ಪ್ರಣವ ನನಗೆ ತುಂಬಾ ಇಷ್ಟವಾಗುವ ಹೆಸರು. ಅಲ್ಲದೆ ವಚನಗಳೂ ಕೂಡ. ಸುಮ್ಮನೆ ಪ್ರಣವದ ಬಗ್ಗೆ ವಚನಗಳು ಏನು ಮಾತಾಡುತ್ತವೆ ಅಂತ ಗೂಗಲಿಸಿದಾಗ ನನಗೆ ಕಂಡ ಕೆಲ ವಚನಗಳು. ಇವು ಇಂಟರ್ನೆಟ್ ನಲ್ಲಿ ಸಿಕ್ಕ ಕೆಲವಷ್ಟೇ. ಮುಂದೆ ಸಿಕ್ಕಿದರೆ ಸೇರಿಸುತ್ತೇನೆ.
೧.
ಪ್ರಣವಾರೂಢನು ಪ್ರಣವ ಸ್ವರೂಪನು ಪ್ರಕೃತಿ ಸೌಂಜ್ಞನು ಷಢಂಗ ಸಮರಸ ನಮ್ಮ ಕೂಡಲಸಂಗಮ ದೇವ
೨.
ಪ್ರಣವವನುಚ್ಚರಿಸುವ ಅಪ್ರಾಮಾಣಿಕರೆಲ್ಲರೂ
ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು
ಪ್ರಣವ ಓಂ ನಮಃ ಶಿವಾಯ ಪ್ರಣವ ಓಂ ನಮಃ ಶಿವಾಯ
ಪ್ರಣವ ಓಂ ನಮಃ ಶಿವಾಯ ಎಂದುವು ಶ್ರುತಿಗಳೆಲ್ಲಾ
ಪ್ರಣವ ಓಂ ಭರ್ಗೋ ದೇವ ಎಂದುವು ಶ್ರುತಿಗಳೆಲ್ಲಾ
ಕೂಡಲಸಂಗನನರಿಯದ ದ್ವಿಜರೆಲ್ಲಾ ಭ್ರಮಿತರು
೩.
ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ
ಸೋಹಂ ಸೋಹಂ ಎಂದೆನುತ್ತಿದ್ದಿತ್ತು
ಕೋಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ
ಯತೋ ವಾಚೋ ನಿವರ್ತಂತೆ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ
ಇಂತೆಂದುದಾಗಿ
ಅಗಮ್ಯ ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ
೪.
ಪೃಥ್ವೀ ಅಪ್ಪು ತೇಜ ವಾಯು ಆಕಾಶ ನಿರಂಜನದೇವಾ
ನಿಮ್ಮ ಮಹಿಮೆಯ ಪ್ರಣವಸ್ವರೂಪಂಗಲ್ಲದೆ
ಕಾಣಲಾರಿಗೆಯೂ ಬಾರದಯ್ಯಾ
ಜ್ಞಾನ ಜ್ಯೋತಿ ಧ್ಯಾನದಿಂದ ನಾಳಶುದ್ಧದ್ವಾರನಾಗಿ
ಆರಾಧಿಸಿ ಕಂಡೆ ನಮ್ಮ ಕೂಡಲಸಂಗಮದೇವನ
೫.
ಅಣು ರೇಣು ಮಧ್ಯದ ಪ್ರಣವದಾಧಾರ
ಭುವನಾಧೀಶನೊಬ್ಬನೆಯಯ್ಯಾ.
ಇದೆ ಪರಿಪೂರ್ಣ ವೆಂದೆನ್ನದನ್ಯದೈವವ ಸ್ಮರಿಸುವ
ಭವಿಯನೆಂತು ಭಕ್ತನೆಂಬೆನೈ ರಾಮನಾಥ ?
........................................ಜೇಡರ ದಾಸಿಮಯ್ಯ