Showing posts with label ಅಕ್ಕ ಮಹಾದೇವಿ. Show all posts
Showing posts with label ಅಕ್ಕ ಮಹಾದೇವಿ. Show all posts

Monday, October 31, 2011

ಎಂದೆಂದು ಬಿಡದ ಬಾಳುವೆ

ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ ಹಾಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು
ಎಂದೆಂದು ಬಿಡದ ಬಾಳುವೆಗೆ ಕೊಟ್ಟರೆನ್ನ
ಚನ್ನಮಲ್ಲಿಕಾರ್ಜುನನೆಂಬ
ಗಂಡಂಗೆನ್ನ ಮದುವೆಯ ಮಾಡಿದರೆಲೆ