೧. ಗಾಯತ್ರಿ ಮಂತ್ರ :
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ!
ಧಿಯೋ ಯೋ ನಃ ಪ್ರಚೋದಯಾತ್ ॥
ಇದೇ ಮೂಲದ ಸವಿತೃಮಂತ್ರ. ವಿಶ್ವಾಮಿತ್ರನ ಕೊಡುಗೆ. ಮೊದಲು ಋಗ್ವೇದದಲ್ಲಿ ಬರುವದು. ಉಳಿದ ವೇದಗಳಲ್ಲೂ ಬರುವುದು. ಪುರಾಣಗಳಲ್ಲೂ ಮತ್ತೆ ಮತ್ತೆ ಬರುವುದು.
ಗಾಯತ್ರಿ ಎನ್ನುವುದು ವೇದಗಳಲ್ಲಿ ಬರುವ ಒಂದು ಛಂದಸ್ಸು ಆಗಿದ್ದರೂ ಈ ಮಂತ್ರವೇ ಗಾಯತ್ರಿ ಮಂತ್ರ ಎಂದು ಹೆಸರಿವಾಸಿ.
ಓಂ ಎಂಬ ಪ್ರಣವವನ್ನೂ ಮತ್ತು ಭೂ ಭುವಃ ಸ್ವಃ ಎಂಬ ವ್ಯಾಹೃತಿಗಳನ್ನೂ ಮೊದಲಿಗೆ ಸೇರಿಸಿಕೊಂಡು ಈ ಮಂತ್ರವನ್ನು ಹೇಳುವ ಪರಿಪಾಠ ಬೆಳೆದುಬಂದಿದೆ.
----
೨. ಗಾಯತ್ರಿ ಛಂದಸ್ಸು.
ಇದು ಮೂರು ಮೂರು ಸಾಲುಗಳನ್ನು ಹೊಂದಿರುವ ಛಂದಸ್ಸು. ಒಂದೊಂದು ಸಾಲಿನಲ್ಲೂ ಎಂಟು ಅಕ್ಷರಗಳು ಇರುತ್ತವೆ. ಒಟ್ಟು ೨೪ ಅಕ್ಷರಗಳು ಉಳ್ಳದ್ದು. ಕೆಳಗಿನ ಸವಿತೃಮಂತ್ರವು ಗಾಯತ್ರಿ ಛಂದಸ್ಸಿನಲ್ಲಿ ಬರೆಯಲ್ಪಟ್ಟಿದೆ.
ಗಾಯತ್ರಿ ಗೆ "ಗಾಯಂತಾಂ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ" ಎನ್ನುವ ನಿರುಕ್ತ ( etymology / ಬೇರರಿಮೆ) ಹೇಳಲಾಗಿದೆ. ಯಾವುದನ್ನು ಉಲಿಯುವುದರಿಂದ ನಾವು ಕಾಪಾಡಲ್ಪಡುತ್ತೇವೋ ಅದು ಗಾಯತ್ರಿ.
ಸಾಲು ೧:: (೮ ಅಕ್ಷರಗಳು)
ತತ್ + ಸ + ವಿ + ತುರ್ + ವ + ರೇ + ಣಿ + ಯಂ
ಸಾಲು ೨:: (೮ ಅಕ್ಷರಗಳು)
ಭರ್ + ಗೋ + ದೇ + ವ + ಸ್ಯ + ಧೀ + ಮ + ಹಿ
ಸಾಲು ೩:: (೮ ಅಕ್ಷರಗಳು)
ಧಿ + ಯೋ + ಯೋ + ನಃ + ಪ್ರ + ಚೋ + ದ + ಯಾತ್
----
೩. ಗಾಯತ್ರಿ ದೇವತೆ::
ಒಂದು ದೇವತೆಯಾಗಿ ಗಾಯತ್ರಿ ಯ ಕಲ್ಪನೆ ತುಂಬಾ ಇತ್ತೀಚಿನದ್ದು. ೧೬ - ೧೭ ನೇ ಶತಮಾನಕ್ಕೂ ಇತ್ತೀಚಿನದ್ದು ಮತ್ತು ಈ ಕಲ್ಪನೆ ಆಂಧ್ರಪ್ರದೇಶದಲ್ಲಿ ಹುಟ್ಟಿತು ಎನ್ನುವರು.
----
ಈ ಗಾಯತ್ರಿಮಂತ್ರ ಮಂತ್ರ ಅದೆಷ್ಟು ಹೆಸರುವಾಸಿ ಎಂದರೆ ಇದೇ ದಾಟಿಯಲ್ಲಿ ಹಲವಾರು ಮಂತ್ರಗಳ ಹುಟ್ಟಿಗೆ ಕಾರಣವಾಯ್ತು. ಕೆಲವು ರುದ್ರ / ಶಿವನ ಮತ್ತವನ ಪರಿವಾರದದವರ ಮೇಲಿನ ಗಾಯತ್ರಿಮಂತ್ರಗಳನ್ನು ಇಲ್ಲಿ ಪಟ್ಟಿಮಾಡುತ್ತಿರುವೆ. ಇವನ್ನು ಲಿಂಗಪುರಾಣ ದಿಂದ ತೆಗೆದುಕೊಂಡಿದ್ದೇನೆ.
೧. ಮಹೇಶ_ಗಾಯತ್ರಿ
ತನ್ಮಹೇಶಾಯ ವಿದ್ಮಹೇ
ವಾಗ್ವಿಶುದ್ಧಾಯ ಧೀಮಹಿ |
ತನ್ನಃ ಶಿವಃ ಪ್ರಚೋದಯಾತ್ ||
೨. ರುದ್ರ_ಗಾಯತ್ರಿ
ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್ ||
೩.
ತತ್ಪುರುಷಾಯ ವಿದ್ಮಹೇ
ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಶಿವಃ ಪ್ರಚೋದಯಾತ್ ||
೪.
ಸರ್ವೇಶ್ವರಾಯ ವಿದ್ಮಹೇ
ಶೂಲಹಸ್ತಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್ ||
ಉಳಿದ ಮೂಲದಿಂದ:
ಓಂ
ಮಹಾದೇವಾಯ ವಿದ್ಮಹೇ,
ರುದ್ರಮೂರ್ತಯೇ ಧೀಮಹಿ
ತನ್ನೋ ಶಿವಃ ಪ್ರಚೋದಯಾತ್ ||
ಈ ಕೆಳಗಿನವು ನೋಡಲು ಗಾಯತ್ರಿ ಛಂದಸ್ಸಿನಲ್ಲಿ ಇರುವಂತೆ ಕಂಡರೂ ಕೆಲಸ ಸಾಲುಗಳಲ್ಲಿ ಎಂಟರ ಬದಲು ಒಂಬತ್ತು ಅಕ್ಷರಗಳಿವೆ.
ಓಂ
ಮಲ್ಲಿಕಾರ್ಜುನಾಯ ವಿದ್ಮಹೇ, (೯)
ಶ್ರೀ ಶೈಲನಾಥಾಯ ಧೀಮಹಿ | (೯)
ತನ್ನೋ ರುದ್ರಃ ಪ್ರಚೋದಯಾತ್ ||
ಓಂ
ಸದಾಶಿವಾಯ ವಿದ್ಮಹೇ,
ಸಹಸ್ರಾಕ್ಷಾಯ ಧೀಮಹಿ |
ತನ್ನೋ ಸಾಂಬಾಕ್ಷ ಪ್ರಚೋದಯಾತ್ || (೯ ಅಕ್ಷರಗಳು)
----
ಶಿವನ ಪರಿವಾರದವು.
ಗಣಾಂಬಿಕಾಯೈ ವಿದ್ಮಹೇ ಕರ್ಮಸಿದ್ಧ್ಯೈ ಚ ಧೀಮಹಿ ।
ತನ್ನೋ ಗೌರೀ ಪ್ರಚೋದಯಾತ್ ||
ಕಾತ್ಯಾಯನ್ಯೈ ವಿದ್ಮಹೇ ಕನ್ಯಾಕುಮಾರ್ಯೈ ಧೀಮಹಿ ।
ತನ್ನೋ ದುರ್ಗಾ ಪ್ರಚೋದಯಾತ್ ||
ವೀರಭದ್ರಾಯ ವಿದ್ಮಹೇ ಮಹಾನಾದಾಯ ಧೀಮಹೇ |
ತನ್ನಃ ಶಾಂತಃ ಪ್ರಚೋದಯಾತ್ ||
ತತ್ಪುರುಷಾಯ ವಿದ್ಮಹೇ ವಕೃತುಂಡಾಯ ಧೀಮಹಿ ।
ತನ್ನೋ ದಂತಿಃ ಪ್ರಚೋದಯಾತ್ ||
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ I
ತನ್ನೊ ದಂತೀ ಪ್ರಚೋದಯಾತ್ ॥
ಮಹಾಸೇನಾಯ ವಿದ್ಮಹೇ ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಸ್ಕಂದಃ ಪ್ರಚೋದಯಾತ್ ||
ಹರಿವಕ್ತ್ರಾಯ ವಿದ್ಮಹೇ ರುದ್ರ ವಕ್ತ್ರಾಯ ಧೀಮಹಿ ।
ತನ್ನೋ ನಂದೀ ಪ್ರಚೋದಯಾತ್
ತೀಕ್ಷ್ಣ ಶೃಂಗಾಯ ವಿದ್ಮಹೇ ವೇದಪಾದಾಯ ಧೀಮಹಿ।
ತನ್ನೋ ವೃಷಃ ಪ್ರಚೋದಯಾತ್ ||
ಶಿವಾಸ್ಯಜಾಯೆ ವಿದ್ಮಹೇ ದೇವರೂಪಾಯೈ ಧೀಮಹಿ |
ತನ್ನೋ ವಾಚಾ ಪ್ರಚೋದಯಾತ್ ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ