ಸೋಮವಾರ, ಡಿಸೆಂಬರ್ 23, 2024

ಒಕ್ಕಲಿಗ ಒಕ್ಕಲುತನ ದ ಬಗ್ಗೆ ಸರ್ವಜ್ಞ.

ಇಕ್ಕುವವನೆಂದಿಗೊಂ | ದೊಕ್ಕಲೆಂದನಬೇಡ | 
ಇಕ್ಕಿ ಎರೆವನು ಇಲ್ಲಿರದೆ ಸ್ವರ್ಗಕೆ | 
ಒಕ್ಕಲಿರಹೋಹ ಸರ್ವಜ್ಞ

ಭಂಡಾರ ತುಂಬಿನೀ ಭಂಡಿಯಲಿ ಹೇರುವರೆ | 
ಮಂಡಲವನಾಳಿ ಮೆರೆವರೆ ಒಕ್ಕಲನು | 
ಕೊಂಡಾಡಬೇಕು! ಸರ್ವಜ್ಞ

ಬೆಕ್ಕು ಮನೊಯೊಳು ಲೇಸು ಮುಕ್ಕು ಕಲ್ಲಿಗೆ ಲೇಸು| 
ನಕ್ಕು ನಗಿಸುವಾ ನುಡಿ ಲೇಸು ಊರಿಗೆ| 
ಒಕ್ಕಲಿಗ ಲೇಸು ಸರ್ವಜ್ಞ

ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು| 
ಲೆಕ್ಕವಿಲ್ಲದವನ ಬೇಹಾರ ಇವು ಮೂರು| 
ದುಕ್ಕ ಕಾಣಯ್ಯ ಸರ್ವಜ್ಞ

ಒಕ್ಕಲನು ನಲುಗಿಸದೆ ಲೆಕ್ಕವನು ಸಿಕ್ಕಿಸದೆ | 
ಕಕ್ಕುಲತೆಯಿಂದ ನಡಿಸುವಾ ಅರಸನು | 
ಚಕ್ಕಂದವಿರುವ ಸರ್ವಜ್ಞ

ಒಕ್ಕಲಿಗೆ ಊರಾಸೆ ಮಕ್ಕಳಿಗೆ ಮನೆಯಾಸೆ| 
ಜಕ್ಕವಕ್ಕಿಗೆ ಕೊಳದಾಸೆ, ಸೂಳೆಗೆ| 
ರೊಕ್ಕದಾ ಆಸೆ ಸರ್ವಜ್ಞ

ಅಕ್ಕರವ ಕಲಿತಾತ ಒಕ್ಕಲನು ತಿನಗಲಿತ
ಲೆಕ್ಕವ ಕಲಿತ ಕರಣಿಕನು ನರಕದಲಿ| 
ಹೊಕ್ಕಾಡಕಲಿತ! ಸರ್ವಜ್ಞ

ಒಕ್ಕಲಿಗನೋದಲ್ಲ ಬೆಕ್ಕು ಹೆಬ್ಬುಲಿಯಲ್ಲ| 
ಎಕ್ಕೆಯ ಗಿಡವು ಬನವಲ್ಲ, ಇವು ಮೂರು-| 
ಲೆಕ್ಕದೊಳಗಲ್ಲ; ಸರ್ವಜ್ಞ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ