ಸಾಗರ ಬ್ರಹ್ಮವನು ಸಾಧಿಸಿ ಬ್ರಹ್ಮದಲ್ಲಿ|
ನೀಗಿ "ನಿಃಪತಿಯಾದ ಮಳೆಯ ಮಠ"ದಿ|
ಆಗದಾ ಅರಸನನ್ನು ಕಳಿದು ಕಂಗೊಳಿಸಿದನು|
ಯೋಗಿ ಗುರುಬಸವನೈ ಯೋಗಿನಾಥಾ.||
- ಸಿದ್ಧರಾಮೇಶ್ವರ
----
ಸಿದ್ಧರಾಮರು ಬಸವಣ್ಣನನ್ನು ಕಣ್ಣಾರೆ ಕಂಡವರು. ದಶಕಗಳ ಕಾಲ ಬಸವಣ್ಣನೊಡನೆ ಹತ್ತಿರದಿಂದ ಒಡನಾಡಿದವರು. ಬಸವಣ್ಣನ ಹೆಗಲಿಗೆ ಹೆಗಲು ಜೋಡಿಸಿ ಕೆಲಸ ಮಾಡಿದವರು. ಇಂತಹ ಪ್ರತ್ಯಕ್ಷದರ್ಶಿಗಳು ಬಸವಣ್ಣನ ಸಾವಿನ ಬಗ್ಗೆ ಏನು ಹೇಳುತ್ತಾರೆ ಎನ್ನುವುದು ಮುಖ್ಯವಾಗುವುದು.
ಈ ತ್ರಿವಿಧಿಯಲ್ಲಿ ಸಿದ್ದರಾಮರು "*#ಮಳೆಯಮಠ* ದಲ್ಲಿ ಬಸವಣ್ಣ #ನಿಷ್ಪತ್ತಿ ಯಾದ" ಎನ್ನವರು. ಪತ್ತಿ ಎಂದರೆ ಹುಟ್ಟು. ನಿಃಪತ್ತಿ ಎಂದರೆ ಹುಟ್ಟು ಇಲ್ಲದೇ ಇರುವುದು. ಬಯಲು, ಐಕ್ಯ. ನಿಃಪತ್ತಿ ಪದವೇ ಆಡುಮಾತಿನಲ್ಲಿ ನಿಷ್ಪತ್ತಿ ಆಗಿದೆ.
ಸಕಲೇಶಮಾದರಸ ಬಸವಣ್ಣನೊಡನಿದ್ದ ಇನ್ನೊಬ್ಬ ಶರಣ. ಈತನ ತಂದೆ #ಶಿವಯೋಗಿಮಲ್ಲರಸ. ಈತ ಮೊದಲು (ಕಲಕುರ್ಕಿಯ) ಅರಸನಾಗಿದ್ದ. ನಂತರ ವೈರಾಗ್ಯ ಬಂದು ರಾಜ್ಯಭಾರವನ್ನು ಮಗ ಸಕಲೇಶಮಾದರಸನಿಗೆ ನೀಡಿ ಶ್ರೀಶೈಲಕ್ಕೆ ತೆರಳುವನು. ಅಲ್ಲಿ "ಮಳೆಯಮಠ" ದಲ್ಲಿ ನೆಲೆಸುವನು. ಈ ಮಳೆಯಮಠದ ಶಿವಯೋಗಿಯನ್ನು ಹಲವು ಪುರಾಣಕಾರರು / ಚರಿತ್ರೆಕಾರರು ಹಲವು ಬಾರಿ ನೆನೆವರು. ಇವನನ್ನು #ಮಳೆಯಮಲ್ಲೇಶ / ಮಳೆಯಮಲ್ಲರಸ / ಶಿವಯೊಗಿಮಲ್ಲರಸ / ಮಳೆಯಮಲ್ಲಾರ್ಯ / ಮಳೆಯಮೈಲಾರಿ ಮುಂತಾದ ಹೆಸರುಗಳಿಂದ ಕರೆವರು.
ಶ್ರೀಶೈಲದ ಬಳಿಯ ನಾಗಾರ್ಜುನ ಸಾಗರದ ಒಡಲಿನಲ್ಲಿ "ಮಳೆಯಮಠ" ಈಗ ಮುಳುಗಡೆಯಾಗಿದೆ. ಈ ಮಠದಲ್ಲೇ ಬಸವಣ್ಣನವರು ಬಯಲು ಕಂಡಿದ್ದು. ಸಿದ್ಧರಾಮೇಶ್ವರ ರ ತ್ರಿವಿಧಿ ಇದನ್ನೇ ತಿಳಿಸುವುದು.
ಅಳಿಯದೇ ಕೂಡಿದವರು / ಕೂಡಬಲ್ಲವರು ಬಸವಣ್ಣ. ಇಂತಹ ಯೋಗ ನಮಗಿತ್ತವರು. ದೇಹಿವಿಡಿದೂ ಕೂಡಬಲ್ಲಾತ ಬಸವಣ್ಣ - ಕೂಡಲಸಂಗಮದಲ್ಲಿ (ಶ್ರೀಶೈಲದ ಬಳಿ) ಮಳೆಯಮಠದಲ್ಲಿ ದೇಹಬಿಟ್ಟು ಬಯಲಾದ .
---
ಕೂಡಲ, ಕಪ್ಪಡಿ, ಮತ್ತು ಸಂಗಮ ಮೂರೂ ಪದಗಳ ಅರ್ಥ ಒಂದೇ - ಕೂಡುವುದು. ಆದರೆ ಜಾಗಗಳ ನೊಟದಿಂದ "#ಕಪ್ಪಡಿಸಂಗಮ" ವೇ ಬೇರೆ "#ಕೂಡಲಸಂಗಮ" ವೇ ಬೇರೆ ಎನ್ನುವರು.
ಕಪ್ಪಡಿಸಂಗಮ:: ಕೃಷ್ಣ - ಘಟಪ್ರಭ ನದಿಗಳು ಕೂಡುವ ಎಡೆ.
ಕೂಡಲಸಂಗಮ:: ಕೃಷ್ಣಾ- ಮಲಾಪಹಾರಿ ನದಿಗಳು ಕೂಡುವ ಎಡೆ.
--
#ಬಸವಣ್ಣ ನ ಕೊನೆಯದಿನಗಳು.