ಶನಿವಾರ, ನವೆಂಬರ್ 28, 2009

ಆರಿಗಾರೂ ಇಲ್ಲ,ಕೆಟ್ಟವಂಗೆ ಕೆಳೆಯಿಲ್ಲ


ಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯ
ಚಂದ್ರ ಕುಂದೆ ಕುಂದುವುದಯ್ಯಾ,

ಹುಣ್ಣಿಮೆಯಂದು ಸಮುದ್ರದಲ್ಲಿ ಅಬ್ಬರಗಳು ಸಹಜ. ಸಮುದ್ರ ನೀರಿನ ಮಟ್ಟ ಹೆಚ್ಚುತ್ತದೆ. ಚಂದ್ರ ಮರೆಯಾದಾಗ / ಅಮವಾಸ್ಯೆಯಲ್ಲಿ ಸಮುದ್ರದ ನೀರಿನ ಮಟ್ಟ ಕುಂದುತ್ತದೆ. ಚಂದ್ರನ ಗುರುತ್ವಾಕರ್ಷಣೆ ನೀರಿನ ಮಟ್ಟದ ಏರಿಳಿತಕ್ಕೆ ಕಾರಣ ವಾಗುತ್ತದೆ ಅನ್ನೋದು ತಿಳಿದ ವಿಷಯವೇ. 


ಚಂದ್ರ ( ಹುಣ್ಣಿಮೆಯೆಡೆಗೆ) ಬೆಳೆದಂತೆ ಸಮುದ್ರ (ರಾಜ?)ನೂ ಹಿಗ್ಗಿ ಏರಿಳಿಯುತ್ತಾನೆ. ಚಂದ್ರ ಕಳೆಗುಂದಿದರೆ (ಅಮಾವಾಸ್ಯೆ), ಸಾಗರ ರಾಜನೂ ಸಪ್ಪಗಾಗುತ್ತಾನೆ. ಹೀಗಿದೆ ಚಂದ್ರ ಸಮುದ್ರರ ಪ್ರೀತಿ. 


ಬಸವಣ್ಣನವರು ಈ ಪ್ರಕೃತಿ ಸಹಜ ಸಂಬಂಧದ ಗಮನಿಸುವಿಕೆಯನ್ನು ತನ್ನ ವಚನದಲ್ಲಿ, ಸೂಕ್ತ ಜಾಗದಲ್ಲಿ ಬಳಸಿಕೊಂಡಿರುವುದನ್ನು ನಾವು ಗಮನಿಸಬೇಕು.

ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯಾ ?

ಪುರಾಣಗಳಲ್ಲಿ ಅಗಸ್ತ್ಯ ಮುನಿ ಸಮುದ್ರವನ್ನು ಪೂರ್ತಿ ಕುಡಿದು ಬರಿದು ಮಾಡುವ ಕಥೆ ಬರುತ್ತೆ. ಅಂತ ಸಂದರ್ಭದಲ್ಲಿ ಸಮುದ್ರವನ್ನು ಉಳಿಸಲು ಚಂದ್ರ ಏನೂ ಮಾಡಲಿಲ್ಲ.   

ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ ಅಯ್ಯಾ ?

ಚಂದ್ರ ಗ್ರಹಣದಂದು ರಾಹು ಚಂದ್ರನನ್ನು ಹಿಡಿಯುತ್ತಾನೆ ಅನ್ನೋದು ಒಂದು ಕಥೆ. (ಇದಕ್ಕೆ ಬೇರೆ ವ್ಯಾಖ್ಯಾನ ಏನೇ ಇರಲಿ!). ಇಂತ ಗ್ರಹಣದಂದು ರಾಹು ಚಂದ್ರನನ್ನು ಹಿಡಿಯಲು ಬಂದಾಗ ಸಮುದ್ರ ರಾಜ ಚಂದ್ರನನ್ನು ಬಿಡಿಸಲು ಏನೂ  ಮಾಡಲಿಲ್ಲ. 
(ofcourse ನಮ್ಮ ಅನೇಕ ಋಷಿ ಮುನಿಗಳು ತಮ್ಮ ತಪ ಶಕ್ತಿ ಇಂದಲೋ ಅಥವಾ ತಮ್ಮ ವೀರ್ಯವೇ ಮುಂತಾದ ವಸ್ತುಗಳನ್ನು ದಾನ ಮಾಡಿಯೋ ಸೂರ್ಯನನ್ನು / ಚಂದ್ರನನ್ನು ಕೇತು / ರಾಹು ಗಳಿಂದ ಕಾಪಾಡಿರುವ ಕಥೆಗಳಿವೆ)


ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯಾ ಕೂಡಲಸಂಗಮದೇವ.


ಹೀಗೆ ಉದಾಹರಣೆ ಕೊಡುತ್ತ, ಯಾರಿಗೆ ಯಾರೂ ಇಲ್ಲ , ಕೆಟ್ಟವನಿಗೆ  ಒಳ್ಳೆಯ ಭವಿಷ್ಯವಿಲ್ಲ, ಅನ್ನುತ್ತಾ, ತುಂಬಾ ಪ್ರಾಕ್ಟಿಕಲ್ ಅರಿಕೆ ಯನ್ನು ಹೇಳುವ ಈ ವಚನ ವನ್ನು ಇಲ್ಲಿ ಕೇಳಬಹುದು.


Get this widget
|
Track details
|
eSnips Social DNAಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯಾ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯಾ ?
ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯಾ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯಾ ಕೂಡಲಸಂಗಮದೇವ.

 ...............................................ಕೆಳೆ ಅನ್ನುವ ಅದಕ್ಕೆ ಅರ್ಥ::ಕೆಳೆ (ನಾಮಪದ) ::  ೧ ಸ್ನೇಹ, ಗೆಳೆತನ, ಮೈತ್ರಿ ೨ ಸ್ನೇಹಿತ, ಗೆಳೆಯ, ಮಿತ್ರ


ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

companion (ನಾಮಪದ) :: ಕೇಳ (ಕೆಳದಿ; ಕೆಳೆಯ), ಒಡನಾಡಿ (ಒಡನಾಟ; ಒಡನಾಡು), ಹತ್ತಿಗ, ತಹಿಕಾರ
mate (ನಾಮಪದ) :: ಕೆಳ (ಕೆಳೆಯ, ಕೆಳದಿ), ಗಂಡ, ಹೆಂಡತಿ

1 ಕಾಮೆಂಟ್‌: