ಇಂದು ನಾವು ಮುಕ್ತಿ ,ಮೋಕ್ಷ , ಐಕ್ಯ ಇವುಗಳ ಬಗ್ಗೆ ಭ್ರಮೆಯುಳ್ಳೈವರಾಗಿದ್ದೇವೆ. ಮೋಕ್ಷಕ್ಕೆ 'ತನ್ನ' ದಾರಿಯೊಂದೆ ಸರಿ, ಉಳಿದದ್ದೆಲ್ಲ ತಪ್ಪು ದಾರಿಗಳು ಅನ್ನೋ ವಾದವನ್ನು ಕೇಳಿದ್ದೇನೆ. ತನ್ನ ದೇವರೇ ಸರ್ವೋತ್ತಮ, ಹಾಗಾಗಿ ತಾನು ಶ್ರೇಷ್ಠ ,ಉಳಿದವರು ಕೀಳು ಅನ್ನೋ ಕೀಳು ಮತಾಂಧರನ್ನು ಅನೇಕರನ್ನು ನೋಡಿದ್ದೇನೆ.
ಆ ದೇವರ ಒಲುಮೆಗಾಗಿ ಮತ್ತು ಇನ್ನು ಕೆಲವರು ಮುಕ್ತಿಗಾಗಿ ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನುವುದು ನಮಗೆ ಗೊತ್ತು. ಈ ಸರ್ಕಸ್ಗಳು ಆವಶ್ಯಕವೇ ಅಂತ ಒಮ್ಮೆ ಯೋಚಿಸುವುದು ಒಳ್ಳೆಯದು.
ಅಲ್ಲಮ ಪ್ರಭುಗಳ ಈ ವಚನ ನನಗೆ ತುಂಬ ಇಷ್ಟವಾಗುತ್ತೆ. ವಚನವನ್ನು ಇಲ್ಲಿ ಓದಿಕೊಂಡು , ಕೇಳಿ.
ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ್ಯ ಗಂಗೆಯ ಮಿಂದಡಿಲ್ಲ,
ತೊಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲಾ ಇಲ್ಲಾ
ನಿತ್ಯ ನೇಮದಿಂದ ತನುವ ಮುಟ್ಟಿ ಕೊಂಡಡಿಲ್ಲಾ
ನಿಚ್ಚಕ್ಕಿನ ಗಮನವಂಗಲ್ಲಿಗೆ
ಅತ್ತಲಿತ್ತ ಹರಿವ ಮನವ ಚಿತ್ತದಲೀ ನಿಲಿಸ ಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು
|
*ನಿಚ್ಚಕ್ಕಿನ ಗಮನವಂಗಲ್ಲಿಗೆ ... ಈ ಪದದ ಅರ್ಥ ಆಗಲಿಲ್ಲ. ತಿಳಿದವರು ಬರೆಯಿರಿ.
ಬಯಲಿನ ಬಗ್ಗೆ , ಸಮಾಧಿಯ ಬಗ್ಗೆ , ಇನ್ನೂ ಸರಳ ವಾಗಿ ಹೇಳಲು ಆಗದೇನೋ!