ಗುರುವಾರ, ಡಿಸೆಂಬರ್ 31, 2009

ಬ್ರಾಂತು ಸೂತಕ ಕ್ರಿಯೆ!

ಅಟ್ಟುದನಡುವರೆ, ಸುಟ್ಟುದ ಸುಡುವರೆ ?
ಬೆಂದ ನುಲಿಯ ಸಂಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ದಗ್ಧಸ್ಯ ದಹನಮ್‍ ನಾಸ್ತಿ, ಪಕ್ವಸ್ಯ ಪಚನಂ ಯಥಾ|
ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಾ||
ಇದು ಕಾರಣ ಕೂಡಲಚೆನ್ನಸಂಗನ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು!!


                                     ... ಚನ್ನಬಸವಣ್ಣ


Get this widget
|
Track details
|
eSnips Social DNA

ಭಾನುವಾರ, ಡಿಸೆಂಬರ್ 27, 2009

ಎಲ್ಲಿಯದೋ ನಿರ್ವಾಣ!

ತನು ನಿರ್ವಾಣವೋ, ಮನ ನಿರ್ವಾಣವೋ,
ಭಾವ ನಿರ್ವಾಣವೋ, ವಿವಿಧ ತನಗಿಲ್ಲದ ನಿರ್ವಾಣವೋ,
ಇದನಾ ನುಡಿಯಲಂಜುವೆ, ತೊಟ್ಟ ವ್ರತ ಧರ್ಮಕ್ಕೆ ಬೇಡುವೆ
ಲೆಕ್ಕವಿಲ್ಲದೆ ಆಸೆ ಮನದೊಳಗೆ ಉಕ್ಕುತ್ತಿರುವಾಡುತ್ತ
ಇಂತಿ ಚಿಕ್ಕಮಕ್ಕಳಿಗೆಲ್ಲಿಯದೋ ನಿರ್ವಾಣ
ಘಟ್ಟಿವಾಳಂಗಲ್ಲದೆ ನಿ:ಕಳಂಕಮಲ್ಲಿಕಾರ್ಜುನ

                     ... ಮೋಳಿಗೆಯ ಮಾರಿತಂದೆ


Get this widget
|
Track details
|
eSnips Social DNA

ವಿಷಯದ ದೃಷ್ಟಿಯಿಂದ ಇದು ಒಂದು ಸಾಮಾನ್ಯ ಮಟ್ಟದ ( ಈ ಮಟ್ಟದ ವಚನಗಳು ಅನೇಕಾನೇಕವಿವೆ) ವಚನವಾದರೂ ಇಲ್ಲಿ ಶಶಿಯವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಶಶಿ ಅವರಿಗೆ ಧನ್ಯವಾದಗಳು.

ಲೋಕದ ಡೊಂಕ

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮ ದೇವ
                    ..............ಬಸವಣ್ಣ


Get this widget
|
Track details
|
eSnips Social DNA

ಶನಿವಾರ, ಡಿಸೆಂಬರ್ 26, 2009

ನಿರ್ವಯಲಾದೆನು!

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

ಅಷ್ಟದಳ ಮಂಟಪದ ಅಷ್ಟ ಕೊನೆಗೊಳಳಗೆ
ಅಷ್ಟಲಿಂಗಾರ್ಚನೆಯಾ ಅಷ್ಟ ಪೂಜೆ
ಅಷ್ಟಲಿಂಗಾರ್ಪಿತವು ದೃಷ್ಟ ಪ್ರಸಾದದಿಂ
ನಿಷ್ಠೆ ನಿಜದಲ್ಲಿ ನಿರಂಜನವ ಕಂಡೆನು

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||


ಆರು ನೆಲೆ ಮಂಟಪದ ಮೂರು ಕೋಣೆಗಳೊಳಗೆ
ಬೇರೊಂದು ಸ್ಥಾನದಲಿ ಲಿಂಗವಿಹುದು
ಆರು ನೆಲೆಯನು ಮೀರಿ ಮೂರು ಬಾಗಿಲು ಮುಚ್ಚಿ
ಮೀರಿ ಕಂಡೆನು ಮಹಾಘನ ಲಿಂಗವ 

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||


ಆಕಾಶದಾ  ಮೇಲೆ ನಿರಂತರ ಸ್ಥಾನದಲಿ
ಲೋಕವನು ಹೊದ್ದರಾ ಶಿವ ನಿಲಯವು    
ಏಕಾಂತ ವಾಸದೊಳೇಕೀತರನ ಪೂಜೆ
ಓಂಕಾರ ಮಂತ್ರದಲಿ ಗೋಪ್ಯ ಗೋಪ್ಯಮ್

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

ಚಂದ್ರ ಸೂತ್ರದ ತೆರದಿ ನಿರಂತರಮ್  ನಿಜವಿಡಿದು
ಮಂತ್ರ ಭೇಧವನರಿದು ಸಂತೈಸುತ 
ನಿಶ್ಚಿಂತ ನಿರ್ಜಾತ ನಿರ್ವಯಲ ಮೀರಿದ
ಮಹಾಂತ ಕೂಡಲಚನ್ನಸಂಗಯ್ಯನು 

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

                              ......................ಚನ್ನಬಸವಣ್ಣ



Get this widget
|
Track details
|
eSnips Social DNA


ಸಂಗೀತ ಮತ್ತು ಗಾಯನ : ಕಸ್ತೂರಿ ಶಂಕರ್

ಬುಧವಾರ, ಡಿಸೆಂಬರ್ 23, 2009

ಪ್ರಾಣಲಿಂಗಿ ಸ್ಥಲಂ ಭವೇತ್

ಅರ್ಪಿತವೆಂದಡೆ ಕಲ್ಪಿತವಾಯಿತ್ತು
ಕಲ್ಪಿತವೆಂದಡೆ ಅರ್ಪಿತವಾಯಿತ್ತು 
ಅರ್ಪಿತವನೂ ಕಲ್ಪಿತವನೂ ಅದೆಂತರ್ಪಿತವೆಂಬೆ
ಶಿವಾತ್ಮಕ ಸುಖಂ ಜೀವೋ| ಜೀವಾತ್ಮಜ ಸುಖಂ ಶಿವ:||
ಶಿವಸ್ಯ ಜೀವಸ್ಯ ತುಷ್ಟ್ಯಂ| ಪ್ರಾಣಲಿಂಗಿ ಸ್ಥಲಂ ಭವೇತ್||
ಇಂತೆದುದಾಗಿ ಅರಿವರ್ಪಿತ ಮರಹು ಅನಾರ್ಪಿತ
ಎನ್ನ ಸ್ವಾಮಿ ಘಂಟೇಶ್ವರ ಲಿಂಗಕ್ಕೆ


Get this widget
|
Track details
|
eSnips Social DNA

ಗುರು ಭಕ್ತಯ್ಯನ ಈ ವಚನ ಪ್ರಾಣಲಿಂಗಿ ಸ್ಥಲವನ್ನು ವರ್ಣಿಸುತ್ತೆ.

ಶುಕ್ರವಾರ, ಡಿಸೆಂಬರ್ 04, 2009

ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯ!

ಅರಿದಡೆ ಆತ್ಮನಲ್ಲ ; ಅರಿಯದಿದ್ದಡೆ ಆತ್ಮನಲ್ಲ;
ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯವೆನಿಸುಗು ;
ಬೊಮ್ಮದ ಅರಿವಿನ್ನೆಲ್ಲಿಯದೋ ?
ಅವು ತಾನರಿವಾಗಿದ್ದು , ಸ್ವಾನುಭಾವದ ಹೊರೆಯಲ್ಲಿದ್ದು,
ಸನ್ನಿಧಿ, ನಿತ್ಯನಿಜಾನನ್ದಾತ್ಮ
ಉರಿಲಿಂಗ ಪೆದ್ಡಿ ಪ್ರಿಯ ವಿಶ್ವೇಶ್ವರನೆನ್ದರಿವುದು.

                                            .......ಉರಿಲಿಂಗ ಪೆದ್ಡಿ



Get this widget
|
Track details
|
eSnips Social DNA

ಈ ವಚನವನ್ನು ಹೆಂಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಲಿಲ್ಲ. ನೀವು ಯಾರಾದರೂ ಈ ಬಗ್ಗೆ ಬರೀತೀರ?

ಬುಧವಾರ, ಡಿಸೆಂಬರ್ 02, 2009

ಕಾಯಕ ನಿರುತನಾದರೆ!

ಕಾಯಕ ನಿರುತನಾದರೆ ಗುರುದರುಶನವಾದರೂ ಮರೆಯಬೇಕು
ಲಿಂಗ ಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯ್ಯಕ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು
------ಆಯ್ದಕ್ಕಿ ಮಾರಯ್ಯ


Get this widget
|
Track details
|
eSnips Social DNA

ಮಂಗಳವಾರ, ಡಿಸೆಂಬರ್ 01, 2009

ಛಲ ಬೇಕು ಶರಣಂಗೆ !

ಛಲ ಬೇಕು ಶರಣಂಗೆ  ಪರಧನವನೊಲ್ಲೆನೆಂಬ 
ಛಲ ಬೇಕು ಶರಣಂಗೆ  ಪರಸತಿಯನೊಲ್ಲೆನೆಂಬ 
ಛಲ ಬೇಕು ಶರಣಂಗೆ  ಪರದೈವವನೊಲ್ಲೆನೆಂಬ 
ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ
ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮ ದೇವ  



Get this widget
|
Track details
|
eSnips Social DNA