ಮಂಗಳವಾರ, ಡಿಸೆಂಬರ್ 24, 2024

ಧ್ಯಾನಾದೇವ ತು ಕೈವಲ್ಯಂ

"ಜ್ಞಾನಾದೇವ ತು ಕೈವಲ್ಯಂ ಪ್ರಾಪ್ಯತೇ ಯೇನ ಮುಚ್ಯತೇ, 
ತಮೇವ ವಿದಿತ್ವಾ ಅತಿಮೃತ್ಯುಮೇತಿ, 
ಜ್ಞಾತ್ವಾ ದೇವಂ ಮುಚ್ಛತೇ ಸರ್ವಪಾಪೈಃ'' 
--- ಎಂಬುದು ಶ್ವೇತಾಶ್ವತರ ಉಪನಿಷತ್ ನ ಸಾಲು‌

"ಜ್ಞಾನಾತ್ ಏವ ತು ಕೈವಲ್ಯಂ" ನಲ್ಲಿನ ಜ್ಞಾನ ವನ್ನು ಆತ್ಮಜ್ಞಾನ ಎಂದೇ ಹೆಚ್ಚಿನವರು ತಿಳಿವರು. ಹಾಗಾಗಿ ಈ ಸಾಲನ್ನು "ಆತ್ಮಜ್ಞಾನದಿಂದಲೇ ಮುಕ್ತಿ" ಎಂದು ಅನುವಾದ ಮಾಡಿದ್ದಾರೆ. 

---
ಇದೇ ಸಾಲನ್ನು ತುಸು ಬದಲಿಸಿ "ಧ್ಯಾನಾತ್ ಏವ ತು ಕೈವಲ್ಯಂ" ಎಂಬುದಾಗಿ ಬದಲಿಸಿದರೆ ಅದನ್ನು ಅರ್ಥ ಮಾಡಿಕೊಳ್ಳವುದು ಹೇಗೆ?. ಈ ಸಾಲನ್ನು ಅರ್ಥ ಮಾಡಿಕೊಳ್ಳಲು ಅಲ್ಲಮಪ್ರಭು ಗಳ ನ ಈ ವಚನ ಓದಿ ತಿಳಿದು ಅನುಭವಕ್ಕೆ ತರಬೇಕು!

ಅರಿವಿನ ನಿರಿಗೆಗಾಣದೆ ಗಿರಿಯ ಕೋಡುಗಲ್ಲ ಮೇಲೆ
ತಲೆಯೂರಿ ತಪಸ್ಸು ಮಾಡಿದಡಿಲ್ಲ,
ಇಲ್ಲದ ಕಾಲಕ್ಕಿಲ್ಲ, ಗಾತ್ರವ ದಂಡಿಸಿದಡಿಲ್ಲ, ಪೃಥ್ವಿಯ ತಿರುಗಿದಡಿಲ್ಲ,
ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ, ಜಪಸಮಾಧಿಯಲ್ಲಿ ನಿಂದಡಿಲ್ಲ,
``ಪೂಜಾಕೋಟಿಸಮಂ ಸ್ತೋತ್ರಂ, ಸ್ತೋತ್ರಕೋಟಿಸಮಂ ಜಪಃ|
ಜಪಕೋಟಿ ಸಮಂ ಧ್ಯಾನಂ, ಧ್ಯಾನಕೋಟಿರ್ಮನೋ ಲಯಮ್||
ಎಂದುದಾಗಿ,
ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ, ಚಿತ್ತು ಲಯವಾದಡೆ ನಿತ್ಯಪ್ರಕಾಶ! ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ?
--- ಅಲ್ಲಮಪ್ರಭು 


ಮನದಲ್ಲಿ ಮತ್ತೆ ನಾಲಕ್ಕು ಭಾಗಗಳು :  ಮನ -  ಬುದ್ದಿ - ಚಿತ್ತ - ಅಹಂಕಾರ.  ಇವುಗಳನ್ನು ಅಂತಃಕರಣ ಚತುಷ್ಟಯ ಗಳು ಎಂದು‌ ಕೂಡ ಕರೆವರು.

ಇಲ್ಲಿ ಪ್ರಭುದೇವರು "ಮನವನ್ನು ಚಿತ್ತಿನಲ್ಲಿ‌ ಇರಿಸಬೇಕು" - "ಚಿತ್ತು ಲಯ" ವಾಗಬೇಕು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ‌.  ಹಾಗಾಗಿ ಮನ ಎಂದರೆ ಏಬನ? ಚಿತ್ತು ಎಂದರೆ ಏನು ಎಂಬುದರ ಆಳಕ್ಕೆ‌ ಇಳಿವ ಅವಶ್ಯಕತೆ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ