಡುವೆ ಉಳ್ಳಿ ಮೆಱವುತಿರೆ 
ಕಂಪು ಬಸವನ ನಾಸಿಕಕ್ಕೆ ತೀಡುತ್ತಮಿರೆ | 
ತಂದರಾರೀಯಭೋಜ್ಯವನೆನುತ್ತುಳ್ಳಿಯಂ 
ನಿಂದಿಸುತೆ ಪೋದನರಮನೆಗೆ ಅಭವಪ್ರಿಯಂ | 
ಆ ನುಡಿಯನಾಲಿಸುತೆ ಕಿನ್ನರಯ್ಯಂಗಳಿರೆ
ಏನೆಂದ ಬಸವಣ್ಣನೆನುತೆ ಕಾಯ್ಪಿಡಿದಡರೆ|
ಕಂಗಳರೆಕೆಂಪಾಗೆ ಮೀಸೆಗಳು ಕೆತ್ತುತ್ತೆ 
ಹಿಂಗದಿರ್ಪುದು ತನ್ನ ಮಂದಿರದೊಳಗೆ ಮತ್ತೆ | ೫೦ 


ಹರಹರ ಇದೇನೆಂದು ಕಣ್ಣ ನೀರಿಕ್ಕುತಂ 
ಪಿರಿದುಂ ನಿರೋಧದಿಂ ಶರಣಸತಿ ನೋವುತಂ | 
ಬರಲಾಗದಿಲ್ಲಿಗಾಂ ಬಂದಲ್ಲಿ ಸೈರಿಪುದು 
ಶರಣರಂ ದೂರದಿಂ ಕೇಳುತಾದರಿಸುವುದು | 
ಅಮೃತಮಂ ಬಿಸುಟು ಮಲ್ಲಯ್ಯನಾರೋಗಿಸುವ 
ಅಮೃತಮಯಶಾಕಮನಿದಂ ನೋಡಿ ನಿಂದಿಸುವ | 
ನುಡಿಗೇಳ್ದು ನಿಲಲಾಗದೆಂದು ಘುಡುಘುಡಿಸುತಂ 
ಕಡುಕೋಪದಿಂದೆ ಪೋಱಮಟ್ಟು ದಡದಡಿಸುತಂ| 
ಗಾವುದಳವಿಯ ಬಟ್ಟೆಯೊಂದೂರ್ಗೆ ನಡೆತಂದು 
ದೇವಾರ್ಚನೆಯ ನಿತ್ಯನೇಮಕ್ಕೆ ಮನದಂದು | ೬೦ 


ಅತ್ತಲಾ ಕಿನ್ನರಯ್ಯಂ ಹೋಗಿಯಿರಲಿತ್ತ 
ನಿತ್ಯ ನಿಯಮಕ್ಕೆಂದು ಶರಣರಂ ಕೂಡುತ್ತ| 
ಅಂದು ಬಸವಂ ಬಂದು ಶರಣಪಾದೋದಕದಿ 
ಮಿಂದು ಮಡಿವರ್ಗಮಂ ಪೊದೆದು ಮಿಗೆ ಸಂತಸದಿ | 
ಕಿನ್ನರಯ್ಯನನಱಸಿ ಕಾಣದೆ ಭಯಂಗೊಂಡು 
ಎನ್ನೊಡೆಯನೆಲ್ಲಿರ್ದನೆಂದು ನೇಹಂಗೊಂಡು | 
ಬೆಸಗೊಳಲು ಶರಣರೆಂದರು ಬಸವರಾಜಂಗೆ 
ಶಶಿಧರನ ಸದ್ಭಕ್ತಿಯಾಚಾರ*ಧೀರಂ*ಗೆ | 
(*ರಾಜ (ಕ.ಖ.), ಬೀಜ (ಗು);))) 
ಎಲೆ ಬಸವ ಕಿನ್ನರಯ್ಯಂ ತಮ್ಮ ದೇವಂಗೆ 
ಸಲೆ ಸೊಗಸಿನುಳ್ಳಿಯಂ ತರೆ ಮಲ್ಲಿನಾಥಂಗೆ | ೭೦ 


ಕಂಡದಂ ನಿಂದಿಸಿದರೆಂದು ಘನಕೊಪದಿಂ 
ಕೆಂಡವಂ ಮೆಟ್ಟಿದಂತಾಗಿ ಸಂತಾಪದಿಂ | 
ಮುಳಿದು ಪೋದರ್ ಕಿನ್ನರಯ್ಯಂಗಳಂತದಕೆ 
ಕಳೆದು ಹೋಗದ ಮುನ್ನ ಹೋಗಿ ಬೇಳ್ಳು'೨[ದು ಇ]೨'ದಕೆ | 
(೨. ದನಿ (ಕ.), ದನ (೩) ; ) 
ಗುಣವಂತನಭಿಮಾನಿ ಮುಳಿದು ಹೋದ ದೇವ 
ತ್ರಿಣಯನವತಾರ ಶರಣಂ ಪೋದನೆಲೆ ದೇವ | 
ಎಂಬುದಂ ಕೇಳಂಜಿ ಬಸವಣ್ಣ ಮರವಟ್ಟು 
ಹಂಬಲಿಸಿ ಹಲುಬಿ ಘನತಾಪ ಮನಮಂ ನಟ್ಟು | 
ನೊಂದು ಮನಗುಂದಿ ತನು ಕಂದಿ ಮಿಗೆ ಮಿಗೆ *ಕೋ*ಡಿ 
ಬಂದ ಸುಕೃತಂ ತಿರಿಗಿ ಹೋಯ್ತಂದು ನೆಱೆ ಬಾಡಿ | ೮೦ 
(*ನೋ (ಖ.ಕ.)

ಇನ್ನೆಂತು ಮಾಡುವ ಕಿನ್ನರಯ್ಯಂ ಮುಳಿದ- 
ನಿನ್ನೆಂತುಟಪ್ಪುದೋ ಭಕ್ತರೇ ಬಲ್ಲರಿದ-| 
ನೆಂದು ಗಣವೃಂದಕ್ಕೆ ಭಯದಿಂದ ಮೈಯಿಕ್ಕಿ 
ಅಂದು ಬಸವಣ್ಣನುಬ್ಬುಡುಗುತಂ ಮೈಯಿಕ್ಕಿ | 
ಅಱಿದನಱಿದೆಂ ನೋಡು ನುಡಿಕೆಟ್ಟ ನಾಲಗೆಗೆ 
ಮಱೆನುಂಟುಂಟು ಅಪರಾಧವೀ ನಾಲಗೆಗೆ | 
ಬಂದುದೀವುಳ್ಳಿಯಂ ನಿಂದಿಸಿದ '*ದಂಡ*ಕ್ಕೆ 
ಇಂದು ನಾನಪರಾಧಿಯೇ ಶರಣವೃಂದಕ್ಕೆ || 
 (*ಡಂತೆ (ಖ.)) 
ದೇವ ಒಂದಂ ಬೆಸಸಿರೇ ಇದಕ್ಕೆನುತಮಿರೆ 
ದೇವಶರಣರ್ ನುಡಿದರಾ ಒಸವ ನಲಿವುತಿರೆ | ೯೦ 


ಬಸವ ಕೇಳಿಂದಾದ ಸಮೆದ ಬೋನವನಿಂತೆ 
ಎಸೆವಶರಣನ ಕೊಂಡು ಬಂದು ನಾವಿನ್ನಂತೆ | 
ಉಳ್ಳಿಯಿಂ ಕಿನ್ನರಯ್ಯಂಗಾದ ಮುಳಿಸುವಂ 
ಉಳ್ಳಿಯಿಂದವೆ ತೀರ್ಚಿ ಕಳೆದು ನಿರೋಧವಂ | 
ಎನೆ ಬಸವರಾಜಂ ಹಸಾದವೆನುತಂ ನಿಂದು 
ಘನಮಹಿಮನಾಕ್ಷಣಂ ತರಿಸುತಿರ್ದಂ ನಲಿದು | 
ಒಸೆದು ತರುತಿರ್ದರಾ ಲೇಸಪ್ಪ ಉಳ್ಳಿಯಂ 
ಮಸಗಿ ತರುತಿರ್ದರಾ ಶಿವಭಕ್ತರೊಲ್ಮೆಯಿಂ | 
ತೀವಿ ಬಂಡಿಯೊಳು ನಾಲ್ಸೆದೆಸೆಗಳಿ೦ ಬರುತಮಿರೆ 
ಏವೇಳ್ವನಾ ಭಕ್ತರುತ್ಸಹವನೊಪ್ಪುತಿರೆ | ೧೦೦ 


ಕಹಳೆ ಮದ್ದಳೆ ಶಂಖನಾದವುಳ್ಳಿಯ ಮುಂದೆ 
ಬಹುವಿಧದ ವಾದ್ಯ ಸಂತಾನವುಳ್ಳಿಯ ಮುಂದೆ | 
ಹಾಡುವ‌ರ್ ಪರಸುವರ್ ಕುಣಿವರುಳ್ಳಿಯ ಮುಂದೆ 
ಆಡುವರಗ ನೋಡುವ‌ರ್ ನಲಿವರುಳ್ಳಿಯ ಮುಂದೆ | 
ಬಿತ್ತರಿಪ ವೃಷಭಧ್ವಜಂಗಳುಳ್ಳಿಯ ಮುಂದೆ 
ಒತ್ತರಿಪ ಶರಣರ ಸಮೂಹವುಳ್ಳಿಯ ಮುಂದೆ | 
ಇಂತು ಬರಲುಳ್ಳಿಯಂ ಬಸವಣ್ಣನಿದಿರ್ಗೊಂಡು 
ಸಂತಸದೊಳಂದು ವಿಸ್ತರಿಸಿದಂ ಕೈಕೊಂಡು | 
ಆನೆಗೆ ಗುಳಂ ಕುದುರೆವಕ್ಕರಿಕೆಯುಳ್ಳಿಯಿಂ 
ನಾನಾಭರಣವೆಸೆವಲಂಕರಣವುಳ್ಳಿಯಿಂ | ೧೧೦ 


ತೊಡುವುಡುವ ಪೊದೆವ ಸುತ್ತುವವೆಲ್ಲವುಳ್ಳಿಯಿಂ 
ಪಿಡಿದಿಡುವ ನುಡಿವ ಮಾಡುವವೆಲ್ಲವುಳ್ಳಿಯಿಂ| 
ಇಂತು ಪಟ್ಟಣವೆಲ್ಲವುಳ್ಳಿಗಳ ಮಯವಾಗೆ 
ಸಂತಸಂ ಮಾಡಿ ಬಸವಣ್ಣನುನ್ನತವಾಗೆ | 
ಅವರಿದಿರ್ ಗಾವುದರೆದಾರಿಯೊಳಗಂದುಕ್ಕಿ 
ತವಕದಿಂದೊಪ್ಪವುಳ್ಳಿಯ ಚಪ್ಪರವನಿಕ್ಕಿ | 
ಲಕ್ಕಲಕ್ಕಕ್ಕೆ ನೆರೆದ ಭವಭಕ್ತರ ನಡುವೆ 
ಉಕ್ಕಂದದುರವಣೆಯ ವೀರಶರಣರ ನಡುವೆ | 
ನೆರೆದು ನೆಗಹಿದ ಕೋಟಿವೃಷಭಧ್ವಜದ ನಡುವೆ 
ಬರುತಿರ್ದನಾ ಬಸವನೆಸೆವ ಸಿಂಧದ ನಡುವೆ | ೧೨೦ 


ಉಳ್ಳಿಗಳ ಜಂಪಂ ಶಿರೋಮಾಲೆಗಳನಿಕ್ಕಿ 
ಉಳ್ಳಿಗಳ ಬಾಹುಬಳೆ ಕಂಠಮಾಲೆಯನಿಕ್ಕಿ | 
ಉಳ್ಳಿಗಳ ಮುಡಿದು ಉಳ್ಳಿಗಳ ಕೈಯೊಳ್ ಪಿಡಿದು 
ಒಳ್ಳಿತೆಸಿಸುವ ಮನದ ಬಸವರಾಜಂ ನಡೆದು | 
ಬರುತಮಿರೆ ಬೆಳ್ಳೂಡೆಗಳಲ್ಲಿ ದಿವಿ ಮುಸುಕಿದವು 
ನೆರೆದು ಬಹುವಿಧವಾದ್ಯವಡಸಿ ನಿಖೆ ಮೊಳಗಿದವು | 
ಧಿಮಿಧಿಮಿಕು ದುಮುಕುತಂಗೆಂಬ ಮದ್ದಳೆಯ 
ಚಮಕ ತಕನಕ ತಕನವೆಂಬ ಕಹಳೆಯ ದನಿಯ | 
ನಟಟಿಹಕು ಫಣಭಣ ಛ್ಚಿಳಿಲೆಂಬ ಆವುಜೆಯ 
ನಟವಿಕಟ ಕಟಕ ಬಿಱ್ಬೆಂಬ ಕರಡೆಯ ದನಿಯ | ೧೩೦ 


ನಡುವೆ ಕೇಳಿಸುವ ಹೇಳಿಕೆಯವರ ಸಂಗಡದ 
ಗಡಣ ವಿಡಿದೊಪ್ಪದಿಂ ಬರುತಿರ್ದ ಜಂಗಮದ |
ಕೋಳಾಹಳದ ಸರ್ವಸಂಭ್ರಮಂ ನೆಗಳುತಿರೆ 
ಮೇಳೈಪ ಪೌರಜನವರ್ತಿಯಿಂ ಬರುತಮಿರೆ| 
ಎಡಬಲದ ವೀರತತಿ ನೆಲನನುಗ್ಘಡಿಸುತಿರೆ 
ಬಿಡದೆ ಪರಸಮಯಿಗಳು ನಡನಡುಗಿ ಸರಿವತಿರೆ |
ಭಕ್ತಜನಚರಣಸರಸಿರುಹಷಟ್ಟದನೆಂಬ 
ಭಕ್ತಜನಕುಮುದವನಕಮನೀಯಶಶಿಯೆಂಬ | 
ಜಂಗಮದ ವೇಳೆ ಜಂಗಮದ ಕಿಂಕರನೆಂಬ 
ಜಂಗಮಪ್ರಾಣ ಜಂಗಮದ ಸಂಪದನೆಂಬ | ೧೪೦ 


ಬಿರುದೆ ಕಹಳೆಗಳು ದೆಸೆದೆಸೆಗೆ ಕರೆವುತಿರೆ 
ಧರೆ ನಡುಗೆ ನಿಸ್ಸಾಳನಾದವುತ್ತಮಿರೆ | 
ನಡೆದು ಬಂದುದು ರಜತಗಿರಿಯ ಹಾದಿಯ ತೆಱದಿ 
ನಡೆತಂದುದಿಂದುಮೌಳಿಯ ನಿಬ್ಬಣದ ತೆಱದಿ |
ಇಂತು ಬರುತಿರೆ ಕಂಡು ಕಿನ್ನರಯ್ಯಂ ನಿಂದು 
ಚಿಂತಿಸಿದನೆಲ್ಲಿಯದಿದೇನು ಕೌತುಕವೆಂದು | 
ತನ್ನ ಮುನಿಸಂ ತಿಳುಪಲೆಂದು ಬಸವಂ ಬಪ್ಪ 
ಉನ್ನತಿಯಿದೆಂದರಿದು ತನ್ನ ಮನದೊಳಗಿಪ್ಪ | 
ಮುನಿಸು ದೇಹದೊಳಿದಿರ್ಗೊಂಡುದಾ ಭಕ್ತಂಗೆ 
ನೆನಹು ಬಸವನ ಮೇಲೆ ಬಿದ್ದು ದಾ ಭಕ್ತಂಗೆ | ೧೫೦


ಚಿತ್ತಂ ಬಸವನತ್ತ ತಿರಿಗಿತ್ತು ಭಕ್ತನಂ 
ಒತ್ತರಿಸಿ ಪುಳಕಂಗಳೆತ್ತಿದವ 'ಶರಣನಂ | 
ಇದಿರೆದ್ದು ಬರಿಸಿದವು ಕರಣಂಗಳಾತನಂ 
ಸದಮಳ ಶಿವಧ್ಯಾನಪರಿಪೂರ್ಣ ಹೃದಯನಂ। 
ಇಂತು ಸಾತ್ಕ್ರವಿಕರಸದರಸನಾಗಿ ಬರುತಿರ್ಪ 
ಕಂತುನದಹರನ ಸುಖದವತಾರನೆನಿಸಿರ್ಪ |
ಕಿನ್ನರಯ್ಯನನಕ್ಕಱಿಂದೆ ನೋಡುತೆ ಬಂದು 
ಎನ್ನ ಸಂಗಮನೀತನೀತನೆನುತೈ ತಂದು | 
ಇಳಿಸಿದಂ ಸರ್ವಾಂಗಮಂ ಕಿನ್ನರನ ಪದಕೆ 
ಗಳಗಳನೆ ಸುರಿದನಾನಂದಜಳವಂ ತಳಕೆ | ೧೬೦


ಎತ್ತಿದಂ ಕಿನ್ನರಯ್ಯ ಬಸವರಾಜನಂ 
ಉತ್ತಮೋತ್ತಮಭಕ್ತಿಯಾಚಾರ್ *ತೇ*ಜನಂ | 
ತೆಗೆದು ತಕ್ಕೈಸುತಂ ತಣಿಯದೋರೊರ್ವರೊಳು 
ಬಿಗಿಬಿಗಿದು ಪುಗಲೆಳಸುತಿರ್ದ'ರೋರೊರ್ವರೊಳು | 
ಆಲಿಕಲ್ಲಾಲಿಕಲ್ಲಂ ತಾಗಿದಂತಾಗೆ 
ಹಾಲೊಳಗೆ ಹಾಲಂ ಕರಂ ಬೆರಸಿದಂತಾಗೆ | 
ಬೆಳಗು ಥಳಥಳಿಸ ಬೆಳಗಂ ಕೂಡಿದಂತಾಗೆ 
ತಿಳಿದಮೃತವಮೃತವಂ ಬಿಡದಪ್ಪಿದಂತಾಗೆ |
ಅಪ್ಪಿಕೊಂಡಿರ್ದರಿನಿತುಂ ಬೇಗವಿರ್ಬರುಂ 
ಒಪ್ಪಂಬಡೆದರಭವನಾಜ್ಞೆಯೊಳಗಿರ್ಬರುಂ | ೧೭೦


ಆಗ*ಳುಣ್ಮಿ*ದವು ದುಂದುಭಿಶಂಖಕಹಳೆಗಳು 
ಚಾಗು ಬೊಲ್ಲೆನುತೆ ನೆಗೆದವು ಭಕ್ತಹರಕೆಗಳು | 
( *ಳೂಳಿ*) 
ಭೋರೆಂದು ಕೊಂಡಾಡಿದರ್ ಬಸವರಾಜನಂ 
ಹಾರೈಸಿ ಕೊಂಡಾಡಿದರ್ ಕಿನ್ನರಯ್ಯನಂ | 
ಒಡಗೊಂಡು ಬಸವರಾಜನ ಮಹಮನೆಗೆ ಬರುತ್ತೆ 
ಗುಡಿಗಟ್ಟಿದುಳ್ಳಿ ಗಳ ಗುಡಿಯಂ ನಿರೀಕ್ಷಿಸುತೆ |
ಹಾಡುವ ಗಣಂಗಳಂ ಹರುಷದಿಂ ನೋಡುತಂ 
ಆಡುವ ಗಣಂಗಳಂ ಗುರ್ಬಿನಿಂ ನೋಡುತಂ | 
ಬಂದು ಬಸವಣ್ಣನರಮನೆಯ ನಲವಿಂ ಪೊಕ್ಕು 
ಸಂದಣಿನ ಕೋಟೆಗ*ಣ*ಸಂಚಯಕೆ ಕೈಯಿಕ್ಕು | ೧೮೦
(*ಳ*) 


ಇರೆ ಸವೆದವಲ್ಲಿ ಉಳ್ಳಿಗಳ ಮೇಲೋಗರಂ 
ಸರಸವೆನಿಪುಳ್ಳಿಗಳ ಪಕ್ವಾನ್ನದಾಗರಂ | 
ಮಲ್ಲಿಗೆಯ ಬಣ್ಣ ಮಂ ಚಂದ್ರಿಕೆಯ ಸವಿಗಳಂ 
ಅಲ್ಲಿಯಂಕುರಿಪ ತಾರಾಗಣದ ರುಚಿಗಳಂ |
ಕವರ್ದುಕೊಂಡಂತೆ ನೆಱೆ ಥಳಥಳಿಸುವುಳ್ಳಿಯಂ 
ಶಿವಭಕ್ತ ಕಿನ್ನರಯ್ಯನ ಸವಿಯ ಉಳ್ಳಿಯಂ | 
ಸಕಳ ಪಕ್ವಾನ್ನದೋಗರತತಿಗಳು ಸವೆಯೆ 
ಸಕಳ ಶರಣರ ಶಿವಾರ್ಚನೆ ಸೌಖ್ಯಮಂ ಪಡೆಯೆ |
ಆರೈಸಲಿಕ್ಕುತಂ ಸಕಳಶಿವಲಿಂಗಕ್ಕೆ 
ಹಾರೈಸಿ ಪೊಡಮಡುತೆ ಪರಮಪ್ರಕಾಶಕ್ಕೆ |  ೧೯೦


ಕೈಕೊಂಡರಲ್ಲಿ ಸತ್ಯಪ್ರಸಾದನಂ 
ಮೈ ಕೊನರೆ ತಾಳಿದರ್ ಸುಕೃತಪ್ರಸಾದಮಂ | 
ಉಳ್ಳಿಯಂ ಕಚ್ಚಿ ಸರಿದಾಡುತಿಪ್ಪರ್ ಕೆಲರು 
ಉಳ್ಳಿಯಂ ಕಿನ್ನರನುಮಂ ಪರಸುವರ್ ಪಲರು | 
ಇಂತು ನಲವಿಂ ಪ್ರಸಾದಂಗಳಂ ಕೈಕೊಂಡು 
ಸಂತತಂ ಪರಸಿದರು ಬಸವನಂ ನೆಲೆಗೊಂಡು | 
ಅಮಮ ಶರಣರ ಬಂಧು ಶರಣರೊಲುಮೆಯ ಬಸವ 
ಅಮಮ ಶರಣೈಕಚಿಂತಾಮಣಿಯೆ ಎಲೆ ಬಸವ | -
ಅರರೆ ಶರಣರ ಮುಖದ ರತ್ನ ದರ್ಪಣ ಬಸವ 
ಅರರೆ ಶರಣರ ಮನೆಯ ಪರುಷಪುರುಷನೆ ಬಸವ |  ೨೦೦


ಬಸವಯ್ಯ ಬಸವಣ್ಣ ದಂಡನಾಥನೆ ಬಸವ 
ಬಸವ ಗಣವಿಸರದೊಳಗೆಸೆದ ಸಂಗನಬಸವ | 
ಎಂದು ಕೀರ್ತಿಸುವ ಶರಣಸ್ತುತಿಗೆ ನಡನಡುಗಿ 
ಒಂದುವಂ ಹೊಗಳದಿರಿ ಎಂದು ಚರಣದೊಳೆಱಗಿ |
ನುಡಿದನಾ ಬಸವಣ್ಣನರರೆ ಶರಣರ ಮುಂತೆ 
ಬಿಡದೆ ಮಾಡುವೆನಿಂದು ಮಾಡಿದ ತೆಱದೊಳಿಂತೆ | 
ಅತಿಶಯದೊಳೊಪ್ಪುವುಳ್ಳಿಯ ಪರ್ಬಂ ಕರಂ 
ಪ್ರತಿಸಂವತ್ಸರಂ ಮಾಡುತಿರ್ಪೆನಿಂತಿದು ಭರಂ | 
ನೇಮವೆನಗೆಂದು ನೆಱೆ ಬಸವರಾಜಂ ನುಡಿದು 
ಸೋಮಧರನೆನಿಪ ಕಿನ್ನರನ ಕರುಣಂಬಡೆದು |೨೧೦


ಕಿನ್ನರನ ಮುನಿಸನಾ ಪರ್ಬದಿಂದಂ ತಿಳಿಸಿ 
ಮನ್ನಿ ಸುತಲವರ ಪದದೊಳು ಚಿತ್ತಂ ನಿಲುಷಿ | 
ಭಕ್ತಜನವನಧಿವರ್ಧನಸುಧಾಕರನೆನಿಪ 
ಭಕ್ತ ಜನವನಜವಿಕಸಿತತರಣಿಯೆಂದೆನಿಪ | 
ಪರಸಮಯತಿಮಿರಕಮನೀಯಭಾಸ್ಕರನೆನಿಪ 
ಪರಸಮಯಸುಮನಕೋದಂಡಪುರಹರನೆನಿಪ | 
ಮಝರೆ ಶರಣರ ನಡುವೆ ಬಸವಣ್ಣನೊಪ್ಪಿದಂ 
ಮಝ ಬಾಪು ಬಾವು ಸಂಗನ ಬಸವನೊಪ್ಪಿದಂ || ೨೧೮