ಕರ್ಮವನು ಕಳೆದು ನಿರ್ವಯಲಾದೆನು ||
ಅಷ್ಟದಳ ಮಂಟಪದ ಅಷ್ಟ ಕೊನೆಗೊಳಳಗೆ
ಅಷ್ಟಲಿಂಗಾರ್ಚನೆಯಾ ಅಷ್ಟ ಪೂಜೆ
ಅಷ್ಟಲಿಂಗಾರ್ಪಿತವು ದೃಷ್ಟ ಪ್ರಸಾದದಿಂ
ನಿಷ್ಠೆ ನಿಜದಲ್ಲಿ ನಿರಂಜನವ ಕಂಡೆನು
ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು ಕಳೆದು ನಿರ್ವಯಲಾದೆನು ||
ಆರು ನೆಲೆ ಮಂಟಪದ ಮೂರು ಕೋಣೆಗಳೊಳಗೆ
ಬೇರೊಂದು ಸ್ಥಾನದಲಿ ಲಿಂಗವಿಹುದು
ಆರು ನೆಲೆಯನು ಮೀರಿ ಮೂರು ಬಾಗಿಲು ಮುಚ್ಚಿ
ಮೀರಿ ಕಂಡೆನು ಮಹಾಘನ ಲಿಂಗವ
ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು ಕಳೆದು ನಿರ್ವಯಲಾದೆನು ||
ಆಕಾಶದಾ ಮೇಲೆ ನಿರಂತರ ಸ್ಥಾನದಲಿ
ಲೋಕವನು ಹೊದ್ದರಾ ಶಿವ ನಿಲಯವು
ಏಕಾಂತ ವಾಸದೊಳೇಕೀತರನ ಪೂಜೆ
ಓಂಕಾರ ಮಂತ್ರದಲಿ ಗೋಪ್ಯ ಗೋಪ್ಯಮ್
ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು ಕಳೆದು ನಿರ್ವಯಲಾದೆನು ||
ಚಂದ್ರ ಸೂತ್ರದ ತೆರದಿ ನಿರಂತರಮ್ ನಿಜವಿಡಿದು
ಮಂತ್ರ ಭೇಧವನರಿದು ಸಂತೈಸುತ
ನಿಶ್ಚಿಂತ ನಿರ್ಜಾತ ನಿರ್ವಯಲ ಮೀರಿದ
ಮಹಾಂತ ಕೂಡಲಚನ್ನಸಂಗಯ್ಯನು
ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು ಕಳೆದು ನಿರ್ವಯಲಾದೆನು ||
......................ಚನ್ನಬಸವಣ್ಣ
|
ಸಂಗೀತ ಮತ್ತು ಗಾಯನ : ಕಸ್ತೂರಿ ಶಂಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ