ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನವು,
ಮನ ಘನವನರಿಯದು, ಘನ ಮನವನರಿಯದು
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲಾ ಒಂದು ಮಾತಿನೊಳಗು
...... ಅಲ್ಲಮ ಪ್ರಭು
ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನವು,
ಮನ ಘನವನರಿಯದು, ಘನ ಮನವನರಿಯದು
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲಾ ಒಂದು ಮಾತಿನೊಳಗು
...... ಅಲ್ಲಮ ಪ್ರಭು
ತಾನೆ ಶಿವಪ್ರಣವ, ತಾನೆ ಶಕ್ತಿಪ್ರಣವ,ತಾನೆ ಶಿವಶಕ್ತಿರಹಿತವಾಗಿಹ ಮಹಾಪ್ರಣವ ನೋಡಾ.ತಾನೆ ಆದಿ ಪ್ರಣವ, ತಾನೆ ಅನಾದಿ ಪ್ರಣವ,ತಾನೆ ಕಲಾಪ್ರಣವ ನೋಡಾ.ತಾನೆ ಅವಾಚ್ಯ ಪ್ರಣವ, ತಾನೆ ನಿರಂಜನ ಪ್ರಣವ,ತಾನೆ ನಿರಾಮಯ ಪ್ರಣವ ನೋಡಾ.ತನ್ನಿಂದಧಿಕವಾದ ಪ್ರಣವವೊಂದಿಲ್ಲವಾಗಿತಾನೇ ನಿರಂಜನಾತೀತ ಪ್ರಣವ ನೋಡಾ,ಅಪ್ರಮಾಣ ಕೂಡಲಸಂಗಮದೇವ.ಸ್ವಯಾನುಸಿದ್ಧಿಸ್ಥಲ ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ.
............
ಅಕಾರವೆಂಬೆನೆ ಉಕಾರವಾಗಿಹುದುಉಕಾರವೆಂಬೆನೆ ಮಕಾರವಾಗಿಹುದು ನೋಡಾ.ಮಕಾರವೆಂಬೆನೆ ಓಂಕಾರವಾಗಿಹುದುಓಂಕಾರವೆಂಬೆನೆ ಅಚಲವಪ್ಪ ನಿರಾಳವಾಗಿಹುದು ನೋಡಾ.ನಿರಾಳವೆಂಬೆನೆ ನಿರಂಜನವಾಗಿಹುದುನಿರಂಜನವೆಂಬೆನೆ ನಿರಾಮಯವಾಗಿಹುದು ನೋಡಾ.ನಿರಾಮಯವೆಂಬೆನೆ ನಿರಾಮಯಾತೀತವಾಗಿಹುದು
ನಿರಾಮಯಾತೀತವೆಂಬೆನೆ ನಿರಾಮಯಾತೀತಕತ್ತತ್ತವಾಗಿಹುದು ನೋಡಾ,ಅಪ್ರಮಾಣ ಕೂಡಲಸಂಗಮದೇವ.೪೩೭
................
ನಿರಾಳ ಅಷ್ಟದಳ ಕಮಲದೊಳು ನಿರಂಜನ ಚೌಕಮಧ್ಯ ನಾಲ್ಕೆಸಳ ನೋಡಾ,ಅದರ ಬೀಜಾಕ್ಷರ ಭೇದವನಾರು ಬಲ್ಲರು?ನಿರಂಜನ ಪ್ರಣವ ಅವಾಚ್ಯ ಪ್ರಣವ ಕಲಾ ಪ್ರಣವ ಅನಾದಿ ಪ್ರಣವಅಕಾರ ಪ್ರಣವ ಉಕಾರ ಪ್ರಣವ ಮಕಾರ ಪ್ರಣವ ಆದಿ ಪ್ರಣವಅಖಂಡ ಗೋಳಕಾಕಾರ ಪ್ರಣವ ಜ್ಯೋತಿ ಪ್ರಣವ ಮಹಾಜ್ಯೋತಿ ಪ್ರಣವಅಖಂಡ ಮಹಾಜ್ಯೋತಿ ಪ್ರಣವ ನಿರಾಳ ಅಷ್ಟದಳ ಕಮಲನಿರಂಜನ ಚೌಕಮಧ್ಯದ ಬೀಜಾಕ್ಷರದ ಭೇದವ ನಿಜಲಿಂಗೈಕ್ಯರು ಬಲ್ಲರಲ್ಲದೆಮಿಕ್ಕಿನ ವೇಷಧಾರಿಗಳೆತ್ತ ಬಲ್ಲರಯ್ಯ,ಅಪ್ರಮಾಣ ಕೂಡಲಸಂಗಮದೇವ.
........ಶರಣ ಬಾಲಸಂಗಯ್ಯ