ಶಿವ ಈ ನೆಲ ಮೂಲದವನು. ಹರಪ್ಪ ಮಹೆಂಜೋದಾರೋ ಗಳಲ್ಲೂ ಈತನ ಸ್ಪಷ್ಟ ಕುರಹುಗಳು ಸಿಗುತ್ತವೆ. ಕನ್ನಡ ತಮಿಳು ತೆಲುಗು ಮುಂತಾದ ದ್ರಾವಿಡ ಮೂಲದ ನೆಲದ ಏಕೈಕ ದೊಡ್ಡ ದೇವರು. ಉಳಿದೆಲ್ಲ ದೇವರುಗಳಿಗಿಂತ ಹಳೆಯ ಇತಿಹಾಸ ಉಳ್ಳವನು. ಈತನ ಗಣಗಳು / tribes ಭಾರತದ ಮೂಲೆ ಮೂಲೆಯನ್ನೂ ಆಳಿದ್ದವು, ಹರಡಿದ್ದವು.
ಭಾರತದ ಹೆಚ್ಚಿನ ಎಲ್ಲ ಸಂಪ್ರದಾಯಗಳ ಮೂಲ ಇವನೇ ಅತ್ವಾ ಇವನಿಗೇ ಅರೋಪಿಸಲಾಗಿದೆ ಎಂದರೆ ತಪ್ಪಾಗದು. ಮೊದಲ ಬಿಲ್ಲುಗಾರ, ಮೊದಲ ಯೋಗಿ.. ದೊಡ್ಡ ಪಟ್ಟಿ ಇದು.
ಭಾರತದಲ್ಲಿ ಹಲವು ಶೈವ ಪ್ರಬೇಧಗಳು ಹುಟ್ಟಿ ಬೆಳೆದವು. ಅವುಗಳಲ್ಲಿ ಕೆಲವು ಇವು.
ಆರಂಭಿಕ ಕಾಲದ ಶೈವ ಸಂಪ್ರದಾಯಗಳು
೧. ಪಾಶುಪತ: ಪಶುಪತಿ ಯೇ ಭಾರತದದ ಎಲ್ಲಕ್ಕಿಂತ ಹಳೆಯ ದೇವರು. ಪಶುಪತಿಯನ್ನು ಆರಾಧಿಸುವ ಪಂಥವೇ ಪಾಶುಪತ. ಪಶು - ಪತಿ - ಪಾಶ ಗಳ ಕಲ್ಪನೆಯುಳ್ಳದ್ದು.
೨. ಲಾಕುಲೀಶ ಪಾಶುಪತ: ಲಾಕುಲ / ನಾಕುಲ / ಲಾಗುಡ ಪಾಶುಪತ ಸಂಪ್ರದಾಯದಲ್ಲಿ ದೊಡ್ಡ ಹೆಸರು. ಈತನದ್ದೇ ಒಂದು - ಲಾಕುಳ ಪಾಶುಪತ - ಸಂಪ್ರದಾಯವಾಯಿತು ಮುಂದೆ.
ಮಧ್ಯಕಾಲೀನ ಶೈವ ಸಂಪ್ರದಾಯಗಳು
೩. ಕಾಳಾಮುಖ: ಉಜ್ಜಯನಿ ಯ ಮಹಾಕಾಳ ನ ಭಕ್ತರು. ಶಿವನೊಬ್ಬನೇ ಶ್ರೇಷ್ಠ ಎಂಬ ನಂಬಿಕೆಯ ಇನ್ನೊಂದು ಶೈವ ಪ್ರಬೇಧ. ಆಚರಣೆಗಳು ಕಷ್ಟವಾದವು.
೪. ಕಾಪಾಲಿಕ : ತಾಂತ್ರಿಕ ಶೈವ. ತಲೆಬುರುಡೆಗಳ ಪೂಜೆ, ಮದಿರೆ-ಮಾಂಸಗಳ ಬಳಕೆ ಸಹಜ.
೫. ಹಠಯೋಗ: ಯೋಗಪರಂಪರೆ. ಹಠಯೋಗವು ಶಿವನನ್ನು ಮೂಲ ದೇವತೆಯಾಗಿ ಪರಿಗಣಿಸುತ್ತದೆ. ಇದು ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ಮೂಲಕ ಆಧ್ಯಾತ್ಮಿಕ ಸಿದ್ಧಿಯನ್ನು ಸಾಧಿಸುವ ಗುರಿ ಹೊಂದಿದೆ. ಶಿವಸಂಹಿತೆ ಯೋಗಸ ಮೂಲಪುಸ್ತಕ.
ಹೊಸ ಯುಗದ ಶೈವ ಸಂಪ್ರದಾಯಗಳು
೬. ನಾಥ ಸಂಪ್ರದಾಯ: ಹಠಯೋಗ ಮತ್ತು ತಾಂತ್ರಿಕ ಸಿದ್ಧಾಂತಗಳನ್ನು ಸಂಯೋಜಿಸಿ ಹುಟ್ಟಿಕೊಂಡ ಈ ಸಂಪ್ರದಾಯವು ಮಧ್ಯಕಾಲೀನ ಭಾರತದಲ್ಲಿ ವ್ಯಾಪಕವಾಗಿ ಹರಡಿತು.
೭. ಶಾಕ್ತ: ಮೂಲತಃ ಶಕ್ತಿಯನ್ನು ಆರಾಧಿಸುತ್ತಿದ್ದರೂ, ಕಾಲಕ್ರಮೇಣ ಶಿವನಿಗೂ ಮಹತ್ವ ನೀಡಲು ಪ್ರಾರಂಭಿಸಿತು.
೮. ವೀರಶೈವ: ಬಸವಣ್ಣನಿಂದ ಶುರುವಾದದ್ದು. ಸ್ವಾನುಭವಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮಹತ್ವ ಕೊಟ್ಟದ್ದು. ಇದನ್ನು ಲಿಂಗಾಯತ ಎಂದು ಕೂಡ ಕರೆಯಬಹುದು.
ಇತರ ಶೈವ ಸಂಪ್ರದಾಯಗಳು
೯. ಕಾಶ್ಮೀರ ಶೈವಿಸಂ: ಕಾಶ್ಮೀರದಲ್ಲಿ ಹುಟ್ಟಿಕೊಂಡ ಈ ಸಂಪ್ರದಾಯವು ಅದ್ವೈತ ವೇದಾಂತದ ಮೇಲೆ ಆಳವಾದ ಪ್ರಭಾವ ಬೀರಿತು.
೧೦. ಶೈವಸಿದ್ಧಾಂತ: ತಮಿಳುನಾಡಿನಲ್ಲಿ ಹುಟ್ಟಿಕೊಂಡ ಈ ಸಂಪ್ರದಾಯವು ಶೈವ ಸಿದ್ಧಾಂತಗಳನ್ನು ವಿವರಿಸಲು ತರ್ಕ ಮತ್ತು ತತ್ವಶಾಸ್ತ್ರವನ್ನು ಬಳಸುತ್ತದೆ.