#ತ್ರಿವಿಧ ಗಳಾವು?
#ಅನ್ನ_ಅಕ್ಷರ_ಅರಿವು ಗಳೇ ಆ ಮೂರುತರಗಳು
#ದಾಸೋಹ ಎಂದರೆ?
ದಾಸೋಹಂ ಎನ್ನುವ ದೇಹಕೇಂದ್ರಿತ ತತ್ವವನ್ನ ಸಮಾಜಮುಖಿಯಾಗಿಸಿದರದುವೇ ದಾಸೋಹ. ಭಕ್ತಸ್ತಲದಲ್ಲಿ ದಾಸೋಹಂ ( ದ್ವೈತ ಭಾವ) ಕಂಡುಬಂದರೆ ಪ್ರಾಣಲಿಂಗಿ ಸ್ಥಲದಲ್ಲಿ ಸೋಹಂ (ಅದ್ವೈತ) ಭಾವ ಗುರ್ತಿಸಬಹುದು. ದಾಸೋಹ ಭಾವ ಎರಡನ್ನೂ ಮೀರಿದ್ದು. ಇದು ಶರಣ ಸ್ಥಲ. ಹರನಿಗೋ ಹರಿಗೋ ದಾಸ ಅನ್ನೋ ಭಾವನೆ ಶರಣ ಸ್ಥಲವಲ್ಲ... ಈ ಸಮಾಜದ ಒಳಿತಿನ ಜವಬ್ಧಾರಿ ತನ್ನ ಮೇಲಿದೆ ಅನ್ನೋ ಅರಿವು ಮತ್ತು ಅದಕ್ಕೆ ಬೇಕಿರುವ ಕಸುವು ಶರಣ ಸ್ತಲ.
#ತ್ರಿವಿಧದಾಸೋಹ ಎಂದರೆ?
ಅನ್ನ ಅಕ್ಷರ ಅರಿವು (ಆಶ್ರಯ?) ಗಳೆಂಬವು ಎಲ್ಲ ಮಂದಿಗೂ ಕಡ್ಡಾಯವಾಗಿ ಬೇಕಿರುವಂತವು. ಏನಿರುತ್ತೋ ಇಲ್ಲವೋ ಇವಂತೂ ಎಲ್ಲರಿಗೂ ಸುಳುವಾಗಿ ಸಿಗಬೇಕು. ಆಗಲೇ ಈ ನಾಡು ನಾಡವರ ನಲಿವು ಒಲವು ಚೆಲುವು. ಕೂಡಣಕ್ಕೆ / ಸಮಾಜಕ್ಕೆ ಈ ಮೂರುತರನ ಕಡ್ಡಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಿಸುವುದೇ ತ್ರಿವಿಧದಾಸೋಹ.
ಶರಣ ಸಂಸ್ಕೃತಿಯಲ್ಲಿ ಈ ತ್ರಿವಿಧದಾಸೋಗಳ ಪಾತ್ರ?
ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
#ತ್ರಿವಿಧದಾಸೋಹ ದಲಲ್ಲದೆ ಕಾಣಬಾರದು ಕೂಡಲಸಂಗಮದೇವನ.
- ಬಸವಣ್ಣ
#ತ್ರಿವಿಧದಾಸೋಹಿ