ಮಂಗಳವಾರ, ನವೆಂಬರ್ 24, 2009

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ!

ನನಗೆ ಇದುವರಗೆ ತುಂಬ ಇಷ್ಟವಾದ ಸಾಹಿತ್ಯದಲ್ಲಿ ಭಾವಗೀತೆಗಳಿಗೆ ಬಹು ಮುಖ್ಯ ಜಾಗವಿದೆ.

ನನ್ನ ಇಷ್ಟದ 'ಕೆಲ' ಭಾವಗೀತೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ... ..ಕುವೆಂಪು.



baa illi sambavisu...

ಸಾಹಿತ್ಯ :: 

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ..
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿಹೇ ಭವ ವಿದೂರಾ

ನಿತ್ಯವೂ ಅವತರಿಪ ಸತ್ಯಾವತಾರಾ 
ನಿತ್ಯವೂ ಅವತರಿಪ ಸತ್ಯಾವತಾರಾ

|| ಬಾ ಇಲ್ಲಿ ||

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದೆನ್ನಾ  ನರ ರೂಪ ಚೇತನದೀ...
ಮೂಡಿ ಬಂದೆನ್ನಾ ನರ ರೂಪ ಚೇತನದಿ
ನಾರಾಯಣತ್ವಕ್ಕೆ  ದಾರಿ ತೋರ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ

ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ ,
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ,

ಅವತರಿಸು ಬಾ...
ಅವತರಿಸು ಬಾ...

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ


|| ಬಾ ಇಲ್ಲಿ ||

|| ಬಾ ಇಲ್ಲಿ ||
..
ನನಗೆ ತುಂಬಾ ಇಷ್ಟವಾದ ಇನ್ನೂ ಕೆಲವು ಭಾವಗೀತೆಗಳು ಈ ಕೆಳಗಿನವು.
ಮುಂದೆ ಅವುಗಳನ್ನು ಕೇಳಿಸುತ್ತೇನೆ.

>ಆನಂದಮಯ ಈ ಜಗ ಹೃದಯ... ಕುವೆಂಪು
>ಬಾ ಫಾಲ್ಗುಣ ರವಿ ದರ್ಶನಕೆ.. ಕುವೆಂಪು
>ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು..
>ತನುವು ನಿನ್ನದು ಮನವು ನಿನ್ನದು ..
>ಗಿಳಿಯು ಪಂಜರದೊಳಿಲ್ಲ..
>ಹಾಲು ಹಳ್ಳ ಹರಿಯಲೀ
ಇನ್ನೂ ....
ಇವುಗಳನ್ನು ಅದೆಷ್ಟು ಬಾರಿ ಕೇಳಿದ್ದೇನೋ ನನಗೆ ಗೊತ್ತಿಲ್ಲ.

ಎಲ್ಲೊ ಹುಡುಕಿದೆ ಇಲ್ಲದ ದೇವರ, ಯಾವ ಮೋಹನ ಮುರುಳಿ ಕರೆಯಿತೋ ...ಕೆಲವು ಹಾಡುಗಾರರು ಹಾಡಿರುವುದು ಮಾತ್ರ ಇಷ್ಟ ಆಗುತ್ತೆ.

ಒಂದೊಂದರ ಬಗ್ಗೆ ಯೂ ಉದ್ದಕ್ಕೆ ಬರೀಬೇಕು ಅಂತ ಆಸೆ. ಸಮಯವಿಲ್ಲ.

ಆಗಾಗ್ಗೆ ಸಿಕ್ಕ ಇವುಗಳ ಲಿಂಕ್ ಇಲ್ಲಿ ಸೇರ್ಸುತ್ತೇನೆ.

1 ಕಾಮೆಂಟ್‌:

  1. ವಾಹ್!!! ಎಂತಹ ಸಾಲುಗಳು ತುಂಬಾ ತುಂಬಾ ಧನ್ಯವಾದಗಳು ಬಾ ಇಲ್ಲಿ ಸಂಭವಿಸು... ಇದು ನನಗೂ ಅತಿ ಅಚ್ಚು ಮೆಚ್ಚಿನ ಹಾಡು ಅದರಲ್ಲೂ ಸಿ.ಅಶ್ವಥ್ ಅವರ ಧ್ವನಿಯಲ್ಲಿ ಕೇಳುವುದೆಂದರೆ ಬಲು ಇಷ್ಟ.
    ನೀವು ತಿಳಿಸಿದ ಹಲವು ಗೀತೆಗಳಲ್ಲಿ ನಮಗೂ ಇಷ್ಟವಾದವು ಇವೆ. ಕಾಯುತ್ತಲಿರುತ್ತೇವೆ, ಸಾಹಿತ್ಯ ಹಾಗೂ ಧ್ವನಿಸುರುಳಿ ಕಳಿಸಿ ನಾವು ಕೇಳುವಂತೆ ಮಾಡಿ

    ಪ್ರತ್ಯುತ್ತರಅಳಿಸಿ