#ವಿಭಕ್ತಿಪ್ರತ್ಯಯ ಗಳ ಕಲ್ಪನೆ ಭಾರತೀಯ ಭಾಷೆಗಳಲ್ಲಿ ಕಂಡುಬರುತ್ತದೆ. ಸಂಸ್ಕೃತದಲ್ಲಿ ಮತ್ತು ಇಂಡೋಯುರೋಪಿಯನ್ ಭಾಷೆಗಳಲ್ಲಿ ಇವುಗಳನ್ನು ಪ್ರತ್ಯೇಕವಾಗಿ ಬಳಸಿದರೆ ಅರ್ಥ ಇರುವುದಲ್ಲ. ಆದರೆ ಇತರ ಪದಗಳೊಂದಿಗೆ ಸೇರಿಸಿದಾಗ ಪದಗಳ ಅರ್ಥವನ್ನು ಬದಲಾಯಿಸುತ್ತವೆ. ಕನ್ನಡದಲ್ಲಿ ನಿರ್ದಿಷ್ಟ ಪ್ರತ್ಯಯಗಳು ಇಲ್ಲ. ಇತರ ಪದಗಳೇ ಈ ಕೆಲಸ ಮಾಡುತ್ತವೆ. ಇದು ಕನ್ನಡ ಮತ್ತು ಸಂಸ್ಕೃತದ ನಡುವಿನ ಹಲವಾರು ವ್ಯತ್ಯಾಸಗಳಲ್ಲಿ ಒಂದು.
೧. #ಕನ್ನಡದಲ್ಲಿ
ವಿಭಕ್ತಿ ಪ್ರತ್ಯಯಗಳ ಬಗ್ಗೆ ಮಾತನಾಡುವಾಗ, ಕೇಶಿರಾಜನ ಹಳಗನ್ನಡದಲ್ಲಿ "#ಮಮಿಂಕೆಅದದೊಳ್" ಎಂಬ ಸೂತ್ರವಿದೆ. ಇವು ಕ್ರಮವಾಗಿ ಒಂದರಿಂದ ಏಳು ವಿಭಕ್ತಿಗಳನ್ನು ಸೂಚಿಸುತ್ತವೆ. ಇವುಗಳನ್ನು ಆಧರಿಸಿ ಹೊಸ ಕನ್ನಡದಲ್ಲಿ "ಉ", "ಅನ್ನು", "ಇಂದ", "ಗೆ", "ದೆಸೆಯಿಂದ", "ಅ", "ಅಲ್ಲಿ" ಎಂಬ ಪದಗಳನ್ನು ಬಳಸಲಾಗುತ್ತದೆ.
ಉದಾಹರಣೆಗೆ, ಷಷ್ಠಿ / ಆರನೇ ವಿಭಕ್ತಿಯನ್ನು ತೆಗೆದುಕೊಳ್ಳೋಣ. ಇದು ಪೂರ್ವದ ಹಳಗನ್ನಡದಿಂದಲೂ (ಅ, ಆ) ಬದಲಾಗದೆ "ಅ" ಎಂಬ ಅಕ್ಷರವೇ ಆಗಿ ಉಳಿದಿದೆ. ಈ ವಿಭಕ್ತಿಯು ನಂಟು / ಸಂಬಂಧ / ಒಡೆತನವನ್ನು ಸೂಚಿಸುತ್ತದೆ.
ಬಳಕೆ:
ಆರನೇ ವಿ.ಪ್ರ ವಾದ "ಅ" ಎಂಬದು ಕೆಲವೊಮ್ಮೆ "ದ", "ಯ", "ನ", "ರ", "ಯ", "ವ" ಗಳಾಗಿ ಬದಲಾಗುತ್ತದೆ.
ಕನ್ನಡ + ಅ > ಕನ್ನಡದ
ಹಳ್ಳಿ + ಅ > ಹಳ್ಳಿಯ
ಅಣ್ಣ (ನ್) + ಅ > ಅಣ್ಣನ
ವೀರಶೈವ (ರ್) + ಅ > ವೀರಶೈವರ
ಲಿಂಗಾಯತ + ಅ > ಲಿಂಗಾಯತರ / ಲಿಂಗಾಯತನ / ಲಿಂಗಾಯತದ
ಬೆಂಗಳೂರು + ಅ > ಬೆಂಗಳೂರ
೨. #ಸಂಸ್ಕೃತ ದಲ್ಲಿ:
ಕನ್ನಡದಲ್ಲಿ ಎರಡು ವಚನಗಳು ಇದ್ದರೆ, ಸಂಸ್ಕೃತದಲ್ಲಿ ಮೂರು ವಚನಗಳಿವೆ - ಏಕವಚನ, ದ್ವಿವಚನ ಮತ್ತು ಬಹುವಚನ. ಇದು ಕೂಡ ಕನ್ನಡ / ಸಂಸ್ಕೃತ ಗಳ ನಡುವೆ ಇರುವ ವ್ಯತ್ಯಾಸಗಳಲ್ಲಿ ಒಂದು.
ರಾಮಸ್ಯ - ರಾಮಯೋಃ - ರಾಮಾನಾಂ ಗಳು ಕ್ರಮವಾಗಿ ಏಕವಚನ, ದ್ವಿವಚನ ಮತ್ತು ಬಹುವಚನ ಗಳ ಉದಾಹರಣೆ ಗಳು. ಇವು ಮೂರೂ ಷಷ್ಠಿವಿಭಕ್ತಿಗಳೇ.
ರಾಮಸ್ಯ ಎಂದರೆ ರಾಮನ ಎಂದರ್ಥ. ವೀರಶೈವಸ್ಯ ಎಂದರೆ ವೀರಶೈವನ, ವೀರಶೈವಾನಾಂ ಎಂದರೆ ವೀರಶೈವರ ಎಂದರ್ಥ.
೩. #ಇಂಗ್ಲಿಷ್ ನಲ್ಲಿ 's ಅನ್ನು ಬಳಸಲಾಗುತ್ತದೆ.
that - that's (ಅದರ)
India - India's (ಇಂಡಿಯಾದ)
Kannada - Kannada's (ಕನ್ನಡದ)
Veerashaiva - Veerashaiva's (ವೀರಶೈವದ / ವೀರಶೈವರ)
"ವೀರಶೈವರ ಲಿಂಗಾಯತ ಬಳಗ" ಎಂಬ ಸಾಲಿನಲ್ಲಿ - ಇದು 'ಯಾರೋ ಒಬ್ಬರ' "ಲಿಂಗಾಯತ ಬಳಗ" ಎಂಬ ಅರ್ಥ ಬರುತ್ತದೆ. ಅಂದರೆ ನಂಟು/ಒಡೆತನ ವನ್ನು ವೀರಶೈವರ ಕೈಯಲ್ಲಿಡುವುದು. "ವೀರಶೈವರ ಲಿಂಗಾಯತ ಬಳಗ" ಅಸಂಬದ್ಧ. ಕನ್ನಡ ಬಾರದವರ ಬಳಕೆ. "ವೀರಶೈವ ಬಳಗ" / "ಲಿಂಗಾಯತ ಬಳಗ" / "ವೀರಶೈವ ಲಿಂಗಾಯತ ಬಳಗ" ಮೂರೂ ಸರಿಯಾದ ಬಳಕೆಗಳು.
ನಮ್ಮ ಅಜ್ಜ/ಮುತ್ತಜ್ಜನ ಕಾಲದ ಪೇಪರ್ ಗಳಲ್ಲಿ "ವೀರಶೈವ ಜನಾಂಗದವರಾದ" ಎಂಬ ಪದ ಬಳಸಿರುವುದನ್ನು ನೋಡಿದ ನೆನಪಿದೆ ನನಗೆ. ವೀರಶೈವ ಲಿಂಗಾಯತ ವೂ ಅಲ್ಲ, ವೀರಶೈವರ ಲಿಂಗಾಯತ ವೂ ಅಲ್ಲ. ಈ ನೋಟದಿಂದ ವೀರಶೈವ ಮತ್ತು ಲಿಂಗಾಯತ ಸಮಾನಾರ್ಥಕ ಪದಗಳು / synonym ಗಳು. 'ಭಾರತದ ಇಂಡಿಯ' ಮತ್ತು 'ಇಂಡಿಯದ ಭಾರತ' ಎಂಬ ಪದಗಳಿಗೆ ಹೇಗೆ ಅರ್ಥ ಇಲ್ಲವೋ ಹಾಗೆ 'ವೀರಶೈವರ ಲಿಂಗಾಯತ' ಮತ್ತು 'ಲಿಂಗಾಯತರ ವೀರಶೈವ' ಪದಗಳಿಗೂ ಅರ್ಥ ಇಲ್ಲ.
ವ್ಯಾಕರಣದ ನೋಟದಿಂದ ನೋಡುವುದಾದರೆ.... "ವೀರಶೈವ ಲಿಂಗಾಯತ" ಪದವು ಲಿಂಗಾಯತದ ಒಂದು ಉಪಜಾತಿ ಯಾಗಿ ತೋರುವುದು. ನೂರಾರು ಲಿಂಗಾಯತಗಳಲ್ಲಿ ಇದೂ ಒಂದು.
ಮತ್ತೊಂದು ನೋಟ / ಉದಾಹರಣೆ ತೆಗೆದುಕೊಳ್ಳೋಣ. ನಾನು ಜೀವನಪೂರ್ತಿ ರಜಾಕ್ ರ ತುಳಿತಕ್ಕೆ ಒಳಗಾದವನು ಎಂದು ಅಂದುಕೊಳ್ಳೋಣ. ಕನ್ನಡದ ಮಹತ್ವವನ್ನು ಮರೆತು ಉರ್ದು ಕಲಿತೆ. ನನ್ನ ಜ್ಞಾನದ ಕೊರತೆಯಿಂದಾಗಿ, ಉರ್ದು ಮತ್ತು ಹಿಂದಿ ಒಂದೇ ಕುಟುಂಬಕ್ಕೆ ಸೇರಿವೆ ಎಂಬುದೂ ಕೂಡ ನನಗೆ ಗೊತ್ತಿಲ್ಲ. ಮುಸ್ಲಿಮರ ಬಗ್ಗೆ ಮೈತುಂಬಾ ದ್ವೇಷ ತುಂಬಿಕೊಂಡರೂ, ಅವರ ಭಾಷೆಯನ್ನೇ ರಾಷ್ಟ್ರಭಾಷೆ ಎಂದು ವಾದಿಸುವವ ನಾನು. ಬೆಂಗಳೂರಿಗೆ ಬಂದಾಗ, ಕನ್ನಡ ಮಾತನಾಡುವವರನ್ನು ನೋಡಿ ಅವರೆಲ್ಲ ಕೆಟ್ಟವರು, ನಾನೇ ದೇಶಭಕ್ತ ಎಂದು ಭಾವಿಸಿದವ. ಏಕೆಂದರೆ, ನನಗೆ ಹಿಂದಿ (ನಾನು ಮಾತಾಡುವುದು ಉರ್ದು ಎಂದು ಗೊತ್ತಿಲ್ಲದ ಅಮಾಯಕ ನಾನು) ಬರುವುದು ಎಂಬ ಕಾರಣಕ್ಕೆ.
ಈ ಯೋಚನೆಯೊಂದಿಗೆ, "INDIA" ಎಂಬ ಹೆಸರಿನ WhatsApp ಗುಂಪನ್ನು ರಚಿಸಿ, - ಹೆಸರನ್ನು ನೋಡಿ ನೂರಾರು ಜನ ಸೇರಿದ ಮೇಲೆ - ಅದನ್ನು "HINDIA" ಎಂದು ಬದಲಾಯಿಸುವುದು ತಪ್ಪು. "INDIA" ಎಂಬುದು ಒಂದು ದೇಶದ ಹೆಸರು ಮತ್ತು ಅದರ ಮೇಲೆ ಯಾರೊಬ್ಬರೂ ಅಧಿಕಾರ ಹೊಂದಿರುವುದಿಲ್ಲ. ನಾನು ಆ ವಾಟ್ಸಾಪ್ ಗುಂಪಿನ Admin, creator ಎಂದು ಹೇಳಿಕೊಂಡರೂ, ಹೆಸರನ್ನು ಬದಲಾಯಿಸುವ ಹಕ್ಕು ನನಗಿಲ್ಲ. ಈ ಯೋಚನೆ ಎಷ್ಟು ಅಸಹಜ ಅಸಂಬದ್ಧ ಮನಸ್ತಿತಿ ಎಂಬುದು ಸ್ಪಷ್ಟ. INDIA ಅನ್ನೋ ಹೆಸರಿನ WhatsApp ಗುಂಪು ಶುರುಮಡಿ... ನಾನು ಇಡೀ ಇಂಡಿಯಾಗೇ ಓನರ್ ಅನ್ನೋ ಭ್ರಮೆ ಇಂದ ನಾನು ಹೊರಬರಬೇಕಿತ್ತು..ಇನ್ನೂ ಆಗೇ ಇಲ್ಲ.
ಇದೇ ರೀತಿ, ಒಂದು ಜಾತಿ/ಧರ್ಮ/ರಾಜ್ಯ/ದೇಶ/ಸಮಾಜದ ಹೆಸರನ್ನು ಹೇಗೆಬೇಕೋ ಹಾಗೆ ಬದಲಿಸುವ ಹಕ್ಕು ಯಾರಿಗೂ ಇಲ್ಲ.
ಒಂದು ಹೊಸಗುಂಪು ಶುರುಮಾಡುವಾಗ ಅದರ ಬಗ್ಗೆ ಕನಿಷ್ಟ ಜ್ಞಾನವಾದರೂ ಇರಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ