ಶನಿವಾರ, ಜೂನ್ 07, 2025

September 2007 ರ ಬರಹ 
---
ಆರ್ಕುಟ್ ನ ಒಂದು ತಾಣ ದಲ್ಲಿ ಒಬ್ಬ ನನ್ನ ಗೆಳೆಯ ಈಗೊಂದು ಪ್ರಶ್ನೆ ಕೇಳಿದ್ದ.
ಲಿಂಗಾಯಿತರು ಏಕೆ ಹೆಣವನ್ನು ಹೂಳುತ್ತಾರೆ? ಇತರೆ ಹಿಂದುಗಳು ಏಕೆ ಹೂಳುವುದಿಲ್ಲ ಬದಲು ಸುಡುತ್ತಾರೆ?

ನನಗೆ ಈ ವ್ಯತ್ಯಾಸ ಮೊದಲಿನಿಂದಲೂ ತಿಳಿದಿದ್ದರೂ , ಇದರ ಬಗ್ಗೆ ಯೋಚಿಸಿರಲಿಲ್ಲ. ಕಾರಣವೂ ತಿಳಿದಿರಲಿಲ್ಲ!.
ಇದರ ಬಗ್ಗೆ ಹೀಗೆ ಯೊಚಿಸ ಶುರು ಮಾಡಿದಾಗ ಎರಡು ವಚನಗಳು ನೆನಪಿಗೆ ಬಂದವು.

1...ಎಮ್ಮವರಿಗೆ ಸಾವಿಲ್ಲ.. ಎಮ್ಮವರು ಸಾವನರಿಯರು.
ಸಾವೆಂಬುದು ಸ್ವಯವಲ್ಲ..
ಲಿಂಗದಿಂದುದಿಸಿ ಲಿನ್ಗೈಕ್ಯರಾದವರಿಗೆ
ಲಿಂಗದಲ್ಲಿಯಲ್ಲದೇ ಬೇರೆಡೇ ಸ್ಥಳವುಂಟೆ ಕೂಡಲಸಂಗಮದೇವ!!

2.ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!!
ಇದು ಕಾರಣ ಕೂಡಲ ಚೆನ್ನ ಸಂಗನ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು

ಈ ವಚನಗಳ ಬಗ್ಗೆ ಚರ್ಚಿಸುವುದಕ್ಕಿಂತ ಮುಂಚೆ ವೀರ ಶೈವ ದಲ್ಲಿನ "ದೈವದ ಕಲ್ಪನೆ ಮತ್ತು ಅದರ ಸಾಕ್ಷಾತ್ಕಾರ" ( ಕಾನ್ಸೆಪ್ಟ್ ಆಫ್ ಗಾಡ್ ಅಂಡ್ ರಿಯಲೈಸೇಶನ್!) ಗೂ ಇತರೆ ಇತರೆ ಹಿಂದೂ ಮಾರ್ಗಗಳಲ್ಲಿ ಸ್ವಲ್ಪ ವೈತ್ಯಸ ವಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ವೀರಶೈವ ಒಂದು ಇಂಡಿಪೆಂಡೆಂಟ್ ಆದಂತಹ ಮಾರ್ಗ ಎಂಬುದು ಎಲ್ಲರಿಗೂ ತಿಳಿದ ವಿಷಯ. ದೈವದ ಸಾಕ್ಷಾತ್ಕಾರಕ್ಕೆ ಈ ಮಾರ್ಗ "ಷಟ್ ಸ್ಥಲ" ಜ್ಞಾನ ದ ದಾರಿಯನ್ನು ತೋರಿಸುತ್ತೆ, ಅಷ್ಟಾವರಣ ಗಳನ್ನು ಹೇಳುತ್ತೆ, ಪಂಚಾಚಾರಗಳನ್ನು
ವಿಧಿಸುತ್ತೆ ಎಂದು ನಮಗೆಲ್ಲ ತಿಳಿದ್ದಿದೆ. ಈ ರೀತಿಯಲ್ಲಿ ಇದು ಒಂದು ವಿಶಿಷ್ಟ ಮಾರ್ಗ. ಬೇರೆ ಮಾರ್ಗಗಳಿಗಿನ್ತ ಬಿನ್ನ. ಇಡೀ ಪೀಟಿಕೆ ಅಷ್ಟೇ..

ಇವಲ್ಲದೇ ಲಿಂಗಾಯತಕ್ಕೂ ಇತರೆ "ಬ್ರಾಹ್ಮಣೀಯ" ಮಾರ್ಗಗಳಿಗೂ ಒಂದು ವಿಶೇಷ ವೈತ್ಯಸ ವಿದೆ. ಅದು ಶವ ಸಂಸ್ಕಾರ!.. ಇದರ ಬಗ್ಗೆ ನೇ ಇವತ್ತು ನಾನು ಬರೆಯಬೇಕು ಅಂದುಕೊಂಡಿರೋದು!

ಇತರೆ ಮಾರ್ಗಗಳ ಬಗ್ಗೆ ನನಗೆ ಅಷ್ಟೊಂದು ತಿಳಿದಿಲ್ಲ. ಈ ಮಾರ್ಗದ ಬಗ್ಗೆಯೂ ತಿಳಿದಿಲ್ಲ! .. ಅಲ್ಲಿ ಇಲ್ಲಿ ಓದಿ, ಕೇಳಿದ ಮೇಲೆ ನನಗೆ ಬಂದ ಅನಿಸಿಕೆಗಳನ್ನು ಇಲ್ಲಿ ಬರೆಯುತ್ತಾ ಇದ್ದೇನೆ.

ವೇದಾಂತ ದಲ್ಲಿ ತುಂಬಾ ಪ್ರಖ್ಯಾತ ವಾದಮ್ತಹ ಕೆಲವು ವಾಕ್ಯಗಳು ಇದ್ದಾವೆ.
ಇಡೀ ವೇದಾಂತದ ತಿರುಳು / ಸಾರಾಂ ಷ ಅಂತ ಕರೆಬಹುದಾದ ವಾಕ್ಯಗಳು ಇವು..

ದೇಹಮ್ ನಾಹಮ್ ( ಈ ದೇಹ ನಾನಲ್ಲ )
ಕೋಹಂ? (ನಾನು ಯಾರು?)
ಸೋಹಮ್. ( ಅದೇ ನಾನು!)

ವೇದಾಂತದ ಪ್ರಕಾರ ನಿಜದ ನಾನು ಈ ದೇಹವಲ್ಲ, ಈ ದೇಹ ನಾನು ಎಂಬುದು ಅಜ್ಞಾನ! ಅದೊಂದು ತಪ್ಪು ತಿಳುವಳಿಕೆ! ಇಂತಹ ತಪ್ಪು ತಿಳಿವಳಿಕೆಯನ್ನ ಅಮ್ಧಕಾರವನ್ನು ಅಜ್ಞಾನವನ್ನು ಶರಣ ತನ್ನ ಸಾಧನೆ ಇಂದ / ದೀಕ್ಷೆ ಇಂದ ಈಗಾಗಲೆ ಸುಟ್ಟುಬಿಟ್ಟಿದ್ದಾನೆ!

ಅಹಂ ಎಂಬ ಇನ್ನೊಂದು ಭಾವ ವಿದೆ. ಅಹಂ ಅಂದ್ರೆ ಏನು , ಅದು ಹೇಗೆ ನಮ್ಮನ್ನು ನಿಜದ ಅರಿವು ನಿಂದ ದೂರ ಇಡುತ್ತೆ! ಈ ಅಹಂ ಅತ್ವ ಜಂಬ ಹೇಗೆ ನಮ್ಮನ್ನು ಬನ್ದನಕ್ಕೆ ಒಳಪಡಿಸುತ್ತೆ ! ಅಂತ ಸಾಕಷ್ಟು ಓದಿ ಕೊನ್ಡಿದ್ದೀರಿ ನೀವುಗಳು.

ಈಗ ವಚನಕ್ಕೆ ಬರೋಣ. "ಅಟ್ಟುದನಡುವರೇ?" . ಇಲ್ಲಿ ಅಡುವುದು ಅಂದ್ರೆ ಹೊರಹಾಕುವುದು ಎಂದು. ಹೊರಹಾಕಿದ್ದನ್ನು ಮತ್ತೊಮ್ಮೆ ಹೊರಹಾಕಲಗುವುದೆ? ಎಂಬ ಪ್ರಶ್ನೆ.. ಉತ್ತರವೋ ಅಲ್ಲಿಯೇ ಇದೆ.. ಅದು ಸಾದ್ಯವಿಲ್ಲ! . ಶರಣ ತನ್ನ ಆತ್ಮನಿವೇದನೆ, ದಾಸೋಹ , ಕಾಯಕ, ಮುಂತಾದ ತನ್ನ ನಿತ್ಯ ಕರ್ಮಗಳಿಂದ ತನ್ನ ಅರಿವಿನಿನ್ದ ತನ್ನ ಅಹಂ ಅನ್ನು ಹೊರಹಾಕಿದ್ದಾನೆ. ಅದನ್ನು ಮತ್ತೆ ಹೊರಹಾಕಲು ಬರೋಲ್ಲ.
"ಸುಟ್ಟುದ ಸುಡುವರೆ?" .. ಶರಣರ ವೈರಾಗ್ಯ , ತ್ಯಾಗ ಜೀವನ , ಅವರ ಅರಿವು " ಈ ದೇಹ ಅಂದ್ರೆ ನಾನು" ಎಂಬ ತಪ್ಪು ತಿಳುವಳಿಕೆ ಯನ್ನ ಈಗಾಗಲೆ ಸುಟ್ಟು ಹಾಕಿದೆ!. ಮತ್ತೊಮ್ಮೆ ಅಚರಣೆಗಾಗಿ ಸುಡುವುದು ಅದೊಂದು ಭ್ರಾನ್ತು!

ಶಿವನಿಗೆ ಶರಣಾದನ್ತಹ ಶರಣನ ದೇಹವನ್ನು ಸುಟ್ಟು ಆವನು ದೇಹಾತ್ಮ ಬುದ್ದಿ ಗಿಂತ ಮೇಲೆ ಬಂದಿದ್ದಾನೆ ಎಂದು ಸ್ಟಾಪೀಸುವಮುಕ್ಯವಾಹಿನಿಯ ಅವಶ್ಯಕತೆ ಇಲ್ಲ.

ಬಹುಶಃ ಪ್ರಮುಖ ವಾಹಿನಿಯ ಹಿಂದೂಗಳಲ್ಲಿ , ಸತ್ತನಂತರ ಆತ್ಮವನ್ನು ದೇಹದಿಂದ ಬಿಡುಗಡೆಗೊಳಿಸಬೇಕು ಅನ್ನುವಂತಹ ನಂಬಿಕೆ ಬೆಳದು ಬಂದ ಕಾರಣ , ದೇಹವನ್ನು ಸುಡುವ ಪ್ರಕ್ರಿಯೆ ಪ್ರಾರಂಬವಾಗಿರಬೇಕು. ಸುಟ್ಟು ಆತ್ಮವನ್ನು ದೇಹದಿಂದ ಮುಕ್ತಿಗೊಳಿಸಲು!

ಬಸವಣ್ಣನವರು ಹೀಗೆ ಹೇಳುತ್ತಾರೆ.

ಎಮ್ಮವರಿಗೆ ಸಾವಿಲ್ಲ.. ಎಮ್ಮವರು ಸಾವನರಿಯರು.
ಸಾವೆಂಬುದು ಸ್ವಯವಲ್ಲ..
ಲಿಂಗದಿಂದುದಿಸಿ ಲಿನ್ಗೈಕ್ಯರಾದವರಿಗೆ
ಲಿಂಗದಲ್ಲಿಯಲ್ಲದೇ ಬೇರೆಡೇ ಸ್ಥಳವುಂಟೆ ಕೂಡಲಸಂಗಮದೇವ!!

ಬಹುಶಹ ಮೇಲಿನ ವಚನವನ್ನು ಹೀಗೆ ಅರ್ತ ಮಾಡಿಕೊಳ್ಳಬಹುದು. ಶಟ್ ಸ್ಥಲ ಜ್ನಾನಿಯಾದ ಶರಣ ಆತ್ಮ ಜ್ಞಾನಿ. ಹೇಗೆ ಆತ್ಮಕ್ಕೆ ಸಾವಿಲ್ಲವೋ ಹಾಗೆಯೇ ಆತ್ಮಜ್ನಾನಿಗೂ..
ಹಾಗಾಗಿಯೇ ಬಸವಣ್ಣ ಹೇಳೋದು.. ಶರಣರಿಗೆ ಸಾವು ಎಂಬುದು ಇಲ್ಲ, ಸಾವು ಎಂಬುದು ಅವರ ಪಾಲಿಗೆ ಇಲ್ಲ. ಸಾವು ಎಂಬುದು ನಿಜವಲ್ಲ, ಅದೊಂದು ಬ್ರಾನ್ತು.
ನಾವೆಲ್ಲರೂ ಆ "ಪರಬ್ರಹ್ಮ" ವಸ್ತು ವಿನಿಂದ / ಮಹಾ ಘನ ದಿಂದ / ಲಿಂಗದಿಂದ ಬಂದಿದ್ದೇವೆ , ಅಲ್ಲಿಗೆ ಮತ್ತೆ ಮರಳುತ್ತೇವೆ. ಬೇರೆಲ್ಲಿಗೂ ಅಲ್ಲ,. ಸ್ವರ್ಗ ನರಕ ಗಳ ಕಲ್ಪನೆಯನ್ನು ಶರಣರು ನಿರಾಕರಿಸುತ್ತಾರೆ ಶರಣರು.
ಒಂದು ವಿಶೇಷವನ್ನು ಇಲ್ಲಿ ಗಮನಿಸಬೇಕು. ಷಟ್ ಸ್ಥಲ ಸಾಧಕನಿಗೆ ಇಲ್ಲಿ ಮೋಕ್ಷ ಇಲ್ಲಿ ಖಚಿತ!


ಒಂದು ವಿಶೇಷವನ್ನು ಇಲ್ಲಿ ಗಮನಿಸಬೇಕು. ಷಟ್ ಸ್ಥಲ ಸಾಧಕನಿಗೆ ಇಲ್ಲಿ ಮೋಕ್ಷ ಇಲ್ಲಿ ಖಚಿತ! ಇದು ವೀರಶೈವದ ವಿಶೇಷ!

ನಾನು ಒಬ್ಬ ನಾಸ್ತಿಕನಾಗಿ ಯೋಚನೆ ಮಾಡಿದ್ರೂ, ಆತ್ಮ ಎಂದರೆ ಒಂದು "ಎನರ್ಜೀ" ಅಂತ ತಗೋಂಡ್ರೂ, ಇದನ್ನ ನಾವು ಒಪ್ಪಬಹುದು. ಆ ಎನರ್ಜೀ ಎಲ್ಲಿನ್ದನೋ ಬಂದಿತ್ತು!, ಅಲ್ಲಿಗೆ ಹೋಯ್ತು / ..ಹೋಗುತ್ತೆ.. ಅಷ್ಟೇ .. ಸಿಂಪಲ್!!!
ಸುಮ್ಮನೇ ಮೋಕ್ಷಕ್ಕಾಗಿ ನೀ ಅದನ್ನ ಬಿಡು ಇದನ್ನ ಬಿಡು, ಅದನ್ನ ಮಾಡು, ಇದನ್ನ ಮಾಡಬೇಡ.. ಯಾಕೆ ಇವೆಲ್ಲ ಸುಮ್ನೇ ಗೊಡ್ಡು ನಂಬಿಕೆಗಳು?

ನಮ್ಮ ಎಷ್ಟೋ ಆಚರಗಳಿಗೆ ( ರಿಟೂವಲ್ಸ್) ವಿಚಾರಗಳು , ನಂಬಿಕೆಗಳು ಆಧಾರ. ಮುಕ್ಯವಾಹಿನಿಯ ಹಿಂದೂಗಳ ನಂಬಿಕೆ ಪ್ರಕಾರ ಈ ದೇಹವನ್ನು ಸುಟ್ಟು ಆತ್ಮವನ್ನು ಬಿಡುಗಡೆ ಮಾಡುವುದು, ಅತ್ವ ಈ ದೇಹವನ್ನು ಸುಟ್ಟು "ನಾನು ಅಂದ್ರೆ ಈ ದೇಹ" ಎಂಬ ಅಜ್ಞಾನವನ್ನು ಸುಟ್ಟೆ ಎಂದು ಬ್ರಮಿಸುವುದು ಒಂದು ಪ್ದ್ದತಿಯಾಗಿ ಬೆಳೆದು ಬಂದಿರಬಹುದು. ಬಹುಶಃ ಪ್ರಮುಖ ವಾಹಿನಿಯ ಹಿಂದೂಗಳಲ್ಲಿ , ಸತ್ತನಂತರ ಆತ್ಮವನ್ನು ದೇಹದಿಂದ ಬಿಡುಗಡೆಗೊಳಿಸಬೇಕು ಅನ್ನುವಂತಹ ನಂಬಿಕೆ ಬೆಳದು ಬಂದ ಕಾರಣ , ದೇಹವನ್ನು ಸುಡುವ ಪ್ರಕ್ರಿಯೆ ಪ್ರಾರಂಬವಾಗಿರಬೇಕು. ಸುಟ್ಟು ಆತ್ಮವನ್ನು ದೇಹದಿಂದ ಮುಕ್ತಿಗೊಳಿಸಲು
ಈಗ ವಚನಕ್ಕೆ ಬರೋಣ. "ಅಟ್ಟುದನಡುವರೇ?" .
ಇಲ್ಲಿ ಅಡುವುದು ಅಂದ್ರೆ ಹೊರಹಾಕುವುದು ಎಂದು. ಹೊರಹಾಕಿದ್ದನ್ನು ಮತ್ತೊಮ್ಮೆ ಹೊರಹಾಕಲಗುವುದೆ? ಎಂಬ ಪ್ರಶ್ನೆ..
ಉತ್ತರವೋ ಅಲ್ಲಿಯೇ ಇದೆ.. ಅದು ಸಾದ್ಯವಿಲ್ಲ! . ಶರಣ ತನ್ನ ಆತ್ಮನಿವೇದನೆ, ದಾಸೋಹ , ಕಾಯಕ, ಮುಂತಾದ ತನ್ನ ನಿತ್ಯ ಕರ್ಮಗಳಿಂದ
ತನ್ನ ಅರಿವಿನಿನ್ದ ತನ್ನ ಅಹಂ ಅನ್ನು ಹೊರಹಾಕಿದ್ದಾನೆ. ಅದನ್ನು ಮತ್ತೆ ಹೊರಹಾಕಲು ಬರೋಲ್ಲ.

"ಸುಟ್ಟುದ ಸುಡುವರೆ?" ..
ಶರಣರ ವೈರಾಗ್ಯ , ತ್ಯಾಗ ಜೀವನ , ಅವರ ಅರಿವು " ಈ ದೇಹ ಅಂದ್ರೆ ನಾನು" ಎಂಬ ತಪ್ಪು ತಿಳುವಳಿಕೆ ಯನ್ನ ಈಗಾಗಲೆ ಸುಟ್ಟು ಹಾಕಿದೆ!.
ಮತ್ತೊಮ್ಮೆ ಅಚರಣೆಗಾಗಿ ಸುಡುವುದು ಅದೊಂದು ಭ್ರಾನ್ತು!
ಅಜ್ಞಾನವನ್ನು ಸುಟ್ಟು ಬೂದಿ ಮಾಡಿದ ಮೇಲೆ , ಅದನ್ನು ಮತ್ತೆ ಸುಟ್ಟು ಹಾಕಲು ಸಾದ್ಯವಿಲ್ಲ!

ಶರಣ ಸತಿ ಲಿಂಗ ಪತಿ" ಭಾವನೆಯ , ಶಿವನಿಗೆ ಶರಣಾದನ್ತಹ , ಆವನು ದೇಹಾತ್ಮ ಬುದ್ದಿ ಗಿಂತ ಮೇಲೆ ಬಂದಿದ್ದಾನೆ ಎಂದು ಸ್ಟಾಪೀಸುವ ಅವಶ್ಯಕತೆ ಬರುವುದಿಲ್ಲ.

ಬೆಂದ ನುಲಿಯಾ ಸಂಧಿಸಬಹುದೆ?.. ನುಲಿ ಎಂದರೆ ಇಲ್ಲಿ ಹಗ್ಗ, ನೂಲು, ತಿರುಚಿ ಮಾಡಲ್ಪಟ್ಟ ವಸ್ತು ಎಂದರ್ಥ. . ನಮ್ಮ ಭವ ಬಂಧನಗಳಿಗೆ ಹೋಲಿಸಬಹುದು. ನಾವು ಸಹಾ ಈ ಸಂಸಾರದ ಮೋಹ , ಕಾಮನೆಗಳಿಗೆ, ಸಂಬಂದಗಳಿಗೆ ಹಗ್ಗದಂತೆ ಹೊಸೇದುಕೊಂಡಿದ್ದೇವೆ. ಹಗ್ಗವನ್ನು ಬೇಯಿಸಿದರೆ, ಅದರ ತಿರುಚುಗಳೆಲ್ಲ ಮೆತ್ತಗಾಗಿ, ಬಿಡಿಬಿಡಿಯಾಗಿ ಎಳೆಗಳೆಲ್ಲ ಕಡಿದುಹೋಗಿ ಬಲವಿಲ್ಲದೆ ತುಂಡಾಗಿಬಿಡುತ್ತದೆ . ಶರಣ ತನ್ನ ಸಾಧನೆಗಳಿಂದ ಅಂತಹ ಸಮ್ಬನ್ದಗಳ ವ್ಯಮೋಹಗಳನ್ನ ಕಳಚಿದ್ದಾನೆ, ಸುಟ್ಟು ಹಾಕಿದ್ದಾನೆ.. .ಬೆಂದ ಹಗ್ಗವನ್ನು ಮತ್ತೆ ಸೇರಿಸಲು ಅಸಾಧ್ಯ; ಕಳಚಿದ ವ್ಯಾಮೋಹಗಳು ಮತ್ತೆ ಶರಣನಿಗೆ ಬರಲು ಸಾದ್ಯವಿಲ್ಲ. ಹಾಗಾಗಿ ಹಾಗಾಗಿ ಶರಣ ನ ದೇಹವನ್ನು ಮತ್ತೆ ಸುಟ್ಟರೆ ಅದು ಒಂದು ಭ್ರಾಂತೂ ಕ್ರಿ

ಸಂಸ್ಕೃತದ "ದೇಹ"ಕ್ಕೆ "ಶರೀರ" ಎಂದು ಮಾತ್ರವಲ್ಲದೆ "ಅಂಟಿಕೊಂಡ" ಎಂಬರ್ಥವೂ ಇದೆ. ಷಟ್ ಸ್ಥಲ ಸಾಧನೆಯಲ್ಲಿ, ಪಂಚಾಕ್ಷರ ಮಂತ್ರದ ಜಪತಪಾದಿಗಳಿಂದ ಸುಡಲ್ಪಟ್ಟು "ದೇಹವೆಂಬ ಅಂಟನ್ನು" ಕಳೆದುಕೊಂಡವನು ಆತ್ಮಸ್ವರೂಪ!

೧.ಅವನಿಗೆ ಸಂ-ದೇಹ(ಇಹಲೋಕದ ಶರೀರ)ವುಂಟೇ? = ಅವನಿಗೆ ಪುನರ್ಜನ್ಮವುಂಟೇ.. ಹೀಗಾಗಿ ಅವನಿಗೆ ಸಾವೂ ಇಲ್ಲ , ಮತ್ತೊಂದು ಜನ್ಮಾವೂ ಇಲ್ಲ. ೨.ಅವನಿಗೆ ಸಂದೇಹ(ಶಂಕೆ, ಅನುಮಾನ) ಉಂಟೇ? = ಅವನಿಗೆ ತಾನೇ ಆತ್ಮನೆಂಬುದರ ಬಗ್ಗೆ ಸಂದೇಹವುಂಟೇ..

ಶರಣ ಈಗಾಗಲೆ ದೇಹವನ್ನು ಸುಟ್ಟು ಆತ್ಮ ಸ್ವರೂಪಿಯಾಗಿದ್ದಾನೆ. ಅವನ ದೇಹವನ್ನು ಇನ್ನೊಮ್ಮೆ ಸುಡುವುದು ಬ್ರಾನ್ತು ಕ್ರಿಯಾಕರ್ಮವಲ್ಲವೆ ಎಂಬುದು ವಚನ ಕಾರನ ಪ್ರಶ್ನೆ.

ಶರಣ ಈಗಾಗಲೆ ದೇಹವನ್ನು ಸುಟ್ಟು ಆತ್ಮ ಸ್ವರೂಪಿಯಾಗಿದ್ದಾನೆ. ಅವನ ದೇಹವನ್ನು ಇನ್ನೊಮ್ಮೆ ಸುಡುವುದು ಬ್ರಾನ್ತು ಕ್ರಿಯಾಕರ್ಮವಲ್ಲವೆ ಎಂಬುದು ವಚನ ಕಾರನ ಪ್ರಶ್ನೆ. ಜ್ಞಾನಾಗ್ನಿಯಿಂದ ಸುಡಲ್ಪಟ್ಟ ದೇಹವನ್ನು ಪುನರ್ದಹಿಸುವ ಅವಶ್ಯಕತೆ ಇಲ್ಲ.
ಈ ಕಾರಣಗಳಿನ್ದ ಶರಣರು ದೇಹವನ್ನು ಸುಡುವುದಿಲ್ಲ. ಬದಲಿಗೆ ಮಣ್ಣು ಮಾಡುತ್ತಾರೆ.

2 ಕಾಮೆಂಟ್‌ಗಳು:

  1. http://www.vachanasahitya.org/DetailedKirPoem.asp?ID=14556&TableName=keerthanas

    ಪ್ರತ್ಯುತ್ತರಅಳಿಸಿ
  2. ಪ್ರಿಯ ಸವಿತೃ,

    ನಮಸ್ಕಾರ. ಹೇಗಿದ್ದೀರಿ?

    ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    ಸುಶ್ರುತ ದೊಡ್ಡೇರಿ

    ಪ್ರತ್ಯುತ್ತರಅಳಿಸಿ