ಬುಧವಾರ, ಅಕ್ಟೋಬರ್ 09, 2024

ಕೂಡಲಸಂಗನ ಕೂಡುವ ಕೂಟ

"‌‍‍ನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿ,
ಆ ನಡೆನುಡಿ ಎರಡರ ಚೆನ್ನ ಮೃಡ ನಿಮ್ಮೊಳಗಡಗಿಸಿ, 
ತಾವೆಡೆಯಿಲ್ಲದೆ ಪರಿಪೂರ್ಣರಾದವರ ಪಡುಗವ ಹೊರುವೆ, ಪಾದರಕ್ಷಯ ಹಿಡಿವೆ. 
ಎನಗಿದೆ ಮಾಟ, ಬಯಸುವ ಬೇಟ. ಕೂಡಲಸಂಗಮದೇವಾ, ಇದು ನಿಮ್ಮ ಕೂಡುವ ಕೂಟ.". ---- #ಬಸವಣ್ಣ‌

ಇನ್ಯಾರ್ದೋ ಗೋಡೆನಲ್ಲಿ ಈ ವಚನ ನೋಡಿದೆ. ಒಂದೆರಡು ಕಾರಣಗಳಿಂದ ಈ ವಚನ ಇಷ್ಟ ಆಯ್ತು.‌ಹಾಗಾಗಿ ಎರಡು ಮಾತುಗಳು. ಅನುಭಾವ ಸಾಹಿತ್ಯವಾದ ವಚನಗಳಿಗೆ ನಿರ್ವಚನ‌ ಮಾಡುವುದು ತಪ್ಪು ಅಂತಾನೆ ನನ್ನ ಅನಿಸಿಕೆ.. ಇದಕ್ಕೆ ನಾನು  ಎರಡು ಕಾರಣಗಳನ್ನ ಕೊಡ್ತೀನಿ.

೧. ವಚನಗಳು ಸರಳ ಅಡುನುಡಿಯಲ್ಲಿವೆ.. ನೇರವಾಗೇ ಓದಬಹುದು. ಇನ್ನೂ ಸರಳ ಮಾಡುವ ಪ್ರಯತ್ನ ಮಾಡಿದರೆ ನಮ್ಮ ನಂಬಿಕೆ‌ ಅನಿಸಿಕೆಗಳನ್ನೆಲ್ಲ ತುರುಕಿದಂತಾಗುತ್ತೆ.
೨. ಇದು ಅನುಭಾವ ಸಾಹಿತ್ಯ. ನಮ್ಮ ಅನುಭವಕ್ಕೆ (ಪದಗಳು ಅರ್ತವಾದ್ರೂ) ಅಷ್ಟು ಸುಲಭಕ್ಕೆ ಸಿಕ್ಕದೇ ಇರಬಹದು.. ಅನುಭಾವ ಸಾಹಿತ್ಯ ವನ್ನ ಶುಷ್ಕ ತರ್ಕ ದೊಳಗೆ ತರೋದು ಎಷ್ಟು ಸರಿಯೋ‌ ತಿಳಿಯದು. 
೩. Spiritual domain ( ಅನುಭಾವದ ನೆಲೆಗಟ್ಟಿನ) ಕಲಿಕೆಯನ್ನ / ಅನುಭವ ವನ್ನ Cognitive domain (ತಿಳಿವಿನ ನೆಲಗಟ್ಟು) ನಲ್ಲಿ ಎಷ್ಟರ ಮಟ್ಟಿಗೆ ಅರ್ತ ಮಾಡ್ಕೋಬಹುದೋ ತಿಳೀದು.

ಆದ್ರೂ ಎರಡು ಮಾತು... 

ನಡೆದು ತೋರಿದರೆ ನುಡಿ ಚನ್ನ;  ನುಡಿದು ತೋರಿದರೆ ನಡೆ ಚನ್ನ 
ಎನ್ನುವಲ್ಲಿ ನಡೆ ನುಡಿ ಒಂದೇ ಇರಬೇಕು   ಅನ್ನುವ ಅರ್ತ ಬರುತ್ತೆ. ನಡೆ ನುಡಿಗಳೆರಡೂ ಚನ್ನಿದ್ದರೆ ಕೂಡಲ ಸಂಗಯ್ಯ ನಮ್ಮೊಳಗಿರ್ತಾನೆ, ಅಂತ‌ ಪರಿಪೂರ್ಣರ ಪಡುಗ ( ಉಗುಳುಗುವ ಪಾತ್ರೆ) ಹೊರಲೂ ಸಿದ್ದ, ಪಾದರಕ್ಷೆ ( ಚಪ್ಪಲಿ) ಹಿಡಿಯಲೂ ಸಿದ್ದ ಅನ್ನುವುದ ಬಸವಣ್ಣನ ನಿಲುವು. ಅಂತರಂಗ ಬಹಿರಂಗ ಶುದ್ದಿ ಯ ನಿಲುವು ಇದು. 

ಮಾಡುವುದರಿಂದ ಮಾಟ (ಕೆಲಸ);   ಬೇಡುವುದರಿಂದ ಬೇಟ;  ಕೂಡುವುದರಿಂದ ಕೂಟ. 

ಮಾಟ ಬೇಟ ಕೂಟಗಳನ್ನ ಎರಡು ನೆಲೆಗಳಲ್ಲಿ ಅರ್ತ ಮಾಡ್ಕೋಬಹುದು.

(೧) ಗಂಡು ಹೆಣ್ಣಿನ ನೆಲೆಯಲ್ಲಿ   ಮತ್ತು  
(೨) ಶರಣ ಸತಿ ಲಿಂಗ ಪತಿ ನೆಲೆಯಲ್ಲಿ.

"ಕ್ರಿಯಾಜ್ಞಾನ ಸಂಯುಕ್ತಂ ವೀರಶೈವಸ್ಯ ಲಕ್ಷಣಂ" ಅನ್ನೋದು ಒಂದು ಮಾತು.‌
ಇಲ್ಲಿ‌ ಕ್ರಿಯೆ > ಇಷ್ಟಲಿಂಗ‌ಪೂಜೆ ಇತ್ಯಾದಿಗಳು
ಜ್ಞಾನ > ಅಷ್ಟಾವರಣ, ಷಟ್ ಸ್ತಲ, ಇನ್ನೂ ಮುಂತಾದವುಗಳ ಜ್ಞಾನ.

ಮಾಟ > ಮಾಡುವ ಕಾಯಕ / ಕ್ರಿಯೆ
ಬಯಕೆ> ನಿರ್ವಾಣ, ಬಯಲು ಐಕ್ಯ ಆಗುವ ಬಯಕೆಗಳು
ಕೂಟ > ಬಯಲು, ಐಕ್ಯ 

ಬಸವಣ್ಣ ಇವುಗಳಾಚೆ ಬಂದು ' ಎನ್ನಂತವನಿಗೆ' ಪರಿಪೂರ್ಣರ ಸೇವೆಯೇ ಸಂಗವೇ ಕೆಲಸ / ಕ್ರಿಯೆ, ಇದೇ "ಎನ್ನ ಬಯಕೆ ಇದೇ 'ಎನಗೆ' ಕೂಡಲ ಸಂಗಯ್ಯ ನನ್ನು ಕೂಡಲು ಇರುವ ದಾರಿ" ಎನ್ನತ್ತಾರೆ.

ತಾವೇ ಕಟ್ಟಿದ ಸಿದ್ದಮಾದರಿಗಳನ್ನು‌ ಒಡೆಯುವ ಪರಿ‌ವಚನಕಾರರಿಗಷ್ಟೇ ಸಾದ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ