ಕನ್ನಡಕ್ಕೆ:
ನಿಯತಿಯಿಂದ ಬಂದಲ್ಲದೆ ಕರ್ಮಗಳನ್ನು ಬಿಡುವುದು ಯುಕ್ತವಲ್ಲ.
ಮೋಹದಿಂದ ಬಿಟ್ಟರೆ ತಾಮಸವೆಂದು ಕರೆಯಲ್ಪಡುವುದು.
ಸೆಲೆ:
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ
ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ৷18.7৷
ಭಗವದ್ಗೀತೆಯ ೧೮ನೇ ಅಧ್ಯಾಯದ ೭ ನೇ ಶ್ಲೋಕ ಇದು. ಕಣ್ಣಿಗೆ ಕಾಣ್ತು, ಕನ್ನಡಕ್ಕೆ ತಂದೆ.
----
ಈ ಶ್ಲೋಕದಲ್ಲಿ ಕೃಷ್ಣ "ಯಾವುದು ತಾಮಸತ್ಯಾಗ?" ಎಂಬುದರ ಬಗ್ಗೆ ಮಾತಾಡ್ತಾ ಇದ್ದಾನೆ.
ಕರ್ಮಸನ್ಯಾಸ ಮತ್ತು ಕರ್ಮತ್ಯಾಗ ಎಂಬ ಪದಗಳ ಬಳಕೆ ಇದೆ.
#ಸನ್ಯಾಸ ಕ್ಕೂ #ತ್ಯಾಗ ಕ್ಕೂ ಬೇರೆತನವುಂಟು.
ಸನ್ಯಾಸವು "ಕರ್ಮತ್ಯಾಗ" ವಾದರೆ, ತ್ಯಾಗವು "ಕರ್ಮಫಲತ್ಯಾಗ" !!
"ಹೆಚ್ಚಿನದ್ದೇನೋ" ಸಿಕ್ಕುವುದೆಂದು ಮಾಡುವ ಕರ್ಮಗಳನ್ನು ಬಿಡುವುದು ಸನ್ಯಾಸ. ಕರ್ಮಗಳನ್ನು ಮಾಡಿಯೂ ಅದರ ಫಲವನ್ನು ಬಯಸದೇ ಇರುವುದು ತ್ಯಾಗ.
ತ್ಯಾಗವನ್ನೂ ಮತ್ತೆ ಮೂರು ತರ ಗುಂಪು ಮಾಡುಬಹುದು. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ.
ಸನ್ಯಾಸ ವನ್ನು ಸಾತ್ವಿಕತ್ಯಾಗ ದೆ ಕೆಳಗೆ ಗುಂಪುಮಾಡುತ್ತಾರೆ.
ಅಜ್ಞಾನದಿಂದ, ತಪ್ಪುತಿಳುವಳಿಕೆಯಿಂದ, ಮೂಡನಂಬಿಕೆಯಿಂದ ಮಾಡುವ ತ್ಯಾಗವನ್ನು "ತಾಮಸಿಕ ತ್ಯಾಗ" ಎನ್ನಬಹುದು.
*ನಿಯತಿ* ಅಂದರೆ ವಿಧಿ, ದೈವ, ಹಣೆಬರಹ fixed order of things, necessity, destiny; Fate ಮುಂತಾದ ಹುರುಳು ಹೇಳಬಹುದು. ನಿಯತಿ ಇಂದಲೇ ನೀತಿ ಎಂಬ ಪದ ಹುಟ್ಟಿದೆ.
*ಪದಗಳ ಬಿಡಿಕೆ:*
ನಿಯತಿ + ಅಸ್ಯ + ತು + ಸನ್ಯಾಸಃ + ಕರ್ಮಣಃ + ನ + ಉಪಪದ್ಯತೇ
ಮೋಹಾತ್ + ತಸ್ಯ + ಪರಿತ್ಯಾಗಃ + ತಾಮಸಃ + ಪರಿಕೀರ್ತಿತಃ
#ಭಗವದ್ಗೀತೆ
#ಕನ್ನಡದಲ್ಲಿ_ಭಗವದ್ಗೀತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ