ಇಂದು ನನ್ನ ಕಂಪ್ಯೂಟರ್ ಅನ್ನು ತಡಕಾಡ್ತಾ ಇದ್ದಾಗ, ಆಕಸ್ಮಿಕವಾಗಿ ಈ ಕ್ಲಿಪ್ ಸಿಕ್ತು.
ಅಲ್ಲಮ ಪ್ರಭುಗಳ ವಚನಗಳು ನನಗೆ ತುಂಬಾ ಇಷ್ಟ. ಪರಮ ಅನುಭಾವದ ಮಾತುಗಳು ಅಲ್ಲಮನ ವಚನಗಳು.
ಈ clip ನ ವಚನಗಳು ಒಂದಕ್ಕಿಂತ ಒಂದು ಚೆಂದ. ಅದರಲ್ಲೂ ಕೊನೆಯ (ಕೆಳಗಿನ) ವಚನ ತುಂಬಾ ಹಿಡಿಸಿತು.
|
ಅಜ್ಞಾನವೆಂಬ ತೊಟ್ಟಿಲ ಒಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ತಾ ಉಣಬಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ
ಗುಹೆಶ್ವರಲಿಂಗನ ಕಾಣಬಾರದು.