ದೇಹಭಾವವಳಿದಲ್ಲದೆ ಜೀವ ಭಾವವಳಿಯದು
ಜೀವ ಭಾವವಳಿದಲ್ಲದೆ ಭಕ್ತಿ ಭಾವವಳವಡದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು
ಕುರುಹು ನಷ್ಟವಾಗಲ್ಲದೆ ಮಾಯೆ ಹಿಂಗದು
ಇದು ಕಾರಣ ಕಾಯದ ಜೀವದ ಹೊಲಿಗೆ ಅಳಿದ ಭೇಧವ ತಿಳಿಯಬಲ್ಲರೆ
ಗುಹೇಶ್ವರಲಿಂಗದ ಅರಿವು ಸಾಧ್ಯಬಹುದು ಸಿದ್ದರಾಮಯ್ಯ
..................ಅಲ್ಲಮ ಪ್ರಭು
http://www.raaga.com/player4/?id=72720&mode=100&rand=0.4384112348780036
.......................