ಶನಿವಾರ, ಡಿಸೆಂಬರ್ 26, 2009

ನಿರ್ವಯಲಾದೆನು!

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

ಅಷ್ಟದಳ ಮಂಟಪದ ಅಷ್ಟ ಕೊನೆಗೊಳಳಗೆ
ಅಷ್ಟಲಿಂಗಾರ್ಚನೆಯಾ ಅಷ್ಟ ಪೂಜೆ
ಅಷ್ಟಲಿಂಗಾರ್ಪಿತವು ದೃಷ್ಟ ಪ್ರಸಾದದಿಂ
ನಿಷ್ಠೆ ನಿಜದಲ್ಲಿ ನಿರಂಜನವ ಕಂಡೆನು

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||


ಆರು ನೆಲೆ ಮಂಟಪದ ಮೂರು ಕೋಣೆಗಳೊಳಗೆ
ಬೇರೊಂದು ಸ್ಥಾನದಲಿ ಲಿಂಗವಿಹುದು
ಆರು ನೆಲೆಯನು ಮೀರಿ ಮೂರು ಬಾಗಿಲು ಮುಚ್ಚಿ
ಮೀರಿ ಕಂಡೆನು ಮಹಾಘನ ಲಿಂಗವ 

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||


ಆಕಾಶದಾ  ಮೇಲೆ ನಿರಂತರ ಸ್ಥಾನದಲಿ
ಲೋಕವನು ಹೊದ್ದರಾ ಶಿವ ನಿಲಯವು    
ಏಕಾಂತ ವಾಸದೊಳೇಕೀತರನ ಪೂಜೆ
ಓಂಕಾರ ಮಂತ್ರದಲಿ ಗೋಪ್ಯ ಗೋಪ್ಯಮ್

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

ಚಂದ್ರ ಸೂತ್ರದ ತೆರದಿ ನಿರಂತರಮ್  ನಿಜವಿಡಿದು
ಮಂತ್ರ ಭೇಧವನರಿದು ಸಂತೈಸುತ 
ನಿಶ್ಚಿಂತ ನಿರ್ಜಾತ ನಿರ್ವಯಲ ಮೀರಿದ
ಮಹಾಂತ ಕೂಡಲಚನ್ನಸಂಗಯ್ಯನು 

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

                              ......................ಚನ್ನಬಸವಣ್ಣ



Get this widget
|
Track details
|
eSnips Social DNA


ಸಂಗೀತ ಮತ್ತು ಗಾಯನ : ಕಸ್ತೂರಿ ಶಂಕರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ