ಬಸವನ ಪುಣ್ಯಕೀರ್ತಿಲತೆ ಬೇರ್ವರಿಯಿತ್ತುರಗೇಂದ್ರಲೋಕದೊಳ್
ದೆಸೆಗಳನಗ್ಗ ಳಂ ಮುಸುಕಿ ಸರ್ವಿದುದಾಗಳೆ ಮರ್ತ್ಯಲೋಕದೊಳ್ |
ಕುಸುಮಿತವಾಗಿ ಸೌರಭದ ಹೊಂಪುಳಿಯೋಯ್ತಮರೇಂದ್ರಲೋಕದೊಳ್
ಪಸರಿಸಿ ಪೂರಿತಾಮಳಸುಧಾಫಳವಾದುದು ರುದ್ರಲೋಕದೊಳ್ ||
೧*
ಇಂತು ಬಸವರಾಜಂ ಸಕಲ ಜಗದ್ಭರಿತವಾದಗಣ್ಯಪುಣ್ಯಮಯ
ಕೀರ್ತಿಯಂ ತಳೆದು, ಸಂಗಮೇಶ್ವರ ಶ್ರೀಪಾದಪಂಕಜ ನಿರಂತರ
ಸೇವನಾಜನಿತ ಸುಖರಸಭರಿತ ಶುದ್ಧಶೈವಸರೋನಿಧಿ ತರಂಗಮಾಲಾ
ನಿಮಗ್ನ ಚಿತ್ರನಾಗಿರ್ದ೦;
ಅತ್ಯಲು ಕಳಿಂಗದೇಶದ ಮಹಾಭಕ್ತನಪ್ಪ ಮಹದೇವಿಶೆಟ್ಟಿಯ
ರೊಂದುದಿನಂ ಲಿಂಗಾರ್ಚನಾತತ್ಪರ[0] ಅಮೃತಾನ್ನ ನಿವೇದಿತಪ್ರಸಾದ
ಸ್ವೀಕೃತಕೃತ್ಯನಾಗಿ ಸುಖದೊಳಿಷ್ಟ ಸಮಯದೊಳು; ಒರ್ವ ಮಾಹೇ
ಶ್ವರಂ ಪುರಾತನ ವಿರಚಿತಗದ್ಯ ಪದ್ಯಂಗಳಂ ಕೇಳಿಸುತ್ರಂ, ಬಸವರಾಜನ
ಗೀತದೊಳು-ಬೇಡಿಬೇಡಿದ ಶರಣಂಗೆ ನೀಡದಿರ್ದಡೆ ತಲೆ ದಂಡ
ಕೂಡಲಸಂಗ, ಅವಧಾರು-ಎಂಬ \ತಮಂ ಪಾಡೆ, ಮಹಾದೇವಿ
ಸೆಟ್ಟಿಯರು ಕೇಳು ಕಂಪಿಸಿ ಕೌತುಕಂಗೊಂಡು ತಲೆಯಂ ತೂಗಿಓಹಿಲಯ್ಯ ಉದ್ಧಟಿಯ ಮಳೆಯರಾಜದೇವರ್ ಮೊದಲಾದರಿತೆಅದಿಂ
ನುಡಿಯಲಮ್ಮರ್. ಇಂತು ನುಡಿವುದರಿದು. ಗೀತಾರ್ಥಮಂ ಪರೀಕ್ಷಿಪಂ.
ಸತ್ತಿನೊಳು ಮಾಣಿಕಂ ಸತ್ತೆತ್ತಿನೊಳು ಮುತ್ತು ಪತ್ತೆತ್ತಿನೊಳು ಹೊಸ
ಹೊಂಗಳಂ ಬೇಡಿ ಬಸವನಂ ಮುಂದುಗೆಡಿಸುವೆ-ಎಂಬ ಮನದಿ ಸತ್ಯ
ಶರಣರ ಸಂಕುಳಂ ಬೆರಸಿ ಪೋಡಿಮುಟ್ಟು ಕೆಲವೆಡೆರೆಯು ಪಲವೂರ್ಗಳಂ
ಕಳಿದು ನಡೆತಂದು ಮಂಗಳವಾಡದ ಪೊಱವೊಳಲ ಶಿವಪುರದೊಳು ಬಿಟ್ಟಿ
೧೦
ರಲು ;
1 ಪೊಸರಸ (ಗ, ಈ.)
119/142
ಹನೆ ರಡನೆಯ
೮೩
೨೦
೩೦
.
ಇತ್ತಲು ಸಂಗಮೇಶ್ವರಂ ಬಸವನ ಚಿತ್ರಮಂ ಪರೀಕ್ಷೆ ಪೆನೆಂದು,
ಕೆಂಜೆಡೆ ಕುಂಡಲಂ ಬೆಳಸ ಕಣ್ಣು ಪೊಳೆವ ಕಪೋಳಂ ಸುಲಿಪ ಸುಧಾ
ವದನಂ ಪುಲಿದೊವಲು ಭಸಿತಾಂಗಂ ಸಮುದಾಯವಾಗಿ, ಗಳಗಳನೆ
ನಡೆತಂದು ಜಂಗಮಧ್ಯಾನನಿದ್ರಾಮುದ್ರೆಯೊಳಿರ್ದ ಬಸವನಂ ಪೊಡೆ
ದೆಬ್ಬಿಸಿ-ಏಳೇಳು ಬಸವ, ಮುಂದಣಿಯದೆ ಗೀತಮಂ ಪಾಡಿ ತೊಡಕಂ
ತಂದುಕೊಂಡೆ. ಕಳಿಂಗದೇಶದ ಮಹದೇವಸೆಟ್ಟಿಯೆಂಬ ನಿಚ್ಚಳಭಕ್ತಂ
ಕನಕರತ್ನ ರಾಶಿಗಳಂ ಮನವಾರೆ ಬೇಡಲೆಂದು ಬಂದಿರ್ದಪಂ. ಎಂತು
ಮಾಡಿದವೆ ? ಇನ್ನೆಂತು ಕೊಟ್ಟನೆ-ಎಂದು ಸಂಗಂ ಬೆಸಸಿದ ಮಾತಿಂಗೆ
ಬಸವಂ ಮುಗುಳಗೆ ನಗುತ್ತೆ-ಅಂಜದಿರಂಜದಿರ್, ದೇವ. ಪರೀಕ್ಷೆಗೆ
ತೆಅಹಿಲ್ಲಂ. ಕಟ್ಟಿದೆನೊರೆಯ, ಬಿಟ್ಟೆ ಜನ್ನಿ ಗೆಯ, ಓಡದಿರೋಡದಿರು. ಶರ
ಣರ ಮನೆಯ ಬಿರುದಿನಂಕಕ್ಕೆ ಹಿಮ್ಮೆಟ್ಟದಿರೆಲೆ ದೇವ, ಎಲೆ ತಂದೆ, ಎಲೆಲೆ
ಹಂದೆ, ಕೂಡಲಸಂಗ, 'ಸ್ವ'ಯವಾಗು ಸ್ವಯವಾಗು-ಎಂಬ ಗೀತದ ಪರಿ
ಚೇದದುರವಣೆಗೆ ಸಂಗಂ ನಿಲತಮ್ಮದೆ ಮಗನ ನಿಷ್ಠೆಗೆ ಮೆಚ್ಚಿ ಅಂತರ್ಧಾ
ನಕ್ಕೆ ಸಂದು ಕೈಲಾಸಕ್ಕೆ ಬಂದು-ಬಸವಣ್ಣಂ ಕೊಟ್ಟಿಲ್ಲದೆ ಮಾಣಂ.
ಕೊಡುವ ಸಮಯಕ್ಕನುವಾಗಿರವೆಳ್ಳುಂ-ಎಂದು, ಮೇರುವಿನೊಳ
ಜ್ಯೋತಿ ಬೆಟ್ಟದ ಹೊಚ್ಚ ಹೊಸಹೊಂಗಳಂ ಪದ್ಮರಾಗಂಗಳಂ ಮೌಕ್ತಿಕ
ಜಮನನುಮಾಡಿಕೊಂಡು ಮಂಗಳವಾಡದ ಬಸವನ ಮಹಮನೆಯ
ಮುಂದೆ ಪೋಗಿರೆಂದು ಕುಬೇರನಂ ಕಳುಪುತಿರ್ದ೦;
ಇತ್ತಲು ಬಸವರಾಜಂ ದಂಡನಾಥಪಂಚಾನನಂ ಶಿವಶರ್ಣಂತಿ
ನಿತ್ಯನೇಮಸಂಪನ್ನ೦ ಸನ್ನಿ ಚ್ಛಾಸಿರ ಮಕುಟವರ್ಧನ ಮಾಹೇಶ್ವರರ
ನಡುವೆ ನೀಚಾಸನನಾಗಿ ಭಯಭಕ್ತಿಯಿಂದಿಪ್ಪಲ್ಲಿ, ಶರಣಕುಲದ ಕರ್ಣ
ಪರಂಪರೆಯಿಂ ಮಹದೇವಸೆಟ್ಟಿಯರು ಬಂದರೆಂಬ ಸಂಭ್ರಮಮಂ ಕಂಡಿ
ದಿರೆದ್ದು ಪಾದದೊಳು ಬಿದ್ದು ತೆಗೆದಪ್ಪಿ ಬಿಗಿಯಪ್ಪಿ ನಡೆತಂದು ಸಿಂಹಾ
ಸನದೊಳಿರಿಸಿ ಪಾದಪದ್ಮ ಪ್ರಕ್ಷಾಳನಂಮಾಡಿ ಪಾದೋದಕಭರಿತ
1 ತೃದ (ಕ) : # (ಖ.) : ಭ (ಖ.ಸ.)
3
ಸರ್ವಾಂಗನಾಗಿ ಸಕಲಗಣಂಗಳೊರಸಿ ಲಿಂಗಾರ್ಚನಂಗೆಯ್ತಾ ರೋಗಿ
ಸಲಿತ್ತು ಸಸಂತಿಯೊಳ್ ಪ್ರಸಾದಮಂ ಕೈಕೊಂಬಲ್ಲಿ, ಮಹಾದೇವಿಸೆಟ್ಟಿ
ಯರಿದೆ ಸಮಯವೆಂದು-ಎಲೆ ಬಸವ, ಬೇಡಿದ ಶರಣರ್ಗಿಲೆನ್ನದೀವೆ
ನೆಂಬ ಗೀತದೊಳಗಣ ಬಿಂಕದ ಬಿರುದಂ ಕೇಳು ನಿನ್ನೊಳೊಂದು
ಬೇಡಿ ಬಂದಂ-ಎನುಂ ಮತ್ತಂ ಬೇಡಲಮ್ಮದೆ ಗದುಗದಿಸಿ ಬೆವರ್ತು,
ಮೂವತ್ತೆತ್ತಿನೊಳು ತೊಗರಿ ಜೋಳದಕ್ಕಿ ಕಡಲೆಗಳನೊಡತೀವಿ ಕೊಡು
ವುದೆನುತ್ತೆಂದು ಶಿವಪ್ರೇರಣೆಯಿಂ ನುಡಿಯೆ ; ಕೇಳು ಬಸವರಾಜಂ
ಲಿಂಗಸದರ್ಥಂ ಜಂಗಮಸುರತರು ಸಾರಹೃದಯಂ ಧೀರೋದಾತ್ರಂ'
ಸತ್ಯಸಂಧಂ ದಯಾನಿಧಿ ಶಿವಜ್ಞಾನಸಂಪನ್ನ೦ ದರಹಸಿತವದನಸರ
ಸಿರುಹನಾಗುತ್ತೆ-ಭಯಂ ಬೇಡ, ಬೇಡಿ ಬೇಡಿ, ಕಳಿಂಗದೇಶದಿಂ ಪೋಲಿ
ಮಡುವಾಗಳೆನ್ನಂ ಬೇಡಲೆಂದುದ್ಯೋಗಿಸಿದ ಮಾರ್ಗದೊಳೆ ಬೇಡು
ವದು. ಕುಡವನ ಸಂಗಂ, ಬೇಡುವನಂ ಸಂಗಮದೇವಂ. ಎನಗೊಂದುಂ.
ಭಾರವಿಲ್ಲ. ಅಂಜಬೇಡಂಜಬೇಡ ಎನೆ, ಮಹಾದೇವಿಶೆಟ್ಟಿಯರು ನಾಂಚಿ
ತಲೆವಾಗಿರ್ದುದನಹುದು, ಬಸವರಾಜ ದಂಡನಾಥಚೂಡಾಮಣಿ ಭಕ್ತ
ಜನಬಾಂಧವಂ ಸಂಗನಂ ಮೂದಲಿಸಿ ಶಿವಜ್ಞಾನದ ಮೇಲೆ ಚಿತ್ರವನಿಟ್ಟು
ಆಚಾರದ ಮೇಲಹಂಕಾರವನಿಟ್ಟು ನಿಷ್ಠೆಯ ಮೇಲೆ ಬುದ್ಧಿಯನಿಟ್ಟು
ಕಠಾರಿಯ ಮೇಲೆ ಕೈಯನಿ'[3]', ಮುನ್ನ ಕರಿಕಾಲ ಚೋಳಂಗೆ ಕು
ದಂತೆ ಪೊನ್ನ ಮಳೆಯನೊಂದನೇ ಕರೆದೊಡೆ ಪುನರುಕ್ತವೆಂದು ಬಸವಣ್ಣಂ
ಕೈಕೊಳ್ಳನೆಂದು ಮೇರುವಿನೊಳಕ್ಕೊತ್ತಿದ ಪೊಸಪೊನ್ನ ಸಿಂಡಿಗೆಯೊಡನೆ
ಮಾಣಿಕದ ಮಳೆ ಮುತ್ತಿನ ಮಳೆ ಮೊದಲಾದ ನವರತ್ನ ವೃಷ್ಟಿಯಂ
[ಶಿವಂ] ಕುದನೆಂಬಂತೆ, ರೋಹಣಾಚಲದ ಮಾಣಿಕಂಗಳಂ ತಾಮ್ರ
ಪರ್ಣಿಯ ಮುತ್ತುಗಳುಂ ನಂದಿಯುಂಡಿಗೆಯ ಮಿಸುನಿಯ ಪೊಂಗಳುಂ
ಪುರದೊಳ್ ತೀವಿದ ಶರಣರ್ಗೆ ನಿರ್ಮಳ ಸ್ವಾ ಸ್ಥಾನಮಾದ
ಬಸವನ ಮನೆಯ
ಮುಂದೆ ಸುರಿದು ರಾಸಿಯಾಗಿರೆ, ಕಂಡು ಬಸವರಾಜಂ ಪುಳಕದ
೬೦
1
- ಟ್ಟು (ಕ.ಖ.) ಡಿ (ಗ. ಈ.)
೮೫
೭೦
ಹಿಂಡನಿಂಡೆಗೊಳಿಸುತಂ ನಡೆತಂದೆತ್ತುಗಳಂ ತೀವಿ ಸಂತೋಷದಿಂ
ಮಹದೇವಸೆಟ್ಟಿಯರ ಮನವಂ ತಣಿಸಿ ಕಳಿಂಗದೇಶಕ್ಕವರಂ ಬೀಳ್ಕೊಟ್ಟು,
ಬಸವ ಬಸವರಾಜಂ ಬಸವದೇವಂ ಸುಕೃತಸೂಚಕಾರಿಂ ಸುಖ
ದೊಳಿಪ್ಪವಸರದೊಳು ;
ಸಂಗಮೇಶ್ವರಂ ಬಸವಿದೇವನೊಡತಣ ಲೀಲಾವಿನೋದಕಲಹಮಂ
ಕೈಕೊಂಡು-ಮನಮಂ ಮತ್ತೆ ಪರೀಕ್ಷಿಸೆಂ. ಮಹದೇವಸೆಟ್ಟಿಗೆ ಕನಕ
ರತ್ನಂಗಳಂ ಕೊಡುವುದರಿದಲ್ಲ. ಕುಲವಧುಮಂ ಕೊಡುವುದರಿದು-ಎಂದು,
ವಿಚಿತ್ರಮಹಿಮಂ ಕೆಲಬರ್ ಗಣೇಶ್ವರರು ಕರೆದು-ನೀವೆಲ್ಲರುಂ ಮರ್ತ್ಯ
ಲೋಕದೊಳು ಮಂಗಳವಾಡದ ಸಣ್ಯಾಂಗನೆಯರೊಳೊರ್ಬರುಳಿಯದಂತೆ
ಎಲ್ಲರ್ಗ೦ ಬೇಳಬೇಯೊಗಳನಿತ್ತಲಲ್ಲಿ ನೆರೆದಿಪ್ಪುದು-ಎಂದು ಬೆಸಸಿ
ಕಳುಪಿ, ತಾನೊಂದು ವಿಟವೇಷಮಂ ತಳೆದನದೆಂತೆಂದಡೆ
ಕುಸುಮಕುಲ[ದಪರಿಮಳಾದಕ್ಕೆಡೆಗೊಟ್ಟು ಮೇವ
ಸಿರಿಮುಡಿಯೊಳು ನೀಲದರಮನೆಯ (?), ಸುಕುಮಾರನೆನಿಪ ಬಾಲ
ಶಶಿಯಂ ಕೇಳಿಸುವ ಗಾಯಕರಂತೆ ಸುತ್ತಿ ಮುತ್ತಿ ಝೇಂಕಾರಂ
ಗೊಂಬ ತುಂಬಿಯ ಪಂತಿಯಂ ಮುಸುಂಕಿಟ್ಟು ಪವಡಿಸುವ ಬಿಸುಗಣ್ಣ,
ತೊ'[ಡಂಬೆಯಂ ತಪ್ಪಳಿಸುವ ಹೆಣ್ಣುಂಬಿಗಳಂತೆ ಲಲಾಟರಂಗದೊ
ಳುಂಗುರಿಸಿ ಸಂಗಡದಿಂ ಕುಣಿವ ನೀಳಾಳಕಂಗಳ, ಅದಲ್ಲದೆಯುಂ
ಪಡಿಯಂ ನೋಡಲ್ ಒಯಸಿ ನಡುವೆ ಪರಿಮಳದ ನಾವೆಯಂತಡ್ಡ ಮಿರ್ದ
ನಾಸಿಕಮಂ ದಾಂಟಲಾಅದುಭಯಪಕ್ಷದಿಂ ಸುತ್ತಿ ಬಪ್ಪಾಸೆಯೊಳು
ಬಟ್ಟೆಗೊಡುವುದೆಂದು ಕರ್ಣಾವತಂಸದಳಂಗಳ ಲಹಣಿಶ್ರೀಗೆ ಮೌಕ್ತಿ
ಕಾವತಂಸಕಿರಣಚ್ಚಲದಿಂ ಚಾಮರಮನಿಕ್ಕುವಂತೆ ಗಂಡಮಂಡಲದೊಳು
ಮಾರ್ಪೊಳೆವ ಕರ್ಣಪಾಲಿಕೆಗಳ, ಅದಲ್ಲದೆಯುಂ ನಸುಸುಧಾಕಿರಣಮಂ
(?) ಪೋಲುವ'[ಸಿ]ತಚ್ಛವಿಯಂ ಸೂಸುವಂತೆಸೆವ ತುಪ್ಪುಳುಮಾಸೆಗಳ,
ಮತ್ತಂ ಬಿಂಬಫಲಮಕಾಲಪಕ್ವವೆಂದು ಮಾಣಿಕದ ಬಣ್ಣದ ನವ
೮೦
1 2 (ಕ.ಖ.ಗ.ಪ.) ;
2 ಗೀ (ಕ.ಖ.ಗ,ಘ,)
ಮಧುರಮಂ ಕಠಿನಾಶ್ರಯಮೆಂದು ಮೂಡ ದ್ವೀಪಾಂತರದೊಳೆಸೆವ
೯೦ ಪ್ರವಾಳಮಂಜಡಾಶ್ರಯವೆಂದೊಲ್ಲದವನಧಃಕರಿಸಿ ಮುಕ್ತಿಯ ಬಿತ್ತನೋ
ಯಾರಿಸಿದಂತಿರ್ದ ದಂತಪಂಕ್ತಿಯನೊಳಗುಮಾಡಿಕೊಂಡು ಗರ್ವದಿಂ
ರಾಗಿಸುವಂತೆಳಬೆಳುದಿಂಗಳೊಳ್ ಚಂದ್ರಮಂಡಲದೊಳೋಲೈಸಿಕೊಳು
ತಿಪ್ಪ ಮಧುರಾಧರಪಲ್ಲವ'[ದ], ಅದಲ್ಲದೆಯುಂ ಸತ್ಯಾಮೃತಸಾಮರ್ಥ್ಯ
ಕೃಪಾರತ್ನಭರಿತವಾದ ಪುಣ್ಯದ ಕರಂಡಗೆಯಂತಿರ್ದ ಬಾಯ್ದೆರೆಯಿಂ
ಮನ ಮುಖಮಂಡಲದ, ಅದಲ್ಲದೆಯುಂ ಸುಕುಮಾರಸೌಂದರ
ವಿರಚಿತ ಸುಕುಮಾರತೆಗಳಿದ್ದೆ ಸಯನೊತ್ತುಗೊಂಡು 'ವೃತ್ತ'ನಾಗಿ ಗಳ
ಗಳನಿಳಿದು ನಳನಳಿಸಿ ಬೆಳೆದಂತೆಸೆವ ನಳಿತೋಳ, ಮತ್ತಂ ಕಲ್ಪಕುಜದ
ಶಾಖಾಕಾರದಂತೆ ಮೆರೆವ ಧವಳದುಕೂಲದ, ಮತ್ತಂ ಎರಡರಿಯದೆ
ಗುವ ಲೋಕಪಾಲಕರ ಮಕುಟದ ಮಾಣಿಕದ ಬೆಳಗನುಂಡು ಬೆಳೆದಂತ
೧೦೦ ಲಕ್ತಕದ ಹಂಗಿಲ್ಲದೆ ನಿಜರಾಗದಿಂ ರಂಜನೆವಡೆದು ಸುಣ್ಣೆಳಗನುಗುಳ್ಳ
ಪದತಳದ ಸೌಂದರಿಯದಿಂ ದೇಶೆವಡೆದ ಹದಿನಾಅಅ ಹರೆಯದ ಹರಂ
ಕರುಣಿಸಿ ನಡೆತಂದು;
ಬಸವರಾಜನ ಮಹಮನೆಯ ಶಿವರಾತ್ರಿಯ ಸಂಭ್ರಮಕ್ಕೆ ಸಂತ
ಸಂಬಡುಂ ಬಂದು ನಿಂದಿರ್ದ ಶಿವನಂ, ಷೋಡಶಹರೆಯದ ಕಮನೀ
ಯನಂ, ಜಂಗಮವೆಂಬುದನಳದು ಬಸವಂ ಪುಳಕದೊಡನೆ ಭೋಂಕನೆದ್ದು
ಕದವ ತೆಗೆದು ಪದತಳದೊಳು ಬಿದ್ದು ಕೊಂಡೊಯ್ದು ಸುಖಜಂಗಮ
ವೆಂಬುದು ಮನದೊಳಹುದು, ಕಣ್ಣೆವೆಯೊಳಿಕ್ಕಿ ಪಾದಮಂ ತೊಳೆದು
ಕಮ್ಮೆಣ್ಣೆಯಂ ತಂದು ಮಜ್ಜನಂ ಮಾಡಿಸಿ ಅಮೃತಪ್ರಸಾದಮನಾ
ರೋಗಣೆತ್ತು ಚಂದನದ್ರವ್ಯಾನುಲೇಪನಂಗಳಂ ಮಾಡಿ ಸುವರ್ಣಾ
೧೧೦ ಭರಣಂಗಳಿಂದಲಂಕರಿಸಿ ಪಚ್ಚಕರ್ಪುರದ ವೀಳೆಯಮಸಿತ್ತು ಭಯ
ಭಕ್ತಿಯಿಂ ಬೆಸಕಯ್ತು ನಿಯತನಾಗಿ, ಕಣ್ತೀವಿ ನೋಡಿ ನಾಲಗೆತೀವಿ
ಹಾಡಿ ಕಮಳಕುಟ್ಕಳದೊಳು ಬಾಳಹಂಸನನಿರಿಸುವಂತೆ ಸೆಜ್ಜೆಯ ಮನೆಯ
1 ದಿಂ (ಕ.ಖ.ಗ.ಘ.) ;
2 :
ತಮಾಕಾರ (ಖ.) ;
ಮೃದುತರವಪ್ಪ ತಳದ ಮೇಲೆ ಬಿಜಯಂಗೆಯ್ಲಿ ಬಸವರಾಜಂ 'ಸನ್ನಿಧಿ
ಯೊಳು ನೀಚಾಸನದಿಂ! ಪಾದಮಂ ಪಿಡಿದೊತ್ತುತ್ತಮಿರೆ ;
ಬಸವ ಬಸವಾ, ನಾವು ಹೆಂಗೂಸಿಲ್ಲದೆ ಇರ್ದುದಿಲ್ಲೆಂಬ ಮಾತಂ
ಕೇಳು -ದೇವದೇವ ನಿಮ್ಮ ಚಿತ್ರವನರಿಯದಜಿರ್ದೆಂ. ಇದೊಂದರಿ
ದಲ್ಲ-ಎಂದು ಪರಿಚಾರಕರಂ ಪುರದೊಳಯಿಂಕೆ ಕಳುಹಲವರಿವರೆನ್ನದೆ ಪಟ್ಟಿ
ಣದ ಸಣ್ಯಾಂಗನೆಯರೆಲ್ಲಂ ಕೂಡಿ ದಂಪತಿಗಳಾಗಿರೆ, ದೇವಾ ಎಲ್ಲಿಯುಂ
ತೆರಿಹಿಲ್ಲವೆಂದು ಬಿನ್ನೆಸೆ, ಕೌತುಕಂಬಟ್ಟು-ಅರಿದೆನದೆಂ. ತನ್ನ
ಮಾಯವೆನ್ನಂ ಕೊಳುವುದೆ ? ಅದಕ್ಕೇನುಯಲಕ್ಕು ಮೆನುತ್ತೆ; ಸಿರಿ
ಸರಸ್ವತಿಯರಂ ಕೀಳ್ಯಾಡುವ ತನ್ನರಸಿ ಮಾಯಿದೇವಿಯರಂ ತಂದು
ಕೂಡುವೆಂ. ಬಳಿಕ್ಕೆ ನೋಡಿಕೊಂಬೆನೆಂದು ನೋಡಿ; ಮಾಯಿದೇವಿಯರ
ನೊಲ್ಲೆ ವೆಂದರಾದಡೆ ಮೇಲೆ ಮಾತೃ ಕಜ್ಜಮಂ ಕಾಣವೇಚ್ಛುದು. ಒಲ್ಲೆ
ನಂದ ವಸ್ತುಮಂ ಸಂಗಂಗೆ ಕುಡಲಾಗದೆಂತು ಮಾಟ್ಟೆನೆನುತೆ; ಮುನ್ನ
ತನ್ನರ್ತಿಗೆ ಹೇರೂರ ಹೆಣ್ಣು ಗಂಡುರೂಪಂ ಮಾಡಿದೋಪಾದಿಯಿಂ.
ದೆನ್ನಂ ಹೆಂ ಮಾಡದೆಂತು ಪೋದಷಂ ? ಲಿಂಗ ಪತಿ ಶರಣ ಸತಿಯೆಂಬೀ
ಮಾತಂ ದಿಟಂಮಾಡಿ ತೋರ್ಸೆಂ ಮಾಯಿದೇವಿಯರನೊಲ್ಲೆವೆಂದ
ಬಳಿಕ್ಕ-ಎ
-ಎಂದು ಬಸವರಾಜಂ ಶರಣಜನಲೀಲಾಶೀಲಂ ಮನದೊಳು
ಜ್ಜುಗಂಗೆಯ್ಯುತ್ತಿರಲು;
ಅತ್ತಲಾ ಮಾಯಿದೇವಿಯರು, ಊರೊಳಗೆ ಸಣ್ಯಾಂಗನೆಯರಿಲ್ಲದಿ
ರ್ದ ಡೆನ್ನ೦ ಜಂಗಮಕ್ಕೆ ಬಸವರಾಜಂ ಕೊಟ್ಟಿಲ್ಲದೆ ಮಾಣನೆಂದು ಸಿಂಗರಿಸಿ
ಕೊಂಡು ಒಸವನ ಬರವಂ ಪಾರ್ದಿಷ್ಟ ಸಮಯದೊಳು ; ಬಸವಂ ಬರಲಿ
ದಿರ್ವಂದು, ನಡೆ ಬಸವ ನಿನ್ನ ಮನೋರಥಮಂ ಮಾಡಿದಪೆನೆಂಬ
ಸತಿಯಂ ಡಿ ಸಂತೋಷದಿಂ
ಸುಖವನೊಡಗೊಂಡು
ಬಪ್ಪಂತೆ ತಂದು, ಸೆಜ್ಜೆಯ ಮನೆಯಂ ಪೊಗಿಸಿ ಮುಚ್ಚುಳನಿಕ್ಕಿಕೊಂಡು
ಬಸವ ಪೋಲಿವಾಗಿಲೊಳಿರೆ ; ಮಾಯಿದೇವಿಯರು ದೇವನ ತೊಡೆಯಂ
ಶಿವನ
1 ನಿವಾಸದೊಳು (ಖ), ಸಿರಾಸನದಿಂ (ಘ), (ಗ, ಈ.)
೧೪೦/
ಹೊಯ್ದೆಬ್ಬಿಸಿ ದೇವನ ಪುಸಿಮುಸುಕನೊಯ್ಯನೋಸರಿಸಿ, ಮಾಯೆಯ
ಜವನಿಕೆಯಂ ತೆಗೆದಂತೆ ದೇವನ ಚೋಹವಳಿದು ದಶಭುಜಂ ಪಂಚವದನ
ತ್ರಿಣೇತ್ರನಾಗಿರೆ ಮಾಯಿದೇವಿಯರು ನೋಡಲಮ್ಮದೆ ನಡನಡುನಡುಗಿ,
ಬಸವ ಬಸವಾ ಜಂಗಮದೇವರು ಸಂಗಮದೇವರಾದರೆನೆ; ತಾಯೆ ತಾಯೆ
ಮುನ್ನ ವಾರೆಂದು ಕೊಟ್ಟೆನೆಂದು ನುಡಿವಲ್ಲಿಂ ಮುನ್ನವೆ ಸಂಗಮೇಶ್ವರಂ
ಬಸವನ ಚಿತ್ರಮಂ ಪರೀಕ್ಷಿಸಲಾಗಿದೆ ಸೋಲು ಬೇಗದಿಂದಂತರ್ಧಾ
ನಕ್ಕೆ ಸಂದುದಂ ಮಾಯಿದೇವಿಯರು ಕಂಡು ಕದಮಂ ತೆಗೆದು ಬಸವ
ರಾಜಂಗೆ ವೇಳೆ ; ಕೇಳು ಅನುತಾಪದೊಳೊಂದಿ ದೇವನಂ ಮೂದಲಿಸಿ
-ಎಲೆಲೆ, ಕಾಡಿ ಕಾಡಲಮ್ಮದ ತಂದೆ, ನೀಂ ಕೇಳು, ಬೇಡಿ ಬೇಡ
ಲಮ್ಮದ ಹಂದೆ, ನೀ ಕೇಳು ಕೂಡಿ ಕೂಡಲಮ್ಮದ ಚಾತಿಯೇ, ನೀಂ
ಕೇಳು-ಎಂದು ಗೀತಮಂ ಪಾಡಿ ನಿರೋಧದೊಳಿರಲು; ಇತ್ತಲು ಪೂರ್ವ
ದಿಶಾಮುಖದೊಳರುಣೋದಯವಾಗುತ್ತಮಿರೆಯಿರೆ ||
1 ತನೇ (ಘ), ಲಿ (ಗು) ;
+ ಇಲ್ಲಿಗೆ ಕ. ಪ್ರತಿ ನಿಂತುಹೋಗಿದೆ.