ಗುರುವಾರ, ನವೆಂಬರ್ 19, 2009

ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ!

ತುಂಬಾ ಹಿಂದೆ .. ಬಹುಶ ನಾಲ್ಕಾರು ತಿಂಗಳಾಗಿರಬಹುದು .. ಆಕಾಶವಾಣಿಯಲ್ಲಿ ಬೆಳಿಗ್ಗೆ ಪ್ರಸಾರವಾಗ್ತಾ ಇದ್ದ ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ್ದೆ. ನಂತರ ಯಾವಾಗಲೋ ಅದನ್ನು ಕಂಪ್ಯೂಟರ್ ಗೆ ಕಾಪಿ ಮಾಡಿದ್ದೆ. ನನ್ನ ಮೊಬೈಲ್ ನಿಂದ ಇದು ಎಗರಿ ಹೋಗಿತ್ತು.

ಇಂದು ನನ್ನ ಕಂಪ್ಯೂಟರ್ ಅನ್ನು ತಡಕಾಡ್ತಾ ಇದ್ದಾಗ, ಆಕಸ್ಮಿಕವಾಗಿ ಈ ಕ್ಲಿಪ್ ಸಿಕ್ತು.


ಅಲ್ಲಮ ಪ್ರಭುಗಳ ವಚನಗಳು ನನಗೆ ತುಂಬಾ ಇಷ್ಟ. ಪರಮ ಅನುಭಾವದ ಮಾತುಗಳು ಅಲ್ಲಮನ ವಚನಗಳು.

ಈ clip ನ ವಚನಗಳು ಒಂದಕ್ಕಿಂತ ಒಂದು ಚೆಂದ. ಅದರಲ್ಲೂ  ಕೊನೆಯ (ಕೆಳಗಿನ) ವಚನ ತುಂಬಾ ಹಿಡಿಸಿತು.



     Get this widget
|
     Track details 
|
        eSnips Social DNA   


ಅಜ್ಞಾನವೆಂಬ ತೊಟ್ಟಿಲ ಒಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ತಾ ಉಣಬಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ
ಗುಹೆಶ್ವರಲಿಂಗನ ಕಾಣಬಾರದು.