ಮಂಗಳವಾರ, ಜನವರಿ 15, 2019

ಸುಗ್ಗಿ ಹಬ್ಬ - ಪೊಂಗಲ ಹಬ್ಬ - ಸಂಕ್ರಾಂತಿ ಹಬ್ಬ


ಸುಗ್ಗಳೆ , ಸುಗ್ಗಲ, ಸುಗ್ಗಲಮ್ಮ, ಸುಗ್ಗಲವ್ವ ಮುಂತಾದವೆಲ್ಲ ಅಚ್ಚಗನ್ನಡದ ಹೆಸರುಗಳು. ಸುಗ್ಗಲದೇವಿ ರಾಣಿ ಯಾದರೆ ಸುಗ್ಗಲಮ್ಮ ದೇವತೆ , ಶರಣೆ. ಸುಗ್ಗ ಹೆಸರಿನ ದೇವಿಯ ಬೆಟ್ಟವೂ ಇದೆ.

ಇದೇ ಬೇರಿನ ಪದವೇ ಸುಗ್ಗಿ.


#ಸುಗ್ಗಿ ಅಂದರೆ #ಕೊಯ್ಲು ನ ನಂತರದ ಹಂತ.


ಸುಗ್ಗಿ ಪದದ ಬೇರು:


ಕನ್ನಡದಲ್ಲಿ ಸಿಗಿ, ಸುಗಿ ಅನ್ನೋ ಪದಬೇರುಗಳಿವೆ. To tear off, strip off, peel, ಸೀಳು, ಬೇರ್ಪಡಿಸು ಅನ್ನೋ ಅರ್ತದ ಬೇರುಪದ ಇದು. ಸೊಪ್ಪು / ದಂಟಿನಿಂದ ಕಾಳುಗಳನ್ನು "ಸುಗಿ" ಯುವ ಕೆಲಸವೇ ಸುಗ್ಗಿ. ಕಣಸುಗ್ಗಿ ತಿಂಗಳಗಟ್ಟಲೇ ನಡಯುತ್ತೆ. ಸರಳವಾಗಿ ಸುಗ್ಗಿ ಅಂದರೆ harvest ಅನ್ನಬಹುದಾದರೂ ಆಳಕ್ಕಿಳಿದರೆ harvest ಅನ್ನೋದು #ಕೊಯ್ಲು ಗೆ ಸರಿಯಾದ ಪದವೇ ಹೊರತು ಸುಗ್ಗಿಗಲ್ಲ ಅನ್ನೋದು ತಿಳಿಯುತ್ತೆ.


ಆಗೆಲ್ಲ ಊರಲ್ಲಿ #ಕಣಸುಗ್ಗಿ ಯನ್ನ ತಿಂಗಳುಗಟ್ಟಲೆ ಮಾಡ್ತ ಇದ್ರು. ಕಣವನ್ನ ಬಳಿದು (ಸಗಣಿ ಸಾರಿಸಿ) ಅಣಿಮಾಡಿಕೊಂಡು ನಂತರ ಬೆಳೆಯಿಂದ ಕಾಳನ್ನು ಬೇರೆ ಮಾಡುವ ನಡಾವಳಿ / ಕೆಲಸವೇ ಆ ಕಣಸುಗ್ಗಿ.


ಕಾಳನ್ನು ಬೇರ್ಪಡಿಸಿದ ನಂತರ ರಾಶಿ ಹಾಕಿ ಪೂಜೆ ಮಾಡೋದೆ ರಾಶಿಪೂಜೆ. ಐನಾರು ಬಂದು ಪೂಜೆಮಾಡೊರು... ಅವರಿಗೊಂದಿಷ್ಟು ಕಾಳುಗಳು ಕೊಡ್ತಾ ಇದ್ರು. ಬಂದ ದಾಸಯ್ಯ ನೂ ಸಾಕಷ್ಟು ದವಸಗಳನ್ನು ಪಡೆದುಕೊಂಡು ಹೋಗ್ತಾ ಇದ್ದ. ರಾಶಿಪೂಜೆಯ ನಂತರ ಮಂಡಕ್ಕಿ, ಕಾಯಿ (ಚೂರುಗಳು) ಮತ್ತು ಬೆಲ್ಲ (ತುಣುಕುಗಳು) ಬೆರೆಸಿದ ಸುಗ್ಗು ಅನ್ನು ಕಣದಲ್ಲಿದ್ದ ಎಲ್ಲರಿಗೂ ಹಂಚ್ತಾ ಇದ್ರು.

ಎಲ್ಲ ಮುಗಿದ ಮೇಲೆ ಈ ಬೆಳೆ / ಕಾಳು / ದವಸವನ್ನು ತಂದು ಮನೆಯಲ್ಲಿ #ಗಣಿಗೆ* ಯಲ್ಲಿ ಎಲ್ಲವನ್ನ ತುಂಬಿಡುತ್ತ ಇದ್ರು .  #ವಡೇವು ನಲ್ಲೂ ಕೆಲವನ್ನು ತುಂಬಿಡಲಾಗುತ್ತಿತ್ತು.  

ರೈತರು ಬೆಳೆಕಾಳುಗಳನ್ನು ಕಣದಿಂದ ಪೂರ್ತಿ ಬಾಚಿಕೊಂಡು ಬರದೇ ಕೆಲವನ್ನ ಹಾಗೇಯೇ ಉಳಿಸಿ ಬರ್ತಾ ಇದ್ದರು. ಇವಕ್ಕೆ ತಳಗಾಳು ಅಂತಾರೆ. ಕಣದಲ್ಲಿ ಉಳಿಯುವ ತಳಗಾಳನ್ನು ಇತರ ಜನಾಂಗದವರು  ಬಂದು ಹೊಡಕೊಂಡು ಹೋಗೋರು. ಈ ತಳಗಾಳೇ ಹತ್ತಿಪ್ಪತ್ತು ಸೇರುಗಳಷ್ಟು ಇರ್ತ ಇತ್ತು. ಸುಗ್ಗಿ ದಿನಗಳು ಅಷ್ಟು abundance ಇದ್ದ ದಿನಗಳು. ಹಾಗಾಗಿಯೇ ಸುಗ್ಗಿಗೆ abundance ಎನ್ನುವ ಅರ್ತ ವೂ ಇದೆ. These are the days of abundance, flourish, prosperity.

ಹುಗ್ಗಿಯೇ ಸುಗ್ಗಿ ಹಬ್ಬದ ಊಟ ಅಂತ ಕೆಲವರು ಬರೀತಾ ಇದಾರೆ. ನಮ್ಮ ಕಡೆ ಸುಗ್ಗಿ ಹಬ್ಬಕ್ಕೆ ಹುಗ್ಗಿ ಮಾಡ್ತಾ ಇರಲಿಲ್ಲ ಬದಲಿಗೆ ಕಿಚಡಿ ಮಾಡೋರು.

ಕನ್ನಡಿಗರ ಸುಗ್ಗಿ ಹಬ್ಬಕ್ಕೆ ಸುಗ್ಗದ ಮತ್ತು ಕಿಚಡಿಯ ಜೊತೆಗಿರೋ ನಂಟೇ ತಮಿಳು (ತೆಲುಗ) ರಲ್ಲಿ ಪೊಂಗಲ್ ಹಬ್ಬದ ಜೊತೆ ಪೊಂಗಲ್ ಅಡುಗೆಗಿದೆ.


ಅಂದಹಾಗೆ ಸುಗ್ಗಿ‌ ಮತ್ತು‌ ಪೊಂಗಲ್ ಎರಡೂ ಒಂದೇ!!


ಪೊಂಗಲ್ ಪದದ ಬೇರು:

ಪೊಂಕು ಅನ್ನೋದು ಅಚ್ಚಗನ್ನಡದ  ಇನ್ನೊಂದು ಪದ‌. abound, flourish, be fruitful , prosperity, fortune ಎನ್ನುವ ಅರ್ತಗಳನ್ನು ಹೇಳಬಹುದು. ಈ ಪದದ ಇನ್ನೊಂದ ರೂಪವೇ ಪೊಂಗು.


ಪೊಂಗು, ಪೊಂಗಿಸು, ಪೊಂಗ, ಪೊಂಗಲು ಮುಂತಾದ ಹಲವು ಅಚ್ಚಗನ್ನಡದ ಪದಗಳು ಪೊಂಕು ಎನ್ನುವ ಅಚ್ಚಗನ್ನಡದ ಬೇರಿನಿಂದ ಹುಟ್ಟುವೆ.

> ಪೊಂಗು ಎಂದರೆ - ದೊಡ್ಡದಾಗಿಸು, ಉಬ್ಬಿಸು, ಸಂವೃದ್ದಿಗೊಳಿಸು ಎನ್ನಬಹುದು. 
> ಪೊಂಗ ಎಂದರೆ ದೊಡ್ಡ ಮನುಷ್ಯ / Heroic man ಎನ್ನಬಹುದು. ಪುಂಗವ  ಎಂದರೆ ನಾಯಕ ಎಂದರ್ಥ. ಹನುಮಂತನಿಗೆ 'ವಾನರ ಪುಂಗವ' ಅಂತಾರೆ ಮತ್ತು ಮೂಲಕ ಈ ಪದ ಸಂಸ್ಕೃತಕ್ಕೂ ಹೋಗಿದೆ.     
> ಪೊಂಗಿನ ಎಂದರೆ "ಸುಗ್ಗಿಗೆ (Abundance ಗೆ ) ನಂಟುಳ್ಳ" ಎನ್ನಬಹುದು.


ಕೆಳಗಿನ > ಕೆಳಗಣ ಆದಂತೆ , ಮೇಲಿನ ಮೇಲಣ ಆದಂತೆ ಪೊಂಗಿನ > ಪೊಂಗಣ ಆಗಿದೆ ಎಂದು ತೋರಿಸಿಕೊಡಬಹುದು. 

ಪೊಂಗಿನ > ಪೊಂಗಣ > ಪೊಂಗಳ > ಪೊಂಗಲ  > ಪೊಂಗಲ್


ಸುಗ್ಗಿ ಎಷ್ಟು ಅಚ್ಚಗನ್ನಡ ವೋ ಅಷ್ಟೇ ಪೊಂಗಲ್ ಕೂಡ ಅಚ್ಚಗನ್ನಡ.


ಸುಗ್ಗಿ ಅಂದರೆ ಬೆಳೆ ಮನೆಗೆ ಬಂದ ಕಾಲ. ಅಂದರೆ ಸಂವೃದ್ದಿಕಾಲ‌ - The days of abundance and prosperity . ಹಾಗಾಗಿ ಈ ಸುಗ್ಗಿಯ ಕಾಲ ಪೊಂಕಿನ ಕಾಲವೂ ಹೌದು. ಸುಗ್ಗಿ ಹಬ್ಬ ಪೊಂಗಲ್ ಹಬ್ಬವೂ ಹೌದು .

ಮೇಲಿನದ್ದೆಲ್ಲ 'ಪೊಂಗಲ್'ಅನ್ನೊ ಪದ "ಹಬ್ಬ' ವನ್ನ ಬೊಟ್ಟು ಮಾಡುತ್ತೆ ತಿಳಿದು ಕೊಟ್ಟ ವಿವರಣೆ. ಪೊಂಗಲ್ ಎನ್ನುವುದು " ತಿನಿಸು" ಕೂಡ ಹೌದು.

ಕರ್ನಾಟಕದಲ್ಲಿ ಹೊನ್ನುಗ್ಗಿ ಅಂತ ಮಾತಾಡ್ತಾರೆ. ಇದು ನಮ್ಮಲ್ಲಿ ಎಷ್ಟು ಪೇಮಸ್ಸು ಅಂದ್ರೆ ಹುಗ್ಗಿ ಅಂದ್ರೆ ಹೊನ್ನುಗ್ಗಿ ಅಂತಾನೆ ಅರ್ತಾ ಅನ್ನೋ ಮಟ್ಟಿಗೆ. ಇದು ಗೋದಿ ಪಾಯ್ಸದ ಇದು ಹೊನ್ನಿನ ಬಣ್ಣವೇ ಇರುತ್ತೆ. 

ಹೊನ್ನುಗ್ಗಿ < ಪೊನ್ನುಗ್ಗಿ ಆಗಿರಲು ಸಾದ್ಯತೆ ಇದೆ. 

ತಣ್ಣನೆಯ ಕೂಳು ತಂಗೂಳು> ತಂಗಳು ಆದಂತೆ 
ಪೊನ್ + ಕೂಳು > ಪೊಂಗೂಳು ಆಗಿರಬಹುದು‌ . ಇದೇ ಮುಂದೆ ಪೊಂಗಳು > ಪೊಂಗಲು ಆಗಿರಬಹುದು. ಬೇಲೆ ಉರಿದಾಗ ಪೊನ್ ಬಣದ್ದಾಗುತ್ತೆ... ನೀರಾಕಿ‌ಬೇಯಿಸಿದಾಗ ಹೊನ್ನಿನ ಬಣ್ಣದ ನೀರನ್ನೇ ಉಕ್ಕಿಸುತ್ತೆ.


ಪೊಂಗು (ಬಳಕೆ - ಹಾಲು ಉಕ್ಕುತ್ತೆ) ಎಂದರೆ ಉಕ್ಕು ಅಂತ. ( ಈ ಪದ ತಮಿಳಲ್ಲ ಈಗಲೂ ಬಳಕೆಯಲ್ಲಿದೆ) 

ಈ‌ ಪಾತ್ರೆ ದಾಟಿ‌ ಉಕ್ಕೋದು ಯಾವಾಗಲೂ prosperity ಯ ಸಂಕೇತ. ಹಾಗಾಗೇ ಹೊಸ ಮನೇಲಿ ನಾವು ಮೊದಲು ಹಾಲು‌ ಉಕ್ಕುಸ್ತೀವಿ."ಮನೆಗೆಇಳಿದುಕೊಳ್ಳು"ವದನ್ನು ಹೇಗೆ "ಹಾಲು ಉಕ್ಸೋದು" ಅಂತ ಕರೀತೀಬೋ ಹಾಗೇಯೇ ಈ ಹಬ್ಬಕ್ಕೂ "ಉಕ್ಕುವ ಹಬ್ಬ  / ಪೊಂಗಲ ಹಬ್ಬ" ಅಂತ ಹೆಸರು ಬಳಕೆಗೆ ಬಂದಿರಬಹುದು.








ಕೊಸರು:
ನಮ್ಮ ರೈತರ ಜನಪದ ಹಬ್ಬಗಳೆಲ್ಲ ಒಂದೊಂದೇ ಹೈಜಾಕ್ ಹಾಗಿ "Temple Centered" ಆಗ್ತಾ ಇರೋದು ಕಂಡ್ರೆ ಒಂದು ಕಡೆ ಬೇಜಾರಾಗ್ತಾ ಇದೆ.








ಕೆಲ ಅಚ್ಚಗನ್ನಡದ ಪದಗಳು"   

* ಗಣಿಗೆ :  ಇದು ಐದಾರು ಚೀಲ ಗಳಷ್ಟು ಕಾಳನ್ನು ಹಿಡಿದಿಟ್ಟುಕೊಳ್ಳಬಲ್ಲಷ್ಟು ದೊಡ್ಡದಾದ ಎತ್ತರದ, ಬಿದಿರಿನಿಂದ ಮಾಡಿದ ಒಂದು structure - ಗಣದಿಂದ ಮಾಡಿದ್ದು ಗಣಿಗೆ 

*ವಡೇವು : ದುಂಡನೆಯ ಆದರೆ ಎತ್ತರದ ಸಣ್ಣಬಾಯಿಯ ಮಣ್ಣಿನ ವಾಣ / structure  - ಇದು ಗುಡಾಣ, ಮಡಕೆ, ಸೋರೆ ಗಿಂತ  ಬೇರೆ. ಹಂಡೆಯೂ ಅಲ್ಲ
  
*ಹುಗ್ಗಿ - ಈ ಪಾಯ್ಸ ಇಲ್ಲ ಅಂದ್ರೆ ಅದು ನಮ್ ಕಡೆ celebration ಏ ಅಲ್ಲ ಅನ್ನುವಷ್ಟು ಇದು ನಮ್ಮ ಎಲ್ಲ ಆಚರಣೆಗಳಲ್ಲಿ ಹಾಸು ಹೊಕ್ಕಾಗಿದೆ