ತನು-ಮನ-ಧನವ ಹಿಂದಿಕ್ಕಿಕೊಂಡು, ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು ನೀವೆಲ್ಲಾ ಕೇಳಿರೆ:
ತಲಹಿಲ್ಲದ ಕೋಲು ಹೊಳ್ಳು ಹಾರುವುದಲ್ಲದೆ ಗುರಿಯ ತಾಗಬಲ್ಲುದೆ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ ಕೂಡಲಸಂಗಮದೇವನೆಂತೊಲಿವನಯ್ಯಾ?
-- ಬಸವಣ್ಣ - Basavanna
ಚಿಕ್ಕವರಿದ್ದಾಗ ನಾವು ಆಡಿದಷ್ಟು "ಬಿಲ್ಲುಬಾಣ" ಗಳ ಆಟವನ್ನು ಉಳಿದವರು ಆಡಿರುವ ಸಾಧ್ಯತೆ ಕಡಿಮೆಯೇ...
ಬಿದಿರಿನ #ದೆಬ್ಬೆ ಯಿಂದ ಬಿಲ್ಲು ಮಾಡಿಕೊಳ್ಳುತ್ತಿದ್ದವು ... ಜೋಳದ ಸೆಪ್ಪೆಯ ತುದಿಯ ಕೋಲು (ಗಣ್ಣುಗಳು ಇಲ್ಲದಿರುವ ಭಾಗ - #ವಗ್ಗರೆ) ಗಳನ್ನು ಆಯ್ದುಕೊಂಡು ಬಾಣಗಳನ್ನು ಮಾಡಿಕೊಳ್ಳುತ್ತಿದ್ದವು. ಈ ಬಾಣಗಳ ತುದಿಗೆ "ಹುಣೆಸೆಹಣ್ಣು" ನ್ನು ಸಣ್ಣಗೆ ತದ್ದು ಚಿಕ್ಕ ಉಂಡೆ ಮಾಡಿಕೊಂಡು ಹಚ್ಚುತ್ತಿದ್ದೆವು. ಇದೇ #ತಲಹ. ಬಾಣದ ತುದಿಗೆ - ಗಾಳಿಯ friction / ಘರ್ಷಣೆ ಯನ್ನು ಭೇದಿಸಲು ಬೇಕಿರುವ ಭಾರ.
ತಲಹವಿಲ್ಲದ ಬಾಣ ಗುರಿ ಸೇರದು. ನೇರವಾಗಿ ಗುರಿಯೆಡೆ ಚಲಿಸದೆ ಮೇಲೆ ಕೆಳಗೆ (ಅಂಕುಡೊಂಕಾಗಿ) ಹಾರಾಡುತ್ತಾ ದೂರ ಹೋಗದೇ - ಗುರಿ ತಲುಪದೇ - ಹತ್ತಿರದಲ್ಲೇ ಬೀಳುವುದು. ಕೂಡಲಸಂಗಯ್ಯನ ಒಲುಮೆಗೆ ತನುಮನಧನಗಳ ತಲಹು ಬೇಕು. ಬರಿಯ ಮಾತಿನ ಬಣಬೆಯಿಂದ ಸಂಗಯ್ಯನ ಸೇರುವ ಗುರಿ ಸಾಧ್ಯವಾಗದು. ಬಾಣ ಹೊಳ್ಳು ವುದ ರಿಂದ ಬಿಡಿಸಿಕೊಳ್ಳವಂತೆ - ನಾವುಗಳು ಮಾಯಾಪಾಶದಿಂದ ಬಿಡಿಸಿಕೊಳ್ಳಬೇಕು. ಮಾಯಾಪಾಶವು ನಮ್ಮನ್ನು ಗುರಿಯಿಂದ ದೂರ ಮಾಡಿ ಅಲ್ಲಿಗಿಲ್ಲಿಗೆ ಎಳಸುವುದು.
Real life examples - ಬಳಸಿಕೊಂಡು ಆದ್ಯಾತ್ಮ ವನ್ನು ಅರ್ಥಸುವುದೇ ಬಸವಣ್ಣ ನವರ ವಿಶೇಷತೆ. ಬೇರೆಯವರಲ್ಲಿ ಇದು ಕಾಣದು.
ಪದಗಳು:
ತಲಹು / ತಲಪು - ಬಾಣದ ತಲೆಗೆ ಅಂಟಿಸಿರುವ ಭಾರ.
ಬಣಬೆ : ಬಣವೆ, ಒಟ್ಟು, pile
ಒಳಲೊಟ್ಟೆ : ಲೊಳಲೊಟ್ಟೆ
the quality or fact of being worthless; hollowness, he who is hollow or worthless; a useless man.
ಕೋಲು : ಬಾಣ. ;
ಹೊಳ್ಳು / ಪೊಳ್ಳು, : ಹೊರಳು; ;
ಹೊಳ್ಳು ಹಾರು : ಅಕ್ಕ ಪಕ್ಕ ಕ್ಕೆ ಹಾರು - ನೇರವಾಗಿ ಅಲ್ಲ
ಮಾಯಾಪಾಶ : ಗುರಿಯನ್ನ ಮರೆಸುವ ಚಾಟಿ / control
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ