ಶುಕ್ರವಾರ, ಮಾರ್ಚ್ 04, 2022

ನಿರ್ವಾಣ ಷಟ್ಕ - ಅಚ್ಚ ಕನ್ನಡದಲ್ಲಿ

ನಿರ್ವಾಣ ಷಟ್ಕ ವನ್ನು ನಾನು ಕನ್ನಡಕ್ಕೆ ತಂದದ್ದು ಹೀಗೆ

೧.
ಅನಿಸು ಹಮ್ಮು ಹುರುಪು ಜಾಣ್ಮೆ ನಾನಲ್ಲ।
ನಾನಲ್ಲ ಕಣ್ಣು ಕಿವಿ; ನಾನಲ್ಲ ಮೂಗು ನಾಲಗೆ।
ನಾನಲ್ಲ ನೆಲ ಬಾನು; ನಾನಲ್ಲ ಉರು ಗಾಳಿ।
ಹುರ್-ನಲ್-ಅಂದವು, ಚೆನ್ ನಾನು ಚೆನ್ನ ನಾನು!

೨.
ನಾನಲ್ಲ ಉಸಿರಾಟ ನಾನಲ್ಲವಯ್ ಅಯ್ದು ಗಾಳಿ|
ಏಳು ಬೇರ್ಮಣ್ಣುಗಳಲ್ಲ ಐದು ಪಕಳೆಗಳೂ ಅಲ್ಲ|
ಮಾತು ಕಯ್ ಕಾಲುಗಳಲ್ಲ ಹಂಡಲ್ಲ ಹಡುವುದಲ್ಲ|
ಹುರ್ನಲಿವು ಎನ್ನಂದ, ಚೆನ್ ನಾನು ಚೆನ್ನ ನಾನು!

೩.
ಹಗೆ ಅಕ್ಕರೆಗಳಿಲ್ಲ ಮರುಳು ಕುದುಗುಳಿತನವಿಲ್ಲ|
ಸೊಕ್ಕಿಲ್ಲ ಕರುಬುತನವೂ ಇಲ್ಲ|
ಅಱಸಿರಿಗಳು ಬೇಟ ಮುಕುತಿಗಳಂತ ಗುರಿಯು ನಾನಲ್ಲ||
ಹುರ್ನಲಿವು ಎನ್ನಂದ, ಚೆನ್ ನಾನು ಚೆನ್ನ ನಾನು!

೪.
ಸೈಪಲ್ಲ ಕೇಡಲ್ಲ ನಲಿವು ಅಳಲುಗಳಿಲ್ಲ|
ಕಾಯ್ನುಡಿಯಲ್ಲ ತಿರುನೀರಲ್ಲ ಸೂಳ್ನುಡಿ ಹವನಗಳಲ್ಲ|
ಊಟವಲ್ಲ ಉಣ್ಣುವುದಲ್ಲ ಉಂಡವನೂ ಅಲ್ಲ|
ಹುರ್‌ನಲಿವು ಎನ್ನಂದ, ಚೆನ್ ನಾನು ಚೆನ್ನ ನಾನು!

೫.
ಸಾವಲ್ಲ ಸಾವಿನಳುಕಿಲ್ಲ ಕುಳವಲ್ಲ ಕುಳದ ಮೇಲುಕೀಳಿಲ್ಲ|
ಹುಟ್ಟಿಸಿದಪ್ಪನಿಲ್ಲ ಹೆತ್ತಮ್ಮನಿಲ್ಲ ಹುಟ್ಟೂ ಇಲ್ಲ|
ನಂಟ ಗೆಳೆಯರಿಲ್ಲ ಕಲಿಸಿದವರಿಲ್ಲ ಕಲಿತವನಲ್ಲ|
ಹುರ್ನಲಿವು ಎನ್ನಂದ, ಚೆನ್ ನಾನು ಚೆನ್ನ ನಾನು!

೬.
ಅಯ್ಬುಗಳಿಲ್ಲದವ ನಾನು ಅಂದವಿಲ್ಲದವ|
ಎಲ್ಲ ತಿಳಿವುಗಳಲ್ಲಿ ಎಲ್ಲೆಲ್ಲೂ ತೆರತೆರನೆ ಹರಡಿದವ|
ಕೂಡಿಹಾಕಿಲ್ಲ ಬಿಡುಗಡೆಗೊಂಡಿಲ್ಲ ಕಟ್ಟುಪಾಡುಗಳಿಲ್ಲ|
ಹುನ್ನಲಿವು ಎನ್ನಂದ, ಚೆನ್ ವ ನಾನು ಚೆನ್ವ ನಾನು!


--------------------------------------------------------------
ಸೆಲೆ:

ನಿರ್ವಾಣಷಟ್ಕ, ಆದಿಶಂಕರ

1.
ಮನೋ ಬುದ್ಧಿ ಅಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೆ ನಚ ಘ್ರಾಣನೇತ್ರೆ|
ನ ಚ ವ್ಯೋಮ ಭೂಮೀರ್ ನ ತೇಜೋ ನ ವಾಯುಃ
ಚಿದಾನಂದರೂಪಃ ಶಿವೋsಹಂ ಶಿವೋsಹಂ||

2.
ನ ಚ ಪ್ರಾಣ ಸಂಜ್ಞೋ ನ ವೈ ಪಂಚ ವಾಯುಃ
ನ ವಾ ಸಪ್ತಧಾತುರ್ನ ವಾ ಪಂಚ ಕೋಶಃ|
ನ ವಾಕ್ಪಾಣಿ ಪಾದೌ ನ ಚೋಪಸ್ಥಪಾಯು
ಚಿದಾನಂದರೂಪಃ ಶಿವೋsಹಂ ಶಿವೋsಹಂ||

3.
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

4.
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

5.
ನ ಮೃತ್ಯುರ್-ನ ಶಂಕಾ ನ ಮೇ ಜಾತಿ ಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್-ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

6.
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |
ನ ವಾ ಬಂಧನಂ ನೈವ ಮುಕ್ತಿರ್ ನ ಬಂಧಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ ||

------------------------------------------------


ಕುವೆಂಪು ಅವರು ಕನ್ನಡಕ್ಕೆ ತಂದ ಸಾಲುಗಳು.

ಬುದ್ಧಿ ಮನ ಚಿತ್ತಹಂಕಾರ ನಾನಲ್ಲ;
ಕಣ್ಣು ಕಿವಿ ಮೂಗಲ್ಲ, ನಾಲಗೆಮವಲ್ಲ;
ನಭವಲ್ಲ, ಧರೆಯಲ್ಲ, ಶಿಖಿ ವಾಯುವಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ಪಂಚವಾಯುಗಳಲ್ಲ, ಪ್ರಾಣ ನಾನಲ್ಲ;
ಸಪ್ತಧಾತುಗಳಲ್ಲ, ಕೋಶವೈದಲ್ಲ;
ಕರ್ಮಾಂಗ ವಿಷಯೇಂದ್ರಿಯಂಗಳಾನಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ದ್ವೇಷರಾಗಗಳಿಲ್ಲ, ಲೋಭಮೆನಗಿಲ್ಲ;
ಮೋಹ ಮದ ಮಾತ್ಸರ್ಯ ಭಾವಮೆನಗಿಲ್ಲ;
ಧರ್ಮಾರ್ಥ ಕಾಮಾದಿ ಮೋಕ್ಷ ನಾನಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ಪಾಪಪುಣ್ಯಗಳಲ್ಲ, ಸುಖದುಃಖವಲ್ಲ;
ಮಂತ್ರತೀರ್ಥಗಳಲ್ಲ, ವೇದ ಮಖವಲ್ಲ;
ಭೋಜ್ಯ ಭೋಜನವಲ್ಲ, ಭೋಕ್ತ ನಾನಲ್ಲ
ಸಚ್ಚಿದಾನಂದಾತ್ಮ ಶಿವ ನಾನು ನಾನು!

ಜಾತಿ ಭೇದಗಳಿಲ್ಲ, ಮೃತ್ಯು ಭಯವಿಲ್ಲ;
ಜನ್ಮ ಮೃತ್ಯುಗಳಿಲ್ಲ, ತಂದೆತಾಯಲ್ಲ;
ಬಂಧು ಸಖರಿಲ್ಲ, ಗುರುಶಿಷ್ಯರಿಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!

ನಿರ್ವಿಕಲ್ಪನು ನಾ ನಿರಾಕಾರ ನಾನು;
ಸರ್ವೇಂದ್ರಿಯಾತೀತ ಸರ್ವತ್ರ ನಾನು;
ಕಾಲದೇಶಾತೀತ ವಿಶ್ವವಿಭು ನಾನು;
ಸಚ್ಚಿದಾನಂದಾತ್ಮ ಶಿವ ನಾನು ನಾನು!